ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆರ್ಸಿಬಿಗೆ ಬೇಕು ಈ ಸ್ಟಾರ್ ಲಕ್ಕಿ ಆಟಗಾರ, ಈತ ಬಂದರೆ ಟೀಮ್ ಕೂಡ ಪರ್ಫೆಕ್ಟ್ ಎಂದ ಫ್ಯಾನ್ಸ್. ಯಾರು ಗೊತ್ತೇ ಆ ಲಕ್ಕಿ ಆಟಗಾರ??

5,431

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಒಂದು ವಿಭಾಗದಲ್ಲಿ ತಂಡ ಕೊರತೆಯನ್ನು ಅನುಭವಿಸಿದರು ಕೂಡ ಇನ್ನೊಂದು ವಿಭಾಗದಲ್ಲಿ ತಂಡ ಅದನ್ನು ಸಮನಾಗಿಸಿ ತಂಡ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಯಾಕೆಂದರೆ ತಂಡದಲ್ಲಿ ಸತತವಾಗಿ ಗೆಲುವು ಬರುತ್ತಿದೆ ಎಂದು ಮಾತ್ರಕ್ಕೆ ಈಗ ಇರುವ ಕೊರತೆಗಳನ್ನು ಮುಚ್ಚಿಟ್ಟುಕೊಂಡು ಮುಂದುವರಿಯುವುದು ಸರಿಯಲ್ಲ.

ಹೀಗಾಗಿ ಪ್ರಮುಖ ಘಟ್ಟವನ್ನು ತಲುಪುವ ಮೊದಲೇ ಇರುವಂತಹ ಎಲ್ಲಾ ಕೊರತೆಗಳನ್ನು ನೀಗಿಸಿಕೊಂಡು ಮುಂದುವರೆಯುವುದು ತಂಡದ ಗೆಲುವಿಗೆ ಮುಂದಿನ ದಿನಗಳಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮುಂದೆ ಸಾಗಬಹುದಾಗಿದೆ. ಮೊದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ರಲ್ಲಿ ಅನುಜ್ ರಾವತ್ ರವರ ಕಳಪೆ ಫಾರ್ಮ್ ಮುಂದುವರೆದಿದ್ದು ಅಲ್ಲಿ ಒಬ್ಬ ಉತ್ತಮ ಆರಂಭಿಕ ಬ್ಯಾಟ್ಸ್ಮನ್ ಅಗತ್ಯವಿದೆ. ಅದಕ್ಕಿಂತ ಹೆಚ್ಚಾಗಿ ಈ ಒಬ್ಬ ಆಟಗಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬಂದರೆ ಖಂಡಿತವಾಗಿ ತಂಡ ಪರ್ಫೆಕ್ಟ್ ಆಗಲಿದೆ ಹಾಗೂ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಶ್ರೀಲಂಕಾದ ಆಟಗಾರ ಆಗಿರುವ ವನಿಂದು ಹಸರಂಗ ರವರು ತಂಡದಲ್ಲಿ ಲೆಗ್ ಸ್ಪಿನ್ನರ್ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರು ಅಗತ್ಯಕ್ಕಿಂತಲೂ ಹೆಚ್ಚಿನ ರನ್ನುಗಳನ್ನು ಬಿಟ್ಟುಕೊಡುತ್ತಿದ್ದಾರೆ. ಹೀಗಾಗಿ ಅವರ ಬದಲಿಗೆ ಕರಣ್ ಶರ್ಮಾ ರವರನ್ನು ತಂಡಕ್ಕೆ ತಂದರೆ ಖಂಡಿತವಾಗಿ ಸ್ಪಿನ್ ವಿಭಾಗದಲ್ಲಿ ಅವರು ಪ್ರಭಾವಿ ಬೌಲಿಂಗ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಗತ್ಯ ಬಂದಾಗ ಕೊನೆಯಲ್ಲಿ ಬ್ಯಾಟಿಂಗ್ ಮಾಡುವ ಕ್ಷಮತೆ ಕೂಡ ಅವರಲ್ಲಿದೆ. ಹೀಗಾಗಿ ಮತ್ತೊಬ್ಬ ಬದಲಿ ಬೌಲರನ್ನು ಅವಲಂಬಿಸುವುದಕ್ಕಿಂತ ಹೆಚ್ಚಾಗಿ ಪ್ರಭಾವಿ ಹಾಗೂ ಅನುಭವಿಸುತ್ತಿದ್ದಾರೆ ಆಗಿರುವ ಕರಣ್ ಶರ್ಮಾ ಅವರನ್ನು ತಂಡದಲ್ಲಿ ಆಡಿಸುವುದು ಉತ್ತಮ ಎಂದು ಭಾವನೆ. ಇವರಿಂದಾಗಿ ತಂಡದ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಈ ಆಟಗಾರ ತಂಡಕ್ಕೆ ಬಂದರೆ ಗೆಲ್ಲುವುದು ಗ್ಯಾರಂಟಿ.

Get real time updates directly on you device, subscribe now.