ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಗ್ರಾಹಕರನ್ನು ಕಳೆದುಕೊಳ್ಳುತ್ತಿರುವಾದ ಮತ್ತೆ ಸೆಳೆಯಲು ಭರ್ಜರಿ ಆಫರ್ ಬಿಡುಗಡೆಗೊಳಿಸಿದ ಜಿಯೋ, ಕಡಿಮೆ ಬೆಲೆಯ ಪ್ಯಾಕ್ ಗಳು ಹೇಗಿವೆ ಗೊತ್ತೇ??

140

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಸಂಸ್ಥೆಯೆಂದರೆ ಅದು ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆ. ತನ್ನ ಜನಪ್ರಿಯ ಯೋಜನೆಗಳ ಮೂಲಕ ತನ್ನ ಗ್ರಾಹಕರನ್ನು ಮತ್ತಷ್ಟು ಸೆಳೆದುಕೊಳ್ಳುವ ತಂತ್ರಗಾರಿಕೆ ಜಿಯೋ ಸಂಸ್ಥೆಗೆ ತಿಳಿದಿದೆ. ಇನ್ನು ಇತ್ತೀಚಿಗಷ್ಟೇ ಜಿಯೋ ಸಂಸ್ಥೆ ಪರಿಚಯಿಸಿರುವ ಪ್ರಿಪೇಯ್ಡ್ ಪ್ಲಾನ್ ಗಳಲ್ಲಿ ಗ್ರಾಹಕರಿಗೆ ಲಾಭವಾಗುವಂತಹ ಹಲವಾರು ಯೋಜನೆಗಳನ್ನು ಕೂಡ ಪರಿಚಯಿಸಿದೆ. ಅದರಲ್ಲೂ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಅನ್ನು ಉಚಿತ ಚಂದಾದಾರಿಕೆಯ ಮೂಲಕ ಗ್ರಾಹಕರಿಗೆ ನೀಡುತ್ತಿರುವುದು ಮತ್ತೊಂದು ವಿಶೇಷವಾದ ಯೋಜನೆಯಾಗಿದೆ.

ಹಾಗಿದ್ದರೆ ಜಿಯೋ ಸಂಸ್ಥೆ ಪರಿಚಯಿಸಿರುವ ಹೊಸ ರೀಚಾರ್ಜ್ ಪ್ಲಾನ್ ಗಳ ಕುರಿತಂತೆ ಸವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಇತ್ತೀಚಿಗಷ್ಟೇ ಜಿಯೋ ಸಂಸ್ಥೆ 151 333 583 ಹಾಗೂ 783 ರೂಪಾಯಿಗಳ ಹೊಸ ಯೋಜನೆಗಳನ್ನು ಪರಿಚಯಿಸಿದೆ. ಮೊದಲಿಗೆ 151 ರೂಪಾಯಿಗಳ ಯೋಜನೆ ಬಗ್ಗೆ ಹೇಳುವುದಾದರೆ ಇದು 8gb ಇಂಟರ್ನೆಟ್ ಡೇಟಾ ಜೊತೆ ಮೂರು ತಿಂಗಳ ಹಾಟ್ ಸ್ಟಾರ್ ಉಚಿತ ಚಂದಾದಾರಿಕೆಯನ್ನು ನೀಡಲಿದೆ . ಇದಕ್ಕಾಗಿ ಬೇಸಿಕ್ ರೀಚಾರ್ಜ್ ಪ್ಲಾನ್ ಇರಲೇಬೇಕಾಗುತ್ತದೆ. 333 ರೂಪಾಯಿಗಳ ರಿಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಜೊತೆಗೆ ದೈನಂದಿನ 1.5 ಜಿಬಿ ಇಂಟರ್ನೆಟ್ ಡೇಟಾ ಸಿಗಲಿದೆ. ಹಾಗೂ ದೈನಂದಿನ ನೂರು ಮೆಸೇಜ್ ಮತ್ತು ಅನಿಮಿಯತ ಕರೆಗಳು ಕೂಡ ಉಚಿತವಾಗಿ ಸಿಗಲಿದೆ.

ಇದರ ಜೊತೆಗೆ ಜಿಯೋ ಅಪ್ಲಿಕೇಶನ್ಗಳ ಹಾಗೂ ಡಿಸ್ನಿ ಹಾಟ್ ಸ್ಟಾರ್ ನ ಮೂರು ತಿಂಗಳ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ. ಕೊನೆಯದಾಗಿ 583 ಹಾಗೂ 783 ರೂಪಾಯಿಗಳ ಪ್ಲಾನ್ ಕುರಿತಂತೆ ಹೇಳುವುದಾದರೆ 583 ರೂಪಾಯಿಗಳ ಪ್ಲಾನ್ 56 ದಿನಗಳ ವ್ಯಾಲಿಡಿಟಿ ಯನ್ನು ಹೊಂದಿದ್ದರೆ 783 ರೂಪಾಯಿಗಳ ಪ್ಲಾನ್ 84 ರೂಪಾಯಿಗಳ ವ್ಯಾಲಿಡಿಟಿ ಯನ್ನು ಹೊಂದಿರುತ್ತದೆ. ಉಳಿದ ಯೋಜನೆಗಳು ಸಾಮಾನ್ಯವಾಗಿ ಈಗಾಗಲೇ ಮೇಲೆ ಉಲ್ಲೇಖಿಸಿರುವಂತೆ ಸೇಮ್ ಆಗಿರುತ್ತದೆ. ಇದರ ಜೊತೆಗೆ ಅಮೆಜಾನ್ ಪ್ರೈಮ್ ನ ಚಂದಾದಾರಿಕೆಯನ್ನು ನೂರು ರೂಪಾಯಿ ಶುಲ್ಕಗಳೊಂದಿಗೆ ನೀಡಲಾಗುತ್ತದೆ. ಇವರಿಗೂ ಕೂಡ ಡಿಸ್ನಿ ಹಾಟ್ ಸ್ಟಾರ್ ನ ಉಚಿತ ಚಂದಾದಾರಿಕೆ ಸಿಗಲಿದೆ. ನೀವು ಕೂಡ ಜಿಯೋ ಗ್ರಾಹಕರಾಗಿದ್ದರೆ ಯೋಜನೆಗಳನ್ನು ತಪ್ಪದೆ ಆನಂದಿಸಿ.

Get real time updates directly on you device, subscribe now.