ಹ್ಯಾಟ್ರಿಕ್ ಸೋಲಿನ ನಂತರವೂ ಆರ್ಸಿಬಿ ತಂಡ ಪ್ಲೇ ಆಫ್ ಗೆ ಹೋಗಬೇಕು ಎಂದರೆ ಇರುವ ದಾರಿಗಳು ಯಾವ್ಯಾವು ಗೊತ್ತೇ??

ಹ್ಯಾಟ್ರಿಕ್ ಸೋಲಿನ ನಂತರವೂ ಆರ್ಸಿಬಿ ತಂಡ ಪ್ಲೇ ಆಫ್ ಗೆ ಹೋಗಬೇಕು ಎಂದರೆ ಇರುವ ದಾರಿಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಆರಂಭಿಕ ದಿನಗಳಲ್ಲಿ ಸಾಲುಸಾಲು ಗೆಲುವನ್ನು ಕಂಡಂತಹ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಮೂರು ಸತತ ಸೋಲುಗಳಿಂದ ಕಂಗೆಟ್ಟಿದೆ ಎಂದರೆ ತಪ್ಪಾಗಲಾರದು. ನಿಜಕ್ಕೂ ಕೂಡ ಯಾವ ಕಾರಣದಿಂದಾಗಿ ಇಷ್ಟೊಂದು ಸೋಲನ್ನು ಕಾಣುತ್ತಿದೆ ಎಂಬುದಾಗಿ ತಂಡ ಕಂಡುಹಿಡಿಯಲು ಕೂಡ ವಿಫಲವಾಗಿದೆ. ಆದರೆ ಈ ಮೂಲಕ ಪ್ಲೇಆಫ್ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತೇರ್ಗಡೆ ಹೊಂದುವಂತಹ ಕನಸು ಈಗ ಮರೆಯಾಗುವತ್ತ ಹೊರಟಿದೆ ಎಂದರೆ ತಪ್ಪಾಗಲಾರದು.

ಮೊದಲಿಗೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಏಪ್ರಿಲ್ 23ರಂದು 68 ರನ್ ಗಳಲ್ಲಿ ಆಲೌಟ್ ಆಗುವ ಮೂಲಕ ಹೀನಾಯ ಸೋಲಿಗೆ ಒಳಗಾಗಿತ್ತು. ಅದಾದ ನಂತರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಅವಕಾಶವಿದ್ದರೂ ತನ್ನ ಕೈಚೆಲ್ಲಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಇನ್ನು ನಿನ್ನೆ ನಡೆದಂತಹ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲುವ ಮೂಲಕ ಹ್ಯಾಟ್ರಿಕ್ ಸೋಲಿಗೆ ಒಳಗಾಗಿದೆ.

ನಿನ್ನೆ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದು ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ರವರ ಅರ್ಧಶತಕದ ಬೆಂಬಲದಿಂದಾಗಿ ಆರು ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 170 ರನ್ನುಗಳನ್ನು ಕಲೆ ಹಾಕಿ ಗುಜರಾತ್ ಟೈಟನ್ಸ್ ತಂಡಕ್ಕೆ 171 ರನ್ನುಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ದೇವಾಡಿ ರವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೆರವಿನಿಂದಾಗಿ ನಾಲ್ಕು ವಿಕೆಟ್ ಗಳ ನಷ್ಟಕ್ಕೆ 3 ಎಸೆತಗಳು ಬಾಕಿ ಉಳಿದಿರುವಂತೆ ಗುರಿಯನ್ನು ತಲುಪಿ ತಂಡ ಗೆಲ್ಲಲು ಕಾರಣರಾದರು. ಈ ಮೂಲಕ ಈಗ ರಾಜ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಬಹುದಾಗಿದೆ.

ಸದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರಿಸ್ಥಿತಿಯನ್ನು ನೋಡುವುದಾದರೆ ಆಡಿರುವ 10 ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಸೋತು ಐದು ಪಂದ್ಯಗಳಲ್ಲಿ ಗೆದ್ದಿದೆ. 10 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಐದನೇ ಸ್ಥಾನದಲ್ಲಿದೆ. ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿದ ನಾಲ್ಕು ಪಂದ್ಯಗಳಲ್ಲಿ ಕನಿಷ್ಠಪಕ್ಷ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ಉಳಿದಿರುವ ನಾಲ್ಕು ಪಂದ್ಯಗಳನ್ನು ಕೂಡ ಬಲಿಷ್ಠ ತಂಡಗಳು ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಬೇಕಾಗಿದೆ. ಅದರಲ್ಲಿ ಮೂರು ಪಂದ್ಯಗಳನ್ನು ಗೆದ್ದರೂ ಕೂಡ ರನ್ರೇಟ್ ವಿಚಾರದಲ್ಲಿ ಸಾಕಷ್ಟು ಕಾಂಪಿಟೇಶನ್ ಅನ್ನು ಇನ್ನೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಂದಿರುತ್ತದೆ. ಹೀಗಾಗಿ ನಾಲ್ಕರಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವುದಾದರೆ ದೊಡ್ಡಮಟ್ಟದ ಅಂತರದಲ್ಲಿ ಗೆಲ್ಲಬೇಕಾಗುತ್ತದೆ. ಅಥವಾ ಆಡುವಂತಹ ನಾಲ್ಕು ಪಂದ್ಯಗಳಲ್ಲಿ ನಾಲ್ಕನ್ನು ಕೂಡ ಗೆಲ್ಲಬೇಕಾಗುತ್ತದೆ ಹೀಗೆ ಮಾಡಿದರೆ ಮಾತ್ರ ಮುಂದಿನ ಹಂತಕ್ಕೆ ತೇರ್ಗಡೆ ಆಗುವಂತಹ ಅವಕಾಶವಿರುತ್ತದೆ.

ಇನ್ನು ಒಂದುವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂದ ನಾಲ್ಕರಲ್ಲಿ ಎರಡು ಪಂದ್ಯಗಳನ್ನು ಗೆದ್ದರೆ ಹಾಗೂ ಎರಡು ಪಂದ್ಯಗಳನ್ನು ಸೋತರೆ ಪ್ಲೇ ಆಫ್ ಗೆ ತೇರ್ಗಡೆ ಆಗುವಂತಹ ಕನಸನ್ನು ಬಿಟ್ಟುಬಿಡಬೇಕಾಗುತ್ತದೆ. ಈಗಿರುವ ಆಯ್ಕೆಗಳು 2. ಮೊದಲನೆಯದು ದೊಡ್ಡಮಟ್ಟದ ಅಂತರದಲ್ಲಿ ಮೂರು ಪಂದ್ಯಗಳನ್ನು ಆದರೂ ಕೊನೆಪಕ್ಷ ಗೆಲ್ಲುವುದು. ಇಲ್ಲವೇ ಆಡುವಂತಹ ಎಲ್ಲಾ ನಾಲ್ಕು ಪಂದ್ಯಗಳನ್ನು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೀಗಾಗಿ ಮುಂದಿನ ನಾಲ್ಕು ಪಂದ್ಯಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ವರ್ಷದ ಹಣೆಬರಹವನ್ನು ನಿರ್ಧಾರ ಮಾಡುತ್ತದೆ. ಮುಂದಿನ ನಾಲ್ಕು ಪಂದ್ಯಗಳಲ್ಲಿ ಯಾರು ಚಾಲೆಂಜರ್ಸ್ ಬೆಂಗಳೂರು ತಂಡ ಎಷ್ಟರಲ್ಲಿ ಗೆಲ್ಲಬಹುದೆಂಬ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.