ಯುವ ಆಟಗಾರರು ಐಪಿಎಲ್ ನಲ್ಲಿ ವಿಫಲ, ಡಿಕೆ ಗೆ ತೆರೆಯುತ್ತದೆಯೇ ಟೀಮ್ ಇಂಡಿಯಾ ಬಾಗಿಲು?? ಯಾರ ಸ್ಥಾನದಲ್ಲಿ ಕಾರ್ತಿಕ್ ಕಾಣಿಸಿಕೊಳ್ಳಬಹುದು ಗೊತ್ತೇ?

ಯುವ ಆಟಗಾರರು ಐಪಿಎಲ್ ನಲ್ಲಿ ವಿಫಲ, ಡಿಕೆ ಗೆ ತೆರೆಯುತ್ತದೆಯೇ ಟೀಮ್ ಇಂಡಿಯಾ ಬಾಗಿಲು?? ಯಾರ ಸ್ಥಾನದಲ್ಲಿ ಕಾರ್ತಿಕ್ ಕಾಣಿಸಿಕೊಳ್ಳಬಹುದು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ದಿನೇಶ್ ಕಾರ್ತಿಕ್ ರವರು ಅಸಮಾನ್ಯ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ಕೂಡ ತನ್ನದೇ ಆದಂತಹ ಅಂದಾಜಿನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಅವರು ಹೇಳಿರುವಂತೆ ಐಪಿಎಲ್ನಲ್ಲಿ ಹಾಡುವುದು ಕೇವಲ ಕ್ರಿಕೆಟ್ ಆಟದ ಭಾಗವಷ್ಟೇ. ಆದರೆ ದೇಶಕ್ಕಾಗಿ ಆಡಿ ತಂಡವನ್ನು ಗೆಲ್ಲಿಸುವುದು ಅವರ ಜೀವನದ ಪರಮಧ್ಯೇಯ ಎಂಬುದಾಗಿ ಹೇಳಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಪಾರ್ಟ್ ಟೈಮ್ ಕ್ರಿಕೆಟರ್ ಹಾಗೂ ಫುಲ್ ಟೈಮ್ ಕಾಮೆಂಟೇಟರ್ ಆಗಿದ್ದ ದಿನೇಶ್ ಕಾರ್ತಿಕ್ ರವರು ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಫಿನಿಶರ್ ಜವಾಬ್ದಾರಿಯನ್ನು ಸಂಪೂರ್ಣ ಪರಿಪಕ್ವವಾಗಿ ನಿಭಾಯಿಸುವ ಮೂಲಕ ಹೇಟರ್ ಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಹೀಗಾಗಿ ಅತಿ ಶೀಘ್ರದಲ್ಲಿ ನಡೆಯುವಂತಹ t20 ವರ್ಲ್ಡ್ ಕಪ್ ನಲ್ಲಿ ಕೂಡ ಆಯ್ಕೆ ಆಗಬಹುದಾಗಿದೆ ಎನ್ನುವುದಾಗಿ ಹಲವಾರು ಮಾಜಿ ಕ್ರಿಕೆಟಿಗರು ದಿನೇಶ್ ಕಾರ್ತಿಕ್ ರವರ ಪರವಾಗಿ ಬ್ಯಾಟ್ ಬೀಸಿದ್ದಾರೆ. ಹೀಗಾಗಿ ಮುಂದೆ ನಡೆಯಲಿರುವ ಸೌತ್ಆಫ್ರಿಕ ಸರಣಿಯ ಪಂದ್ಯದ ವೇಳೆಯಲ್ಲಿ ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ರವರು ಭಾರತ ತಂಡಕ್ಕೆ ಕಂಬ್ಯಾಕ್ ಮಾಡಬಹುದಾಗಿದೆ ಎಂಬುದಾಗಿ ಎಲ್ಲರೂ ಲೆಕ್ಕಾಚಾರ ಹಾಕಿದ್ದಾರೆ.

ವಯಸ್ಸು 37 ಆಗಿದ್ದರೂ ಕೂಡ ದಿನೇಶ್ ಕಾರ್ತಿಕ್ ರವರು ತನ್ನ ಕ್ರಿಕೆಟ್ ಮೂಲಕ ಎಲ್ಲರಿಗೂ ವಯಸ್ಸು ಕೇವಲ ನಂಬರ್ ಮಾತ್ರ ಎನ್ನುವುದಾಗಿ ಪ್ರತ್ಯುತ್ತರವನ್ನು ನೀಡಿದ್ದಾರೆ. ಹಾಗಿದ್ದರೆ ಸೌತ್ ಆಫ್ರಿಕಾ ಸರಣಿಯ ವೇಳೆ ಭಾರತ ತಂಡದ ಪರವಾಗಿ ದಿನೇಶ್ ಕಾರ್ತಿಕ್ ಯಾರ ಸ್ಥಾನವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ. ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಈ ಬಾರಿಯ ಐಪಿಎಲ್ ನಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡುವ ಆಟಗಾರರನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ರೇಸಿಂಗ್ ನಲ್ಲಿ ಹಲವಾರು ಜನರು ಇದ್ದಾರೆ. ಇನ್ನೂ ಬ್ಯಾಟ್ಸ್ಮನ್ ಆಗಿ ಹಾಗೂ ಅದಕ್ಕಿಂತ ಹೆಚ್ಚಾಗಿ ಒಬ್ಬ ಫಿನಿಶರ್ ಆಗಿ ದಿನೇಶ್ ಕಾರ್ತಿಕ್ ರವರು ತಂಡದಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದಾಗಿದೆ. ಹೀಗಾಗಿ ಮೂಲಗಳ ಪ್ರಕಾರ ಅವರು ವೆಂಕಟೇಶ ಅಯ್ಯರ್ ಅಥವಾ ಇಶಾನ್ ಕಿಶನ್ ಅವರ ಸ್ಥಾನವನ್ನು ತುಂಬ ಬಹುದಾಗಿದೆ ಎಂಬುದಾಗಿ ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಅಧಿಕೃತ ಘೋಷಣೆ ಬಂದ ನಂತರವೇ ಇದನ್ನು ಒಪ್ಪಬಹುದಾಗಿದೆ