ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಚೆನ್ನೈ ವಿರುದ್ಧ ಸೋತ ಬೆನ್ನಲ್ಲೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ಶಾಕ್, ಪ್ರಮುಖ ಆಟಗಾರ ಔಟ್. ಯಾರು ಗೊತ್ತೇ??

1,172

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಬಾರಿಯ ಟಾಟಾ ಐಪಿಎಲ್ 2022 ಸೀಸನ್ ನಲ್ಲಿ ಬಹುತೇಕ ಎಲ್ಲಾ ತಂಡಗಳು ಕೂಡ ಈಗಾಗಲೇ ತಮ್ಮ ನಿರೀಕ್ಷೆಗೂ ಮೀರಿ ಪ್ರದರ್ಶನವನ್ನು ನೀಡುತ್ತಿವೆ. ಇನ್ನು ಕೆಲವು ತಂಡಗಳು ಈ ಬಾರಿಯ ಲೆಕ್ಕಾಚಾರವನ್ನು ತಲೆಬುಡ ಮಾಡಿದೆ ಎಂದು ಹೇಳಬಹುದಾಗಿದೆ. ಇನ್ನು ನಿನ್ನೆಯ ಪಂದ್ಯವನ್ನು ನೋಡುವುದಾದರೆ ಪಂದ್ಯಕ್ಕೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಬಹುದು ಎಂಬುದಾಗಿ ಅಂದಾಜಿಸಲಾಗಿತ್ತು ಯಾಕೆಂದರೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುತ್ತಾ ಬಂದಿತ್ತು. ಆದರೆ ನಿನ್ನೆ ಆಶ್ಚರ್ಯ ಎಂಬಂತೆ ಸನ್ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋತಿದೆ.

ಅತ್ಯುತ್ತಮ ಬೌಲಿಂಗ್ ಕ್ರಮಾಂಕವನ್ನು ಹೊಂದಿದ್ದರೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಂಪೂರ್ಣವಾಗಿ ವಿಫಲವಾಯಿತು ಎಂದು ಹೇಳಬಹುದಾಗಿದೆ. ಯಾಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ಅಂಡ್ ಸನ್ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ದಾಳಿಯ ಎದುರು ಬರೋಬ್ಬರಿ 20 ಓವರುಗಳಲ್ಲಿ ಕೇವಲ ಎರಡು ವಿಕೆಟ್ ಗಳ ನಷ್ಟಕ್ಕೆ 202 ರನ್ನುಗಳನ್ನು ಬಾರಿಸಿತ್ತು. ಇದನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ ಕೇವಲ 189 ರನ್ನುಗಳನ್ನು ಗಳಿಸಲು ಮಾತ್ರ ಶಕ್ತವಾಯಿತು. ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೇವಲ ಐದು ಪಂದ್ಯಗಳು ಮಾತ್ರ ಉಳಿದಿವೆ. ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ಅದರಲ್ಲಿ ನಾಲ್ಕು ಪಂದ್ಯಗಳನ್ನು ಗೆಲ್ಲಲೇಬೇಕಾದ ಅಂತಹ ಒತ್ತಡದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವಿದೆ.

ಆದರೆ ಸೋತ ಬೆನ್ನಲ್ಲೇ ಇನ್ನೊಂದು ಶಾಕಿಂಗ್ ಸುದ್ದಿ ಕೂಡ ತಂಡಕ್ಕೆ ಬಡಿದಪ್ಪಳಿಸಿದ. ಹೌದು ಗೆಳೆಯರು ತಂಡದ ಪ್ರಮುಖ ಆಲ್-ರೌಂಡರ್ ಆಗಿರುವ ವಾಷಿಂಗ್ಟನ್ ಸುಂದರ್ ಅವರು ಈಗಾಗಲೇ ಕೈ ಇಂಜುರಿ ಯಿಂದಾಗಿ ಪಂದ್ಯದಿಂದ ಹೊರಗಡೆ ಇದ್ದರು. ಆದರೆ ಈಗ ಸನ್ರೈಸರ್ಸ್ ಹೈದರಾಬಾದ್ ತಂಡದ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಕೂಡ ವಾಷಿಂಗ್ಟನ್ ಸುಂದರ್ ರವರು ತಂಡಕ್ಕೆ ಅಲಭ್ಯರಾಗಿರಲಿದ್ದಾರೆ ಎಂಬ ಸುದ್ದಿ ಈಗ ಹೊರಬಂದಿದೆ. ಮುಂದಿನ ಬಹುತೇಕ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಒತ್ತಡದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಇದು ಖಂಡಿತವಾಗಿ ಬ್ಯಾಡ್ ನ್ಯೂಸ್ ಆಗಿದೆ.

Get real time updates directly on you device, subscribe now.