ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನನ್ನ ದೇಶ ಶ್ರೇಷ್ಠ ದೇಶವಾಗಬಹುದು ಆದರೆ ಎಂದು ಪ್ರಶ್ನಾತೀತ ಟ್ವೀಟ್ ಮಾಡಿದ ಪಠಾಣ್ ಗೆ ಪರೋಕ್ಷವಾಗಿ ಖಡಕ್ ಆಗಿ ಉತ್ತರ ಕೊಟ್ಟರೆ ಅಮಿತ್ ಮಿಶ್ರಾ. ಏನು ಗೊತ್ತೇ??

203

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ಐಪಿಎಲ್ ಭರದಿಂದ ಸಾಗಿ ಬರುತ್ತಿದ್ದು ಕ್ರಿಕೆಟ್ ಪ್ರೇಮಿಗಳು ಪ್ರತಿಯೊಂದು ರೋಚಕ ಪಂದ್ಯಗಳನ್ನು ಕೂಡ ಮನೆಯಲ್ಲಿ ಕೂತ್ಕೊಂಡು ನೋಡುತ್ತಾ ಆನಂದ ಪಡೆಯುತ್ತಿದ್ದಾರೆ. ಇದರ ಮಧ್ಯದಲ್ಲಿ ಈಗ ಹೊಸ ಸೋಶಿಯಲ್ ಮೀಡಿಯಾ ವಾರ್ ನಡೆಯುತ್ತಿದೆ ಎನ್ನುವುದಾಗಿ ಅಭಿಮಾನಿಗಳು ಅರ್ಥೈಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ರಾಷ್ಟ್ರ ಕಂಡಂತಹ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಇರ್ಫಾನ್ ಪಠಾಣ್ ರವರು ಐಪಿಎಲ್ ಕಾಮೆಂಟೇಟರ್ ಬಾಕ್ಸ್ನಲ್ಲಿ ಚೆನ್ನಾಗಿ ಕಾಮೆಂಟರಿ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಐಪಿಎಲ್ನಲ್ಲಿ ಡೆಲ್ಲಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ ಇರ್ಫಾನ್ ಪಠಾಣ್ ರವರು ಈಗ ನಿರೂಪಕರಾಗಿ ಕ್ರಿಕೆಟ್ ಕುರಿತಂತೆ ರಸವತ್ತಾದ ಮಾಹಿತಿಗಳನ್ನು ಕಟ್ಟಿಕೊಡುತ್ತಿದ್ದಾರೆ. ಇನ್ನು ಇದೆ ಐಪಿಎಲ್ ಪಂದ್ಯಗಳ ನಡುವಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಇವರು ಸಕತ್ತಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೇ ಇರ್ಫಾನ್ ಪಠಾಣ್ ರವರು ಟ್ವಿಟರ್ನಲ್ಲಿ ಮಾಡಿರುವ ಟ್ವೀಟ್ ಒಂದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಈ ಟ್ವೀಟ್ ನಲ್ಲಿ ಇರ್ಫಾನ್ ಪಠಾಣ್ ರವರು ನನ್ನ ದೇಶ, ನನ್ನ ಸುಂದರ ದೇಶ ಇಡೀ ಜಗತ್ತಿನಲ್ಲಿ ಅತ್ಯಂತ ಗ್ರೇಟೆಸ್ಟ್ ದೇಶ ವಾಗುವಂತಹ ಸಾಮರ್ಥ್ಯವನ್ನು ಹೊಂದಿದೆ ಆದರೆ ಎನ್ನುವುದಾಗಿ ಮುಂದೆ ಪ್ರಶ್ನಾರ್ಥಕ ಚಿಹ್ನೆಯ ಭಾವನೆಯನ್ನು ಇಟ್ಟಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ಹಲ್ಚಲ್ ಸೃಷ್ಟಿಸಿತು.

ಆದರೆ ಇದೇ ರೀತಿಯ ಟ್ವೀಟ್ ಅನ್ನು ಮತ್ತೊಬ್ಬ ಮಾಜಿ ಕ್ರಿಕೆಟಿಗ ಪೂರ್ಣಗೊಳಿಸುವಂತೆ ಕಂಡುಬಂದಿದ್ದು ಅಭಿಮಾನಿಗಳು ಇದನ್ನು ಇವರಿಬ್ಬರ ನಡುವೆ ನಡೆಯುತ್ತಿರುವಂತಹ ಸಾಮಾಜಿಕ ಜಾಲತಾಣದ ಶೀತಲಸಮರ ಎನ್ನುವುದಾಗಿ ಬಿಂಬಿಸಿದ್ದಾರೆ. ಇರ್ಫಾನ್ ಪಠಾಣ್ ಟ್ವೀಟ್ ಮಾಡಿದನಂತರ ಕೆಲವೇ ಸಮಯಗಳ ಬಳಿಕ ಅಮಿತ್ ಮಿಶ್ರಾರವರು ಇದೇ ರೀತಿಯ ಪದಗಳನ್ನು ಬಳಸಿಕೊಂಡು ಅದನ್ನು ಪೂರ್ಣಗೊಳಿಸುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಇದಕ್ಕೆ ಉತ್ತರ ಎನ್ನುವಂತೆ ಅಮಿತ್ ಮಿಶ್ರಾರವರು ನನ್ನ ಸುಂದರ ದೇಶ ವಿಶ್ವದಲ್ಲೇ ಅತ್ಯಂತ ಗ್ರೇಟೆಸ್ಟ್ ದೇಶ ಆಗುವಂತಹ ಸಾಮರ್ಥ್ಯವನ್ನು ಹೊಂದಿದೆ. ಆದರೆ ಕೆಲವರು ಸಂವಿಧಾನವೇ ನಾವು ಪಾಲಿಸಬೇಕಾದ ಮೊದಲ ಪುಸ್ತಕ ಎಲ್ಲಿ ತಿಳಿದರೆ ಮಾತ್ರ ಎನ್ನುವುದಾಗಿ ಹೇಳಿದ್ದಾರೆ. ಎರಡು ಬರಹಗಳು ಕೂಡ ಬಹುತೇಕ ಸಾಮ್ಯತೆ ಹೊಂದಿದೆ. ಹೀಗಾಗಿ ಅಭಿಮಾನಿಗಳು ಇರ್ಫಾನ್ ಪಠಾಣ್ ರವರಿಗೆ ಅಮಿತ್ ಮಿಶ್ರಾ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದಾಗಿ ಅರ್ಥೈಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Get real time updates directly on you device, subscribe now.