ಹೈದರಬಾದ್ ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ರಾಜಸ್ತಾನ ಪಂದ್ಯಕ್ಕೆ ಮಾಸ್ಟರ್ ಪ್ಲಾನ್ ರೂಪಿಸಲು ಮುಂದಾದ ಡುಪ್ಲೆಸಿಸ್. ಬಹು ನಿರೀಕ್ಷಿತ ಬದಲಾವಣೆಗೆ ಮುಂದಾದರೇ ನಾಯಕ??

ಹೈದರಬಾದ್ ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ರಾಜಸ್ತಾನ ಪಂದ್ಯಕ್ಕೆ ಮಾಸ್ಟರ್ ಪ್ಲಾನ್ ರೂಪಿಸಲು ಮುಂದಾದ ಡುಪ್ಲೆಸಿಸ್. ಬಹು ನಿರೀಕ್ಷಿತ ಬದಲಾವಣೆಗೆ ಮುಂದಾದರೇ ನಾಯಕ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಎಲ್ಲಾ ತಂಡಗಳಿಗಿಂತ ಉತ್ತಮವಾಗಿದೆ ಎಂಬುದಾಗಿ ಭಾವಿಸಲಾಗಿತ್ತು. ನಿಜವಾಗಿ ಹೇಳಬೇಕೆಂದರೆ ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ತಂಡವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ತಂಡದಲ್ಲಿರುವ ಕೆಲವೊಂದು ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳದೆ ಇರುವ ಕಾರಣದಿಂದಾಗಿ ಇರುವಂತಹ ಕೊರತೆಗಳು ಈಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.

ಹೌದು ಇದಕ್ಕೆ ಉದಾಹರಣೆ ಎನ್ನುವಂತೆ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದಂತಹ ಪಂದ್ಯ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕೇವಲ 68 ರನ್ನುಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಲೌಟ್ ಆಗಿತ್ತು. ಇದು ನಿಜಕ್ಕೂ ಇಂತಹ ಬಲಿಷ್ಠ ತಂಡಕ್ಕೆ ಒಂದು ಕಪ್ಪುಚುಕ್ಕೆ ಎಂದು ಹೇಳಬಹುದಾಗಿದೆ. ಅದರಲ್ಲೂ ಐಪಿಎಲ್ ನ ದ್ವಿತಿಯಾರ್ಧದ ಮೊದಲ ಪಂದ್ಯದಲ್ಲೇ ಇಂತಹ ದೊಡ್ಡ ಮಟ್ಟದ ಹೀನಾಯ ಸೋಲನ್ನು ಕಂಡಿರುವುದು ತಂಡದ ಮೊರಲ್ ಮಾಡಬಹುದಾಗಿದೆ.

ಇನ್ನು ಈ ಕುರಿತಂತೆ ಮುಂದಿನ ಪಂದ್ಯಗಳಿಂದ ಖಂಡಿತವಾಗಿ ತಂಡದ ನಾಯಕನಾಗಿರುವ ಡುಪ್ಲೆಸಿಸ್ ಅವರು ಮಾಸ್ಟರ್ ಪ್ಲಾನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಸೌತ್ ಆಫ್ರಿಕಾದ ನಾಯಕನಾಗಿ ಯಶಸ್ವಿಯಾಗಿ ತಮ್ಮ ನಾಯಕನ ಜವಾಬ್ದಾರಿಯನ್ನು ಪರಿಪೂರ್ಣ ಗೊಳಿಸಿರುವ ಡುಪ್ಲೆಸಿಸ್ ರವರು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಗರಡಿಯಲ್ಲಿ ಪಳಗಿದವರು. ಹೀಗಾಗಿ ನಾಯಕತ್ವದ ಟಿಪ್ಸ್ ಅನ್ನು ಮಹೇಂದ್ರ ಸಿಂಗ್ ಧೋನಿ ರವರಿಂದ ಕೂಡ ಅವರು ಕಲಿತಿದ್ದಾರೆ ಎಂದು ಹೇಳಬಹುದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವರು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಖಂಡಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸಶಕ್ತರನ್ನಾಗಿ ಮಾಡಲಿದ್ದಾರೆ ಎಂದು ಹೇಳಬಹುದಾಗಿದೆ.

