ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸಿಂಗಲ್ ಕೊಡುತ್ತೇನೆ ಶತಕ ಬಾರಿಸಿ ಎಂದಿದ್ದಕ್ಕೆ ಕೊನೆಯ ಓವರ್ ನಲ್ಲಿ ವಾರ್ನರ್ ಹೇಳಿದ್ದೇನು ಗೊತ್ತೇ?? ಇದಪ್ಪ ಕ್ರಿಕೆಟ್ ಅಂದ್ರೆ ಎಂದ ನೆಟ್ಟಿಗರು.

4,780

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ನಡುವೆ ನಡೆದ ಪಂದ್ಯ ಬಹಳಷ್ಟು ಬೆಳವಣಿಗೆಗೆ ಸಾಕ್ಷಿಯಾಯಿತು. ಎರಡು ಅಂಕದ ಅಗತ್ಯವಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ತನ್ನ ಪ್ಲೇ ಆಫ್ ಹೋರಾಟವನ್ನು ಜೀವಂತವಾಗಿರಿಸಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ ಇಪ್ಪತ್ತು ಓವರ್ ಗಳಲ್ಲಿ 207 ರನ್ ಗಳಿಸಿದರೇ, ನಂತರ ಬ್ಯಾಟ್ ಗಿಳಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ರಬಲ ಪ್ರತಿರೋಧದ ನಡುವೆಯೂ 23 ರನ್ ಗಳಿಂದ ಸೋಲನ್ನು ಅನುಭವಿಸಿತು. ಈ ನಡುವೆ ಪಂದ್ಯದ ಹೈಲೈಟ್ ಎಂದರೇ ಅದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡೇವಿಡ್ ವಾರ್ನರ್ ಹಾಗೂ ರೋವಮೆನ್ ಪೊವೆಲ್ ರವರ ಸೂಪರ್ ಬ್ಯಾಟಿಂಗ್. ತಮ್ಮ ಮಾಜಿ ತಂಡದ ವಿರುದ್ಧ ಡೇವಿಡ್ ವಾರ್ನರ್ ಅಕ್ಷರಶಃ ಆರ್ಭಟಿಸಿದರು. ಇನ್ನು ಕೊನೆಯ ಐದು ಓವರ್ ಗಳಲ್ಲಿ ವಿಂಡಿಸ್ ನ ದೈತ್ಯ ರೋವಮೆನ್ ಪೋವೆಲ್ ಸಹ ಅದ್ಭುತವಾದ ಆಟದಿಂದ ಗಮನಸೆಳೆದರು.

ಈ ನಡುವೆ ಶತಕದಿಂದ ಡೇವಿಡ್ ವಾರ್ನರ್ 8 ರನ್ ಗಳಿಂದ ವಂಚಿತರಾದರು. ಆದರೇ ಕೊನೆ ಓವರ್ ನಲ್ಲಿ ನಡೆದ ಘಟನೆಯನ್ನು ಪೋವೆಲ್ ಪಂದ್ಯದ ನಂತರ ಬಿಚ್ಚಿಟ್ಟರು. ಶತಕಕ್ಕೆ 8 ರನ್ ಬೇಕಿದ್ದ ಕಾರಣ ನಾನು ವಾರ್ನರ್ ಗೆ ಹೇಳಿದೆ. ಶತಕ ಪೂರೈಸಿಕೊಳ್ಳಿ ಎಂದೇ. ಆದರೇ ವಾರ್ನರ್ ಅದನ್ನು ಪುರಸ್ಕರಿಸಲಿಲ್ಲ. ನಾನು ಬೇಕಾದಷ್ಟು ರನ್ ಹೊಡೆದಿದ್ದೇನೆ, ಈಗ ನಿನ್ನ ಸರದಿ ಎಂದು ಹೇಳಿದರು. ಈ ಮೂಲಕ ಕ್ರೀಡಾ ಸ್ಫೂರ್ತಿ ಮೆರೆದು ಡೆಲ್ಲಿ ಕ್ಯಾಪಿಟಲ್ಸ್ ತಂಡ 200ರ ಗಡಿ ದಾಟುವಂತಾಯಿತಂತೆ. ಸಾಮಾಜಿಕ ಜಾಲತಾಣಗಳಲ್ಲಿ ಡೇವಿಡ್ ವಾರ್ನರ್ ನಡೆ ಬಗ್ಗೆ ವ್ಯಾಪಕ ಶ್ಲಾಘನೆ ನಡೆಯುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ

Get real time updates directly on you device, subscribe now.