ಆರ್ಸಿಬಿ ತಂಡಕ್ಕೆ ಮೇಜರ್ ಸರ್ಜರಿ ಮಾಡುವುದು ಬಹುತೇಕ ಖಚಿತ, ಬದಲಿ ಆಟಗಾರರಾಗಿ ಎಂಟ್ರಿ ಕೊಡುತ್ತಿರುವುದು ಯಾರ್ಯಾರು ಗೊತ್ತೇ??

ಆರ್ಸಿಬಿ ತಂಡಕ್ಕೆ ಮೇಜರ್ ಸರ್ಜರಿ ಮಾಡುವುದು ಬಹುತೇಕ ಖಚಿತ, ಬದಲಿ ಆಟಗಾರರಾಗಿ ಎಂಟ್ರಿ ಕೊಡುತ್ತಿರುವುದು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆ ತಿಳಿದಿರುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಟು ಪಂದ್ಯಗಳಲ್ಲಿ ಗೆದ್ದು ಮೂರರಲ್ಲಿ ಸೋತು ಹತ್ತು ಅಂಕಗಳೊಂದಿಗೆ 5ನೇ ಸ್ಥಾನದಲ್ಲಿ ಪಾಯಿಂಟ್ಸ್ ಟೇಬಲ್ ನಲ್ಲಿ ಇದೆ. ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ಕನಿಷ್ಠಪಕ್ಷ ತಂಡ ಒಂಬತ್ತು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪೇಪರ್ ಮೇಲೆ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ ಆದರೂ ಕೂಡ ತಂಡದಲ್ಲಿ ಕೆಲವೊಂದು ಕೊರತೆಗಳು ಇನ್ನು ಕೂಡ ಕಾಡುತ್ತಿವೆ.

ಅದರಲ್ಲೂ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊನ್ನೆಯಷ್ಟೇ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೋತಂತಹ ರೀತಿ ನೋಡಿದರೆ ನಿಜಕ್ಕೂ ಕೂಡ ಬೇಸರವಾಗುತ್ತದೆ. ಹೌದು ಗೆಳೆಯರೇ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕೇವಲ 68 ರನ್ನುಗಳಿಗೆ ಆಲೌಟ್ ಆಗುತ್ತದೆ. ಇಂತಹ ಸುಲಭದ ಮೊತ್ತವನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ಕೇವಲ ಒಂದು ವಿಕೆಟ್ ಗಳ ನಷ್ಟಕ್ಕೆ 8 ಓವರ್ಗಳಲ್ಲಿ ಪೂರ್ಣಗೊಳಿಸುತ್ತದೆ. ಇಷ್ಟೊಂದು ಬಲಿಷ್ಠ ತಂಡ ದಿಢೀರ್ ಪತನವನ್ನು ಕಾಣುತ್ತದೆ ಎಂಬುದು ನಂಬಲು ಸಾಧ್ಯವಿಲ್ಲ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನಕ್ಕೆ ಕೆಲವೊಂದು ಆಟಗಾರರ ಕೊರತೆ ಕೂಡ ಕಾರಣ ಎಂದರೆ ತಪ್ಪಾಗಲಾರದು. ಮೊದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಓಪನಿಂಗ್ ಬ್ಯಾಟ್ಸ್ ಮನ್ ಆಗಿರುವ ಅನುಜ್ ರಾವತ್. ಹೌದು ಗೆಳೆಯರೇ ಒಬ್ಬ ಯುವ ಆಟಗಾರನಾಗಿ ಅನುಜ್ ರಾವತ್ ಅವರು ಉತ್ತಮ ಗುಣಮಟ್ಟದ ಬ್ಯಾಟಿಂಗ್ ಪ್ರದರ್ಶನವು ನೀಡಬೇಕಾಗಿತ್ತು ಆದರೆ ಅವರು ಇಂತಹ ದೊಡ್ಡ ವೇದಿಕೆಯಲ್ಲಿ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ ಎಂದು ಹೇಳಬಹುದಾಗಿದೆ. ಇನ್ನೊಬ್ಬ ಆಟ ಕೂಡ ಈ ಕೊರತೆಯ ಪಟ್ಟಿಗೆ ಸೇರುತ್ತಾರೆ.

