ಗುಜರಾತ್ ತಂಡ ಪ್ಲೇ ಆಫ್ ಗೆ ಹೋದರೂ ಕೂಡ ಹಾರ್ಧಿಕ್ ರವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡ ಭಾರತ ತಂಡದ ಫ್ಯಾನ್ಸ್. ಯಾಕೆ ಗೊತ್ತೇ??

ಗುಜರಾತ್ ತಂಡ ಪ್ಲೇ ಆಫ್ ಗೆ ಹೋದರೂ ಕೂಡ ಹಾರ್ಧಿಕ್ ರವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡ ಭಾರತ ತಂಡದ ಫ್ಯಾನ್ಸ್. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಟಾಟಾ ಐಪಿಎಲ್ 2022 ರಲ್ಲಿ ಕಂಬ್ಯಾಕ್ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ರವರು ತಮ್ಮ ಮೌಲ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ರವರು ಈಗಾಗಲೆ ತಂಡವನ್ನು ಪ್ಲೇಆಫ್ ಗೆ ಮೊದಲನೇ ತಂಡವನ್ನಾಗಿ ಮುನ್ನಡೆಸಿರುವ ಹಿರಿಮೆಗೆ ಪಾತ್ರರಾಗಿದ್ದಾರೆ. ಹೌದು ಗೆಳೆಯರೆ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ರವರು ಈಗಾಗಲೇ ಆಡಿರುವ 11 ಪಂದ್ಯಗಳಲ್ಲಿ 9 ಮ್ಯಾಚುಗಳಲ್ಲಿ ಗೆದ್ದು ಎರಡು ಪಂದ್ಯಗಳಲ್ಲಿ ಸೋತು 18 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನಕ್ಕೆ ಏರುವಂತೆ ಮಾಡಿದ್ದಾರೆ.

ಇನ್ನು ಕೇವಲ ತಂಡದ ಪ್ರದರ್ಶನ ಮಾತ್ರವಲ್ಲದೆ ಇಂಜುರಿ ಯಿಂದ ನೇರವಾಗಿ ಐಪಿಎಲ್ ಗೆ ಮರಳಿದ ಹಾರ್ದಿಕ್ ಪಾಂಡ್ಯ ರವರ ಬ್ಯಾಟಿಂಗ್ ಪ್ರದರ್ಶನವು ಕೂಡ ಒಟ್ಟಾರೆಯಾಗಿ ಸಮಾಧಾನಕರವಾಗಿದೆ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ಹಾರ್ದಿಕ್ ಪಾಂಡ್ಯ ರವರು ಇಲ್ಲಿಯವರೆಗೆ 11 ಪಂದ್ಯಗಳ ಮೂಲಕ 344 ರನ್ನುಗಳನ್ನು ಬಾರಿಸಿದ್ದಾರೆ. ಒಟ್ಟಾರೆಯಾಗಿ ಇದು ಸಮಾಧಾನಕರ ಬ್ಯಾಟಿಂಗ್ ಪ್ರದರ್ಶನ ಎಂದು ಹೇಳಬಹುದಾಗಿದೆ ಆದರೆ ಈಗ ಅಭಿಮಾನಿಗಳು ಕೂಡ ಇವರ ವಿರುದ್ಧವಾಗಿ ಅಸಮಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಇದು ಪರೋಕ್ಷವಾಗಿ ಹಾರ್ದಿಕ್ ಪಾಂಡ್ಯ ರವರ ಮೇಲೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುವಂತೆ ಮಾಡಿದೆ.

ಹೌದು ಗೆಳೆಯರೇ ಯಾಕೆಂದರೆ ಹಾರ್ದಿಕ್ ಪಾಂಡ್ಯ ರವರು ಕಳೆದ ಐದು ಪಂದ್ಯಗಳಿಂದ ಸ್ಕೋರ್ ಮಾಡಿರುವ ರನ್ನುಗಳೆಂದರೆ 10 3 1 23 ಹಾಗೂ 11 ರನ್ನುಗಳು. ಹೀಗಾಗಿ ಇದು ಮುಂದಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ರವರು ಭಾರತದ ಟಿ ಟ್ವೆಂಟಿ ವರ್ಲ್ಡ್ ಕಪ್ ತಂಡದಲ್ಲಿ ಸ್ಥಾನ ಪಡೆಯಲು ಇಷ್ಟೊಂದು ಸರ್ಕಸ್ ಮಾಡುತ್ತಿದ್ದಾರೆ ಇದೇ ರೀತಿ ಅವರು ಭಾರತೀಯ ತಂಡದಲ್ಲಿ ಕೂಡ ಪ್ರದರ್ಶನವನ್ನು ನೀಡಿದರೆ ಆಗ ತಂಡ ಸೋಲು ಬೇಕಾದಂತಹ ಪರಿಸ್ಥಿತಿ ಬರುತ್ತದೆ ಯಾಕೆಂದರೆ ಹಾರ್ದಿಕ್ ಪಾಂಡ್ಯ ರವರಿಗೆ ಫಿನಿಶರ್ ಜವಾಬ್ದಾರಿಯನ್ನು ನೀಡಲಾಗುತ್ತದೆ. ಕೊನೆಯಲ್ಲಿ ಬ್ಯಾಟಿಂಗಿಗಿಳಿದು ಜವಾಬ್ದಾರಿಯನ್ನು ಪೂರ್ಣಗೊಳಿಸುವ ಸಾಮರ್ಥ್ಯ ಹಾರ್ದಿಕ್ ಪಾಂಡ್ಯ ರವರಿಗೆ ಇರುತ್ತದೆ ಇಲ್ಲವೆ ಎನ್ನುವುದು ಕೂಡ ಇಲ್ಲಿ ಅನುಮಾನವಾಗಿದೆ. ಹೀಗಾಗಿ ವಿಚಾರಕ್ಕಾಗಿ ಹಾರ್ದಿಕ್ ಪಾಂಡ್ಯ ರವರ ಕುರಿತಂತೆ ಅಭಿಮಾನಿಗಳು ಅಸಮಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.