ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಶುರುವಾದ ವಿಶ್ವಕಪ್ ಚರ್ಚೆ: ಭಾರತ ತಂಡಕ್ಕೆ ಈ ಇಬ್ಬರು ಸ್ಪಿನ್ನರ್ ಗಳನ್ನು ಆಯ್ಕೆ ಮಾಡಿ ಎಂದ ಹರ್ಭಜನ್, ಯಾರಂತೆ ಗೊತ್ತೇ??

1,218

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಸೇರಿದಂತೆ ಅನುಭಾವಿಕ ಆಟಗಾರರು ಕೂಡ ದೊಡ್ಡಮಟ್ಟದಲ್ಲಿ ಪ್ರದರ್ಶನವನ್ನು ನೀಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದಿಂದ ಹೊರಬಂದಿದ್ದ ಆಟಗಾರರು ಕೂಡ ಈ ಬಾರಿಯ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ t20 ವರ್ಲ್ಡ್ ಕಪ್ ಇರುವ ಕಾರಣದಿಂದಾಗಿ ಈ ಬಾರಿ ಯಾರನ್ನು ತಂಡದಲ್ಲಿ ಹಾಕಿಕೊಳ್ಳುವುದು ಯಾರನ್ನು ಬಿಡುವುದು ಎನ್ನುವ ಗೊಂದಲ ಈಗಾಗಲೇ ಪ್ರಾರಂಭವಾಗಿದೆ.

ಇದಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡ ಹಲವಾರು ಟಿ-ಟ್ವೆಂಟಿ ಸರಣಿಗಳನ್ನು ಆಡಲಿದ್ದು ಇದರಲ್ಲಿ ಕೂಡ ಯಾರು ವಿಶ್ವಕಪ್ ತಂಡಕ್ಕೆ ಸೂಕ್ತ ಆಗಲಿದ್ದಾರೆ ಎಂಬ ಪ್ರಕಟಣೆ ಹೊರಬರಲಿದೆ. ಈ ಕುರಿತಂತೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವ ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ರವರು ಈ ಇಬ್ಬರು ಆಟಗಾರರನ್ನು ಈ ಬಾರಿಯ ವಿಶ್ವಕಪ್ ನಲ್ಲಿ ಹಾಕಿಕೊಳ್ಳಲೇಬೇಕು ಎನ್ನುವುದಾಗಿ ಅವರ ಪರವಾಗಿ ವಾದಿಸಿದ್ದರು. ಅಷ್ಟಕ್ಕೂ ಆಟಗಾರರು ಯಾರು ಎಂದು ನೋಡುವುದಾದರೆ ಸ್ಪಿನ್ನರ್ ಜೋಡಿ ಗಳಾಗಿರುವ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್. ಹೌದು ಗಳೆರೆ ಇವರಿಬ್ಬರೂ ಕೂಡ ಈ ಬಾರಿ ಐಪಿಎಲ್ ನಲ್ಲಿ ತಮ್ಮ ತಂಡದ ಪರವಾಗಿ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಯಜುವೇಂದ್ರ ಚಹಾಲ್ ರವರು ರಾಜಸ್ತಾನ ರಾಯಲ್ಸ್ ತಂಡದ ಪರವಾಗಿ ಪ್ರಮುಖ ಸ್ಪಿನ್ ಬೌಲರ್ ಆಗಿ ಕಾಣಿಸಿಕೊಂಡಿದ್ದು ಈಗಾಗಲೇ 22 ವಿಕೆಟ್ಗಳ ಒಂದಿಗೆ ಈ ಬಾರಿಯ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಇನ್ನು ಕುಲದೀಪ್ ಯಾದವ್ ರವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ 18 ವಿಕೆಟುಗಳನ್ನು ಪಡೆಯುವ ಮೂಲಕ ಟಾಪ್ ವಿಕೆಟ್ ಟೇಕರ್ ಆಗಿ ಕಾಣಿಸಿಕೊಂಡಿದ್ದಾರೆ. ನಿಜಕ್ಕೂ ಕೂಡ ಈ ಬಾರಿಯ ಐಪಿಎಲ್ ನಲ್ಲಿ ಇವರಿಬ್ಬರು ಸ್ಟಾರ್ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈ ಕುಲ್ಚ ಜೋಡಿಯನ್ನು ಮತ್ತೊಮ್ಮೆ ಭಾರತ ತಂಡಕ್ಕೆ ತಂದರೆ ಇವರಿಬ್ಬರು ಖಂಡಿತವಾಗಿ ಜೊತೆಯಾಗಿ ಸೇರಿ ತಂಡಕ್ಕೆ ಬೇಕಾಗಿರುವ ವಿಕೆಟ್ಗಳನ್ನು ಕ್ಲಪ್ತ ಸಮಯದಲ್ಲಿ ತೆಗೆಯುತ್ತಾರೆ ಎಂಬುದಾಗಿ ಹರ್ಭಜನ್ ಸಿಂಗ್ ರವರು ಇವರ ಪರವಾಗಿ ವಾದಿಸಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.