ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊಹ್ಲಿ ಕಳಪೆ ಫಾರ್ಮ್ ಕುರಿತಂತೆ ಮಾತನಾಡಿ ಸಲಹೆ ನೀಡಿದ ರವಿಶಾಸ್ತ್ರಿ; ಏನು ಮಾಡಬೇಕಂತೆ ಗೊತ್ತೇ?? ರವಾನೆ ಮಾಡಿದ ಸಂದೇಶ ಏನು ಗೊತ್ತೇ??

42

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿರಾಟ್ ಕೊಹ್ಲಿ ರವರು ಕಳೆದ ಕೆಲವು ವರ್ಷಗಳಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿಲ್ಲ. ಮೊದಮೊದಲಿಗೆ ಇದು ಅವರ ನಾಯಕತ್ವದ ಜವಾಬ್ದಾರಿಯ ಒತ್ತಡ ಇರಬಹುದು ಎನ್ನುವುದಾಗಿ ಅಂದಾಜಿಸಲಾಗಿತ್ತು. ಇದಕ್ಕಾಗಿಯೇ ವಿರಾಟ್ ಕೊಹ್ಲಿ ರವರು ಭಾರತೀಯ ಕ್ರಿಕೆಟ್ ತಂಡದ ಮೂರು ಫಾರ್ಮೆಟ್ ಗಳಲ್ಲಿ ಕೂಡ ನಾಯಕತ್ವ ಸ್ಥಾನದಿಂದ ಹೊರ ಬಂದಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ಕಳೆದ ಬಾರಿಯ ಐಪಿಎಲ್ ಸೀಸನ್ ನಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನಕ್ಕೆ ಕೂಡ ವಿರಾಟ್ ಕೊಹ್ಲಿ ಅವರು ರಾಜೀನಾಮೆ ನೀಡಿದ್ದರು.

ಈಗ ಯಾವುದೇ ಜವಾಬ್ದಾರಿಯ ಒತ್ತಡವಿಲ್ಲದೆ ಕೇವಲ ಆಟಗಾರನಾಗಿ ಕೂಡ ವಿರಾಟ್ ಕೊಹ್ಲಿ ಅವರು ನಿರೀಕ್ಷಿತ ಪ್ರದರ್ಶನವನ್ನು ತಂಡಕ್ಕೆ ನೀಡುತ್ತಿಲ್ಲ ಎನ್ನುವುದಾಗಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಇದು ನಿಜಕ್ಕೂ ಕೂಡ ಕೇವಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ವಿರಾಟ್ ಕೊಹ್ಲಿ ರವರ ನೀರಸವಾದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಬೇಸತ್ತು ಹೋಗಿದ್ದಾರೆ. ವಿರಾಟ್ ಕೊಹ್ಲಿ ರವರ ಈ ಕಳಪೆ ಫಾರ್ಮ್ ಕುರಿತಂತೆ ಈಗ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಗಿರುವ ರವಿಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ರವರ ಫಾರ್ಮ್ ಕುರಿತಂತೆ ಮಾತನಾಡಿದ ರವಿಶಾಸ್ತ್ರಿ ರವರು ಈಗಾಗಲೇ ಸತತ ಕ್ರಿಕೆಟ್ ಪಂದ್ಯ ಗಳಿಂದಾಗಿ ವಿರಾಟ್ ಕೊಹ್ಲಿ ರವರು ಬಳಲಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ಅಗತ್ಯ ಎಲ್ಲರಿಗಿಂತ ಹೆಚ್ಚಾಗಿದ್ದು ವಿಶ್ವಕಪ್ ಪಂದ್ಯಕ್ಕೂ ಮುನ್ನ ಕಡಿಮೆಯೆಂದರೂ ಎರಡು ದಿನಗಳ ವಿಶ್ರಾಂತಿಯನ್ನು ವಿರಾಟ್ ಕೊಹ್ಲಿ ರವರು ಪಡೆಯಬೇಕಾಗಿದೆ ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎನ್ನುವುದಾಗಿ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ರವರು ಇರಲೇಬೇಕು ಅವರು ಯಾವ ಸಂದರ್ಭದಲ್ಲಿ ಕೂಡ ಕ್ರಿಕೆಟ್ ಪಂದ್ಯದ ದಿಕ್ಕನ್ನು ಬದಲಿಸಬಲ್ಲ ಅಂತಹ ಆಟಗಾರ ಹೀಗಾಗಿ ವಿರಾಟ್ ಕೊಹ್ಲಿ ರವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ.

Get real time updates directly on you device, subscribe now.