ಬದಲಾಗುತ್ತಿದೆ ಲೆಕ್ಕಾಚಾರ, ಚೆನ್ನೈ ಸೋಲಿಸಿರುವ ಆರ್ಸಿಬಿ ಪ್ಲೇಆಫ್ ಗೆ ಹೋಗಬೇಕು ಎಂದರೆ ಇನ್ನೆಷ್ಟು ಪಂದ್ಯ ಗೆಲ್ಲಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿನ್ನೆಯ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲನೇ ಬ್ಯಾಟಿಂಗ್ ಮಾಡಿ ಮುಗಿಸಿದಾಗ ಖಂಡಿತವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸುಲಭವಾಗಿ ಗೆದ್ದು ಕೊಳ್ಳುತ್ತದೆ ಎಂಬುದಾಗಿ ಭಾವಿಸಲಾಗಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ಮನ್ಗಳು ಕಟ್ಟಿ ಹಾಕಿದ ರೀತಿಯನ್ನು ನೋಡಿದರೆ ನಿಜಕ್ಕೂ ಕೂಡ ತಂಡದ ಬೌಲರ್ ಗಳ ಕುರಿತಂತೆ ಪ್ರತಿಯೊಬ್ಬರು ಹೆಮ್ಮೆ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಿನ್ನೆ ನಡೆದಂತಹ ಪಂದ್ಯದಲ್ಲಿ ಒಂದುವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಸೋತಿದ್ದರೆ ಖಂಡಿತವಾಗಿ ಪ್ಲೇ ಆಫ್ ಗೆ ಸೇರ್ಪಡೆ ಆಗುವಂತಹ ಕನಸನ್ನು ಬಿಡಬೇಕಾಗಿತ್ತು. ಯಾಕೆಂದರೆ ಎರಡು ತಂಡಗಳಿಗೂ ಕೂಡ ಇದು ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಮಾಡು ಇಲ್ಲವೇ ಮಡಿ ಎನ್ನುವ ಪಂದ್ಯವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಟು ವಿಕೆಟ್ ಗಳ ನಷ್ಟಕ್ಕೆ 20 ಓವರ್ಗಳಲ್ಲಿ 173 ರನ್ನುಗಳನ್ನು ಬಾರಿಸಿತ್ತು. 174 ರನ್ನುಗಳ ಗುರಿಯನ್ನು ಬೆನ್ನತ್ತಿದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ನುಗಳನ್ನು ಬಾರಿಸಲಷ್ಟೆ ಶಕ್ತವಾಯಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದೆ ಎಂಬುದಾಗಿ ಹೇಳಬಹುದಾಗಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 11 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಐದರಲ್ಲಿ ಸೋತು 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಪಾಯಿಂಟ್ಸ್ ಟೇಬಲ್ ನಲ್ಲಿದೆ.

ಇನ್ನು ತೇರ್ಗಡೆಯಾಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಷ್ಟು ಪಂದ್ಯಗಳನ್ನು ಗೆಲ್ಲುವ ಅವಶ್ಯಕತೆ ಇದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಇರುವಂತಹ ಮೂರು ಪಂದ್ಯಗಳಲ್ಲಿ ಮೂರನ್ನು ಕೂಡ ಗೆದ್ದರೆ ಖಂಡಿತವಾಗಿ ನೇರವಾಗಿ ಪ್ಲೇಆಫ್ ಹಂತಕ್ಕೆ 18 ಅಂಕಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಟ್ರಿ ನೀಡಲಿದೆ. ಒಂದು ವೇಳೆ ಎರಡು ಪಂದ್ಯಗಳನ್ನು ಗೆದ್ದರೂ ಕೂಡ ರನ್ ರೇಟ್ ಜಾಸ್ತಿ ಇದ್ದರೆ ಮಾತ್ರ ಕಂಡಿತವಾಗಿ ಆರ್ಸಿಬಿ ಮುಂದಿನ ಹಂತಕ್ಕೆ ಹೋಗಲಿದೆ. ಅದರ ಆರ್ಸಿಬಿ ಮುಂದಿನ ಎರಡು ಪಂದ್ಯಗಳನ್ನು ಆಡುತ್ತಿರುವುದು ಬಲಿಷ್ಠವಾದ ಸನ್ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ ತಂಡಗಳ ಎದುರು. ಹೀಗಾಗಿ ಪ್ಲೇಆಫ್ ಗೆ ತೇರ್ಗಡೆ ಆಗುವ ಹಾದಿ ಅಷ್ಟೊಂದು ಸುಲಭವಾಗಿಲ್ಲ ಎಂದು ಹೇಳಬಹುದಾಗಿದೆ.