ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭರ್ಜರಿ ಆಟವಾಡಿ ತಂಡವನ್ನು ಗೆಲ್ಲಿಸಿದ ಮೇಲೆ ಆರ್ಸಿಬಿ ನಾಯಕನ ಕುರಿತು ರುತುರಾಜ್ ಮಾತನಾಡಿ ಹೇಳಿದ್ದೇನು ಗೊತ್ತೆ??

69

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆ ಗೊತ್ತಿರುವಂತೆ ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭಿಕ ಆಟಗಾರರ ಮೂಲಕ ದೊಡ್ಡ ಮಟ್ಟದ ದಾಖಲೆಯನ್ನು ಮುರಿದಿದ್ದರು ತಪ್ಪಾಗಲಾರದು. ಹೌದು ಗೆಳೆಯರೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರರು ಮೊದಲ ಮುರಿಯದ ವಿಕೆಟಿಗೆ 182 ರನ್ನುಗಳ ಐತಿಹಾಸಿಕ ಪಾರ್ಟ್ನರ್ಶಿಪ್ ಅನ್ನು ನೀಡಿದರು. ಈ ಕಾರಣದಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿನ್ನೆ ಈ ಬಾರಿಯ ಬಲಿಷ್ಠ ತಂಡಗಳಲ್ಲೊಂದಾದ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗೆಲ್ಲಲು ಸಾಧ್ಯವಾಯಿತು ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ.

ಮಹೇಂದ್ರ ಸಿಂಗ್ ಧೋನಿ ರವರು ಮತ್ತೊಮ್ಮೆ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರುತುರಾಜ್ ಗಾಯಕ್ವಾಡ್ ಹಾಗೂ ದೇವೊನ್ ಕಾನ್ವೆ ರವರ 182 ರನ್ನುಗಳ ಪಾರ್ಟ್ನರ್ಶಿಪ್ ಮೂಲಕ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಬಹುದಾಗಿದೆ. ರುತುರಾಜ ಗಾಯಕ್ವಾಡ್ ರವರು 57 ಎಸೆತಗಳಲ್ಲಿ 6 ಸಿಕ್ಸರ್ 6 ಬೌಂಡರಿ ಸಹಿತ ಬರೋಬ್ಬರಿ 99 ರನ್ ಗಳನ್ನು ಬಾರಿಸಿದ್ದರು. ಕೇವಲ ಒಂದು ರನ್ನುಗಳಿಂದ ಶತಕ ವಂಚಿತರಾದರು. ಇನ್ನು ಇವರಿಗೆ ಮೊದಲ ವಿಕೆಟ್ ನ ದಾಖಲೆಯ ಜೊತೆಯಾಟಕ್ಕೆ ಸಾಥ್ ನೀಡಿದ ದೇವೊನ್ ಕಾನ್ವೆ ರವರು ಬರೋಬ್ಬರಿ 55 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಗಳ ಮೂಲಕ 85 ರನ್ನುಗಳನ್ನು ಬಾರಿಸಿದ್ದರು.

ಇನ್ನು ಇದಕ್ಕೂ ಮುನ್ನ ಡುಪ್ಲೆಸಿಸ್ ಹಾಗೂ ಶೇನ್ ವಾಟ್ಸನ್ ಅವರು ಚೆನ್ನೈ ತಂಡದ ಪರವಾಗಿ ಮೊದಲ ವಿಕೆಟ್ ಜೊತೆಯಾಟಕ್ಕೆ 181 ರನ್ನುಗಳನ್ನು ಬಾರಿಸಿ ದಾಖಲೆಯನ್ನು ಬರೆದಿದ್ದರು ನಿನ್ನೆ ಈ ದಾಖಲೆ ಒಂದು ರನ್ನುಗಳಿಂದ ಮುರಿದುಹೋಯ್ತು. ಪಂದ್ಯಗೆದ್ದ ಬಳಿಕ ಮಾತನಾಡಿದ ರುತುರಾಜ ಗಾಯಕ್ವಾಡ್ ಈ ಕುರಿತಂತೆ ಮಾತನಾಡುತ್ತಾ ಈಗ ಹಾಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿರುವ ಡುಪ್ಲೆಸಿಸ್ ರವರ ಕುರಿತಂತೆ ಮಾತನಾಡುತ್ತಾ ಕಳೆದ ಬಾರಿ ಚೆನ್ನೈ ತಂಡದ ಪರವಾಗಿ ನಾನು ಹಾಗೂ ಡುಪ್ಲೆಸಿಸ್ ರವರು ಬ್ಯಾಟಿಂಗನ್ನು ಆರಂಭಿಸುತ್ತಿದ್ದವು ಆದರೆ ಈ ಬಾರಿ ನಾನು ಹಾಗೂ ದೇವೊನ್ ಕಾನ್ವೆ ಅವರ ದಾಖಲೆಯನ್ನು ಮುರಿದಿರುವುದು ಖಂಡಿತವಾಗಿ ಅವರಿಗೆ ಅಸೂಯೆ ಮೂಡುವಂತೆ ಮಾಡಿರಬಹುದು, ಹೊಟ್ಟೆ ಕಿಚ್ಚು ಪಟ್ಟಿರುತ್ತಾರೆ ಎಂಬುದಾಗಿ ಡುಪ್ಲೆಸಿಸ್ ರವರ ಕಾಲೆಳೆದಿದ್ದಾರೆ.

Get real time updates directly on you device, subscribe now.