ಅದರಲ್ಲಿ ಮೊದಲಿಗೆ ಆರಂಭಿಕ ಬ್ಯಾಟ್ಸ್ಮನ್ ಆಗಿ ಆಟವಾಡುತ್ತಿರುವ ಯುವ ಉದಯೋನ್ಮುಖ ಆಟಗಾರ ಅನುಜ್ ರಾವತ್ ರವರನ್ನು ತಂಡದಿಂದ ಹೊರಗೆ ಇಡುವಂತಹ ಉಪಾಯವನ್ನು ಮಾಡಬಹುದಾಗಿದೆ. ಯಾಕೆಂದರೆ ಅವರಿಂದಾಗಿ ತಂಡ ಆರಂಭದಲ್ಲಿಯೆ ಮುಗ್ಗರಿಸಿ ಬೀಳುತ್ತಿದೆ ಎಂದು ಹೇಳಬಹುದಾಗಿದೆ. ಒಂದು ಪಂದ್ಯದಲ್ಲಿ ಅರ್ಧಶತಕವನ್ನು ದಾಖಲಿಸಿದ್ದು ಬಿಟ್ಟರೆ ಅನುಜ್ ರಾವತ್ ಇಡೀ ಟೂರ್ನಮೆಂಟಿನಲ್ಲಿ ಹೇಳಿಕೊಳ್ಳುವ ಪ್ರದರ್ಶನವನ್ನು ನೀಡಲಿಲ್ಲ. ಇದು ನಿಜಕ್ಕೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತ್ಯಂತ ತಲೆನೋ’ವಿನ ವಿಚಾರವಾಗಿದೆ ಎಂದು ಹೇಳಬಹುದಾಗಿದೆ.

ಯಾಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೀಮ್ ಮ್ಯಾನೇಜ್ಮೆಂಟ್ ಸೇರಿದಂತೆ ನಾಯಕ ಡುಪ್ಲೆಸಿಸ್ ರವರು ಅನುಜ್ ರಾವತ್ ರವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದರೂ ಕೂಡ ಅದನ್ನು ಅವರು ಸದುಪಯೋಗಪಡಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಮುಂದಿನ ಪಂದ್ಯಗಳಿಂದ ತಂಡದಿಂದ ಹೊರಗಿಡಬೇಕಾಗಿರುವುದು ಈಗ ತಂಡಕ್ಕೆ ಗೆಲ್ಲಲು ಅನಿವಾರ್ಯವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮತ್ತೊಂದು ಸಮಸ್ಯೆಯೇನೆಂದರೆ ಶ್ರೀಲಂಕದ ಆಲ್-ರೌಂಡರ್ ಆಟಗಾರನಾಗಿರುವ ವನಿಂದು ಹಸರಂಗ. ಅವರು ತಂಡದಲ್ಲಿ ಕೇವಲ ಸ್ಪಿನ್ ಬೌಲರ್ ಆಗಿ ಮಾತ್ರವಲ್ಲದೆ ಬ್ಯಾಟ್ಸ್ಮನ್ ಅಂದರೆ ಆಲ್-ರೌಂಡರ್ ಆಗಿ ಕಾರ್ಯನಿರ್ವಹಿಸಬೇಕು. ಬೌಲಿಂಗ್ನಲ್ಲಿ ರನ್ನನ್ನು ಹೆಚ್ಚಾಗಿ ನೀಡುತ್ತಿದ್ದಾರೆ ಮತ್ತು ಬ್ಯಾಟಿಂಗ್ನಲ್ಲಿ ಕೂಡ ಮೊನ್ನೆ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ತಾಳ್ಮೆ ಆಟವನ್ನು ಆಡಬೇಕಾಗಿತ್ತು ಆದರೆ, ಅಲ್ಲಿ ಕೂಡ ಅವರು ವಿಫಲರಾಗಿರುತ್ತಾರೆ.

ಹೀಗಾಗಿ ಡುಪ್ಲೆಸಿಸ್ ರವರು ಮುಂದಿನ ಪಂದ್ಯಗಳಿಂದ ಈ ಎರಡು ಕೊರತೆಯ ವಿಚಾರಗಳ ಕುರಿತಂತೆ ಟೀಮ್ ಮ್ಯಾನೇಜ್ಮೆಂಟ್ ಜೊತೆಗೆ ಚರ್ಚೆ ಮಾಡಿ ಇದಕ್ಕೆ ಸರಿಯಾದಂತಹ ಪರಿಹಾರವನ್ನು ಕಂಡುಹುಡುಕಿ ತಂಡವನ್ನು ಸಶಕ್ತರನ್ನಾಗಿ ಸಜ್ಜುಗೊಳಿಸಿ ಮುಂದಿನ ಪಂದ್ಯಗಳಿಂದ ಗೆಲುವಿನ ಸರಣಿಯನ್ನು ಮುಂದುವರಿಸುತ್ತಾ ಯೋಜನೆ ಮಾಡಲಿದ್ದಾರೆ ಎಂಬುದಾಗಿ ಎಲ್ಲರೂ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.