ನೇರವಾಗಿ ಮೈದಾನಕ್ಕೆ ಬೋರ್ಡ್ ಹಿಡಿದು ಬಂದು ಅಭಿಮಾನಿ, ವಿಶ್ವಕಪ್ ಗೆ ಟಿ 20 ತಂಡದಲ್ಲಿ ಇವರೆಲ್ಲರಿಗೂ ಸ್ಥಾನ ನೀಡಿ ಎಂದು ಆಯ್ಕೆ ಮಾಡಿದ್ದು ಯಾರ್ಯಾರನ್ನು ಗೊತ್ತೇ??

ನೇರವಾಗಿ ಮೈದಾನಕ್ಕೆ ಬೋರ್ಡ್ ಹಿಡಿದು ಬಂದು ಅಭಿಮಾನಿ, ವಿಶ್ವಕಪ್ ಗೆ ಟಿ 20 ತಂಡದಲ್ಲಿ ಇವರೆಲ್ಲರಿಗೂ ಸ್ಥಾನ ನೀಡಿ ಎಂದು ಆಯ್ಕೆ ಮಾಡಿದ್ದು ಯಾರ್ಯಾರನ್ನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಎಂದರೇ ಭಾವನೆಗಳ ಮಿಶ್ರಣ. ಇಲ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲದೇ ಒಮ್ಮೊಮ್ಮೆ ಅಭಿಮಾನಿಗಳ ಅತಿರೇಕದ ವರ್ತನೆಯೊಂದಿಗೆ ಭಾವನಾತ್ಮಕ ಹಾಗೂ ವಿವಾದಾತ್ಮಕ ಬೆಳವಣಿಗೆಗಳು ಸಹ ನಡೆಯುತ್ತವೆ. ಅದೇ ರೀತಿ ಮೊನ್ನೆ ಐಪಿಎಲ್ ಪಂದ್ಯ ನಡೆಯುವಾಗ ಸಹ ಒಂದು ಘಟನೆ ನಡೆಯಿತು. ಈ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ಗೆ ಅಭಿಮಾನಿಯೊಬ್ಬ ಸಂಭವನೀಯ ಭಾರತ ತಂಡದಲ್ಲಿ ಈ ಹದಿನೈದು ಆಟಗಾರರು ಸ್ಥಾನ ಪಡೆಯಬೇಕು ಎಂಬ ಬ್ಯಾನರ್ ಹಿಡಿದುಕೊಂಡು ಬಂದಿದ್ದ. ಆ ಬ್ಯಾನರ್ ನೋಡಿದ ವೀಕ್ಷಕ ವಿವರಣೆಗಾರರು ಇವರ ಆಯ್ಕೆ ಸರಿಯಿದೆ ಎಂದು ಹೇಳಿದರು. ಬನ್ನಿ ಆ ತಂಡದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

ಈ ತಂಡದ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಸ್ಥಾನ ಪಡೆದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್, ಐದನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ಆರನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಏಳನೇ ಕ್ರಮಾಂಕದಲ್ಲಿ ಆರ್.ಅಶ್ವಿನ್, ಎಂಟನೇ ಕ್ರಮಾಂಕದಲ್ಲಿ ಯುಜವೇಂದ್ರ ಚಾಹಲ್, ಒಂಬತ್ತನೇ ಕ್ರಮಾಂಕದಲ್ಲಿ ದೀಪಕ್ ಚಾಹರ್, ಹತ್ತನೇ ಕ್ರಮಾಂಕದಲ್ಲಿ ಮೊಹಮ್ಮದ್ ಶಮಿ ಹಾಗೂ ಹನ್ನೊಂದನೇ ಕ್ರಮಾಂಕದಲ್ಲಿ ವೇಗಿ ಜಸಪ್ರಿತ್ ಬುಮ್ರಾ ಸ್ಥಾನ ಪಡೆದಿದ್ದಾರೆ.

ಇನ್ನು ಮೀಸಲು ಆಟಗಾರರಾಗಿ ಮೊಹಮದ್ ಸಿರಾಜ್, ರಾಹುಲ್ ತೆವಾಟಿಯಾ, ರಿಷಭ್ ಪಂತ್ ಹಾಗೂ ಪ್ರಸಿದ್ಧ ಕೃಷ್ಣ ಸ್ಥಾನ ಪಡೆಯುವ ಮೂಲಕ ಒಟ್ಟು ಹದಿನೈದು ಆಟಗಾರರು ತಂಡವಾಗಿದೆ. ಆಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ಎಡಗೈ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಸ್ಥಾನ ಪಡೆದಿಲ್ಲ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

ತಂಡ ಇಂತಿದೆ – ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್,ಆರ್.ಅಶ್ವಿನ್,ಯುಜವೇಂದ್ರ ಚಾಹಲ್, ದೀಪಕ್ ಚಾಹರ್, ಮಹಮದ್ ಶಮಿ, ಜಸಪ್ರಿತ್ ಬುಮ್ರಾ, ರಾಹುಲ್ ತೆವಾಟಿಯಾ, ರಿಷಭ್ ಪಂತ್, ಮಹಮದ್ ಸಿರಾಜ್, ಪ್ರಸಿದ್ಧ ಕೃಷ್ಣ.