ಆರ್ಸಿಬಿ ಹನ್ನೊಂದರ ಬಳಗಕ್ಕೆ ಎಂಟ್ರಿ ಕೊಡಲಿದ್ದಾರೆಯೇ ಹೊಸ ಆರಂಭಿಕ ಆಟಗಾರ, ಎಂಟ್ರಿ ಕೊಟ್ಟರೆ ಗೆಲುವಂತೂ ಖಚಿತ. ಯಾರು ಗೊತ್ತೇ??

ಆರ್ಸಿಬಿ ಹನ್ನೊಂದರ ಬಳಗಕ್ಕೆ ಎಂಟ್ರಿ ಕೊಡಲಿದ್ದಾರೆಯೇ ಹೊಸ ಆರಂಭಿಕ ಆಟಗಾರ, ಎಂಟ್ರಿ ಕೊಟ್ಟರೆ ಗೆಲುವಂತೂ ಖಚಿತ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆರಂಭಿಕ ಆಟಗಾರರ ಕೊರತೆ ಎದ್ದುಕಾಣುತ್ತಿದೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿ ರುವಂತಹ ಅಂಶ. ಪ್ರತಿ ಬಾರಿ ನೀವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ನೋಡುವುದಾದರೆ ಗ್ಲೆನ್ ಮ್ಯಾಕ್ಸ್ವೆಲ್ ಡುಪ್ಲೆಸಿಸ್ ಶಾಬಾಜ್ ಅಹ್ಮದ್ ಹಾಗೂ ದಿನೇಶ್ ಕಾರ್ತಿಕ್ ರವರು ಮಾತ್ರ ಚೆನ್ನಾಗಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿದ್ದಾರೆ.

Follow us on Google News

ಆದರೆ ಪ್ರತಿ ಪಂದ್ಯವನ್ನು ಕೂಡ ಇವರ ಮೇಲೆ ಅವಲಂಬಿತವಾಗಿರುವದಕ್ಕೆ ಸಾಧ್ಯವಿಲ್ಲ. ಹೀಗಾಗಿ ಆರಂಭಿಕ ಆಟಗಾರರಲ್ಲಿ ಬದಲಾವಣೆಯನ್ನು ತರಬೇಕಾಗಿರುವುದು ಪ್ರಮುಖವಾಗಿದೆ. ಅದರಲ್ಲೂ ಅನುಜ್ ರಾವತ್ ಅವರು ಆರಂಭಿಕ ಆಟಗಾರನಾಗಿ ತೀರಾ ಎಂದರೆ ತೀರ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಒಬ್ಬ ವಿದೇಶಿ ಓಪನಿಂಗ್ ಬ್ಯಾಟ್ಸ್ ಮನ್ ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತದೆ. ಹಾಗಿದ್ದರೆ ಅದು ಯಾರು ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಹೌದು ಗೆಳೆಯರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈಗಾಗಲೇ ವನಿಂದು ಹಸರಂಗ ನಿರೀಕ್ಷಿತ ಪ್ರದರ್ಶನವನ್ನು ನೀಡುತ್ತಿಲ್ಲ. ಹೀಗಾಗಿ ಅವರ ಬದಲಿಗೆ ನ್ಯೂಜಿಲೆಂಡ್ ಮೂಲದ ವಿದೇಶಿ ಆಟಗಾರನಾಗಿರುವ ಫಿನ್ ಅಲೆನ್ ರವರನ್ನು ಮುಂದಿನ ಪಂದ್ಯಗಳಿಂದ ಅಂದರೆ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಮಾಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಒಂದು ವೇಳೆ ಹೀಗೆ ನಡೆದರೆ ಅನುಜ್ ರಾವತ್ ರವರು ತಂಡದಲ್ಲಿ ಇರಲಿದ್ದಾರೆಯೇ ಅಥವಾ ಅವರ ಬದಲಿಗೆ ಬೇರೆ ಆಲ್-ರೌಂಡರ್ ಆಟಗಾರ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ. ಯಾಕೆಂದರೆ ಅಲೆನ್ ರವರು ಬರುತ್ತಿರುವುದು ಹಸರಂಗ ರವರ ಬದಲಿಗೆ. ಹಸರಂಗ ಒಬ್ಬ ಸ್ಪಿನ್ ಆಲ್ರೌಂಡರ್ ಆಗಿದ್ದಾರೆ. ಹೀಗಾಗಿ ಫಿನ್ ಅಲೆನ್ ಓಪನಿಂಗ್ ಬ್ಯಾಟಿಂಗ್ ನಲ್ಲಿ ಕಾಣಿಸಿಕೊಂಡರೆ ಹಸರಂಗ ರವರ ಜವಾಬ್ದಾರಿಯನ್ನು ಯಾವ ಆಟಗಾರ ಪೂರ್ಣಗೊಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.