ಹೌದು ಗೆಳೆಯರೇ ಶ್ರೀಲಂಕಾ ಮೂಲದ ವನಿಂದು ಹಸರಂಗ ರವರನ್ನು ಕೋಟಿ ಕೋಟಿ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಆದರೆ ಆ ಕೋಟಿ-ಕೋಟಿ ಬೆಲೆಗೆ ತಕ್ಕದಾದ ಆಟವನ್ನು ಇವರ ಪ್ರದರ್ಶಿಸುತ್ತಿಲ್ಲ‌. ಈ ಕಾರಣಕ್ಕಾಗಿಯೇ ಮುಂದಿನ ಪಂದ್ಯಗಳಿಂದ ಇವರನ್ನು ಹೊರ ಕೂರಿಸ ಬೇಕಾಗಿರುತ್ತದೆ. ಯಾಕೆಂದರೆ ಈಗಾಗಲೇ ಎಂಟು ಪಂದ್ಯಗಳು ಕಳೆದಿದ್ದು ಈ ಇಬ್ಬರು ಆಟಗಾರರು ತಂಡಕ್ಕೆ ಸಹಾಯಕರ ವಾಗುವಂತಹ ಪ್ರದರ್ಶನವನ್ನು ಇನ್ನೂ ನೀಡಿಲ್ಲ.

ಇನ್ನು ವನಿಂದು ಹಸರಂಗ ರವರ ಬದಲಿಗೆ ಹೇಳುವುದಾದರೆ ಫಿನ್ ಅಲೆನ್ ರವರನ್ನು ತಂಡಕ್ಕೆ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ನೇಮಿಸಬಹುದಾಗಿದೆ. ನಿಜವಾಗಿ ಹೇಳುವುದಾದರೆ ಹಸರಂಗ ರವರು ವಿದೇಶಿ ಆಟಗಾರರ ಆಗಿರುವ ಕಾರಣದಿಂದಾಗಿ ಅವರ ಬದಲಿಗೆ ಅಲೆನ್ ರವರನ್ನು ತಂಡಕ್ಕೆ ಸೇರಿಸಿಕೊಂಡರು ಕೂಡ ಅವರು ನಿಜಕ್ಕೂ ತುಂಬುತ್ತಿರುವುದು ಅನುಜ್ ರಾವತ್ ರವರ ಸ್ಥಾನವನ್ನು. ಹೀಗಾಗಿ ಈಗಾಗಲೇ ಫಿನ್ ಅಲೆನ್ ರವರಿಗೆ ಉತ್ತಮ ಆರಂಭಿಕ ಆಟಗಾರರ ಸ್ಥಾನವನ್ನು ತುಂಬಾ ಬಂದಂತಹ ಎಲ್ಲಾ ಅನುಭವ ಕೂಡ ಇದೆ ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದು ಲಾಭವಾಗಲಿದೆ.

ಅನುಜ್ ರಾವತ್ ರವರ ಬದಲಾಗಿ ಮಹಿಪಾಲ್ ಲೊಮ್ರೋರ್ ರವರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇವರು ಅನುಜ್ ರಾವತ್ ರವರ ಬದಲಿ ಆಟಗಾರನಾಗಿ ತಂಡದಲ್ಲಿ ಸೇರಿಕೊಂಡರು ಕೂಡ ಇವರು ನಿಭಾಯಿಸಬೇಕಾಗಿದೆ ಜವಾಬ್ದಾರಿ ಹಸರಂಗ ಅವರದ್ದು. ಹೌದು ಬ್ಯಾಟಿಂಗ್ ಮಾತ್ರವಲ್ಲದೆ ಸ್ಪಿನ್ನರ್ ಆಗಿಯೂ ಕೂಡ ಆಲ್-ರೌಂಡರ್ ಪ್ರದರ್ಶನವನ್ನು ನೀಡಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೆ ಮಹಿಪಾಲ್ ರವರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಮೂಲಕ ತಂಡದ ಮಧ್ಯಮ ಬ್ಯಾಟಿಂಗ್ ಕ್ರಮಾಂಕ ಕೂಡ ಬಲಿಷ್ಠವಾಗಲಿದೆ. ಎಲ್ಲಾ ಬದಲಾವಣೆಗಳಿಂದಾಗಿ ಖಂಡಿತವಾಗಿ ಆರ್ಸಿಬಿ ದೊಡ್ಡಮಟ್ಟದ ಗೆಲುವನ್ನು ಮುಂದಿನ ಪಂದ್ಯಗಳಲ್ಲಿ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.