ಐಪಿಎಲ್ ಗೆ ಕಪ್ಪು ಚುಕ್ಕೆ ಇಟ್ಟ ಕ್ರಿಸ್ ಗೇಲ್, ಈ ಬಾರಿ ಹೊರಗುಳಿಯಲು ಕಾರಣವೇನಂತೆ ಗೊತ್ತೇ?? ಐಪಿಎಲ್ ವಿರುದ್ಧ ಆರೋಪ ಮಾಡಿ ಹೇಳಿದ್ದೇನು ಗೊತ್ತೇ?

ಐಪಿಎಲ್ ಗೆ ಕಪ್ಪು ಚುಕ್ಕೆ ಇಟ್ಟ ಕ್ರಿಸ್ ಗೇಲ್, ಈ ಬಾರಿ ಹೊರಗುಳಿಯಲು ಕಾರಣವೇನಂತೆ ಗೊತ್ತೇ?? ಐಪಿಎಲ್ ವಿರುದ್ಧ ಆರೋಪ ಮಾಡಿ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಐಪಿಎಲ್ ನಲ್ಲಿ ಕ್ರಿಸ್ ಗೇಲ್ ರವರು ಅತ್ಯಂತ ಹೆಚ್ಚು ವೈಯಕ್ತಿಕ ರನ್ ಗಳಿಸಿರುವ ಸಾಧನೆಯನ್ನು ಹೊಂದಿದ್ದಾರೆ. ಅವರನ್ನು ಕ್ರಿಕೆಟ್ ಜಗತ್ತಿನಲ್ಲಿ ಯೂನಿವರ್ಸಲ್ ಬಾಸ್ ಎನ್ನುವುದಾಗಿ ಕರೆಯುತ್ತಾರೆ. ಟಿ ಟ್ವೆಂಟಿ ಫಾರ್ಮೆಟ್ ಕ್ರಿಕೆಟ್ನಲ್ಲಿ ಅವರ ಸಾಧನೆಯನ್ನು ಖಂಡಿತವಾಗಿ ಪ್ರತಿಯೊಬ್ಬರು ಕೂಡ ಮೆಚ್ಚಲೇಬೇಕು. ಟಿ ಟ್ವೆಂಟಿ ಕ್ರಿಕೆಟ್ ಗಾಗಿಯೇ ಅವರ ಜನಿಸಿದ್ದಾರೆ ಎಂದು ಹೇಳುವಷ್ಟರ ಮಟ್ಟಿಗೆ ಈ ಫಾರ್ಮೆಟ್ ಪರ್ಫೆಕ್ಟ್ ಆಗಿದ್ದರು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐಪಿಎಲ್ ನಲ್ಲಿ ಮೊದಲಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಕ್ರಿಸ್ ಗೇಲ್ ಅವರು ಆಡುತ್ತಿದ್ದರು.

ನಂತರ ಹಲವಾರು ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾಯಂ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಹಲವಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇದಾದ ನಂತರ ಅವರು ಕೆಲವು ವರ್ಷಗಳ ಕಾಲ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಐಪಿಎಲ್ನಲ್ಲಿ 142 ಪಂದ್ಯಗಳಲ್ಲಿ ಆರು ಶತಕಗಳ ಸಮೇತ ಬರೋಬ್ಬರಿ 4965 ರನ್ನುಗಳನ್ನು ಬಾರಿಸಿದ್ದಾರೆ. ಅತ್ಯಂತ ಹೆಚ್ಚು ರನ್ನು ಗಳಿಸಿರುವ ಐಪಿಎಲ್ ಆಟಗಾರರಲ್ಲಿ ಕ್ರಿಸ್ ಗೇಲ್ ರವರು ಏಳನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ.

ಇಷ್ಟೆಲ್ಲಾ ಸಾಧನೆಯನ್ನು ಹೊಂದಿರುವ ಕ್ರಿಸ್ ಗೇಲ್ ಅವರು ಈ ಬಾರಿಯ ಮೆಗಾ ಹರಾಜಿನಲ್ಲಿ ತಮ್ಮನ್ನು ಹಿಂದೆ ಸರಿಸಿದರು. ಹೌದು ಗೆಳೆಯರೇ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಕೊನೆಗೂ ಕೂಡ ಕಾರಣವನ್ನು ಹೇಳಿಕೊಂಡಿದ್ದು ಕೊಂಚಮಟ್ಟಿಗೆ ಇದು ಐಪಿಎಲ್ ಅಭಿಮಾನಿಗಳಿಗೆ ಶಾ’ಕಿಂಗ್ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಸಂದರ್ಶನವೊಂದರಲ್ಲಿ ಇದರ ಕುರಿತಂತೆ ಹೇಳಿಕೊಂಡಿರುವ ಕ್ರಿಸ್ ಗೇಲ್ ರವರು ಐಪಿಎಲ್ ನಲ್ಲಿ ನನಗೆ ಸಿಗಬೇಕಾಗಿರುವ ಗೌರವ ಸಿಗಲಿಲ್ಲ, ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಇದೇ ಕಾರಣಕ್ಕಾಗಿ ನಾನು ಐಪಿಎಲ್ ನಿಂದ ಹಿಂದೆಸರಿದೆ ಎಂಬುದಾಗಿ ಹೇಳಿದ್ದಾರೆ. ಐಪಿಎಲ್ ಗಾಗಿ ಸಾಕಷ್ಟು ಶ್ರಮವನ್ನು ವಹಿಸಿದರೆ ಕೂಡ ನಾನು ಸರಿಯಾದ ಗೌರವಕ್ಕೆ ಅರ್ಹನಾಗಲಿಲ್ಲ ಎಂಬುದು ನನಗೆ ಬೇಸರದ ವಿಚಾರವಾಗಿದೆ ಎಂಬುದಾಗಿ ಹೇಳಿದ್ದಾರೆ. ಕ್ರಿಕೆಟ್ ನಂತರದ ಜೀವನ ಇದ್ದೇಇರುತ್ತದೆ ನಾನು ಈಗ ಅದೇ ಜೀವನಕ್ಕೆ ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂಬುದಾಗಿ ಹೇಳಿದ್ದಾರೆ.