ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿರಾಟ್ ಕೊಹ್ಲಿ ರವರ ಆಟ ನೋಡಿ, ಕ್ರಿಕೆಟ್ ಬಿಟ್ಟು ಬಿಡಿ ಎಂದ ಮಾಜಿ ಕ್ರಿಕೆಟರ್, ಕ್ರಿಕೆಟ್ ಬಿಟ್ಟು ಏನು ಮಾಡಬೇಕಂತೆ ಗೊತ್ತೇ??

2,701

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಳೆದ ಎಲ್ಲಾ ಸೀಸನ್ ಗಳಿಗಿಂತ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನವನ್ನು ಈ ಬಾರಿಯ ಐಪಿಎಲ್ ನಲ್ಲಿ ನೀಡುತ್ತಿದೆ. ಇದು ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೂ ಕೂಡ ಸಮಾಧಾನವನ್ನು ನೀಡಿದೆ. ಆದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರವರು ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕಪ್ತಾನ ನಾಗಿರುವ ವಿರಾಟ್ ಕೊಹ್ಲಿ ರವರು ಈ ಬಾರಿ ಕೂಡ ತಮ್ಮ ಕಳಪೆ ಪ್ರದರ್ಶನವನ್ನು ಮುಂದಿರಿಸಿದ್ದಾರೆ. ನಾಯಕತ್ವದಿಂದ ಕೆಳಗಿಳಿದ ಮೇಲೆ ಖಂಡಿತವಾಗಿ ಯಾವುದೇ ದೊಡ್ಡಮಟ್ಟದ ಜವಾಬ್ದಾರಿಯಿಲ್ಲದೆ ವಿರಾಟ್ ಕೊಹ್ಲಿ ರವರು ಅನಾಯಾಸವಾಗಿ ಬ್ಯಾಟ್ ಬೀಸಲಿದ್ದಾರೆ ಎನ್ನುವುದಾಗಿ ಎಲ್ಲರೂ ಅಂದುಕೊಂಡಿದ್ದರು.

ಆದರೆ ಈ ಬಾರಿ ಕೂಡ ವಿರಾಟ್ ಕೊಹ್ಲಿ ರವರು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿಲ್ಲ. ಇದು ಅಭಿಮಾನಿಗಳಿಗೆ ನಿರಾಸೆಯನ್ನು ಕೂಡ ಮೂಡಿಸಿದೆ. ಇದೇ ಹಿನ್ನೆಲೆಯಲ್ಲಿ ಭಾರತದ ಮಾಜಿ ಆಟಗಾರನಾಗಿರುವ ವಾಸಿಂ ಜಾಫರ್ ವಿರಾಟ್ ಕೊಹ್ಲಿ ಇರುವರು ಕ್ರಿಕೆಟ್ನಿಂದ ಕೊಂಚಕಾಲ ವಿರಾಮವನ್ನು ಪಡೆದುಕೊಂಡು ಕಾಮೆಂಟರಿ ಮಾಡುವುದು ಒಳ್ಳೆಯದು ಎಂಬುದಾಗಿ ಹೇಳಿದ್ದಾರೆ. ಇದು ಈಗಾಗಲೇ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ಕೋಪವನ್ನು ತರಿಸಿದೆ. ಆದರೆ ವಾಸಿಂ ಜಾಫರ್ ರವರು ಹೇಳುವುದಕ್ಕೆ ಕೂಡ ಒಂದು ಸರಿಯಾದ ಕಾರಣ ಇದೆ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಅವರು ಈ ಹೇಳಿಕೆಗೆ ನೀಡುವ ಕಾರಣ ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ಹೌದು ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಭರವಸೆಯ ಬ್ಯಾಟ್ಸ್ಮನ್ ಆಗಿ ಆಡುತ್ತಿರುವ ದಿನೇಶ್ ಕಾರ್ತಿಕ್ ರವರು ಕೂಡ ಕಳೆದ 2 ವರ್ಷಗಳ ಹಿಂದೆ ಅಷ್ಟೊಂದು ಚೆನ್ನಾಗಿ ಪ್ರದರ್ಶನವನ್ನು ನೀಡುತ್ತಿರಲಿಲ್ಲ. ಆದರೆ ಅವರು ಭಾರತ ಹಾಗೂ ಇಂಗ್ಲೆಂಡ್ ಸರಣಿಯ ಸಂದರ್ಭದಲ್ಲಿ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸಿದರು. ಆಟಗಾರರ ಎಲ್ಲಾ ರೀತಿಯ ಆಟಗಳನ್ನು ನೋಡಿ ಈಗ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ ಎಂಬುದಾಗಿ ತಮಾಷೆಯಾಗಿ ವಾಸಿಂ ಜಾಫರ್ ಅವರು ಕಾರಣವನ್ನು ನೀಡಿದ್ದಾರೆ. ಎಲ್ಲರೂ ಕೂಡ ಈಗ ವಿರಾಟ್ ಕೊಹ್ಲಿ ರವರು ಮತ್ತೊಮ್ಮೆ ಉತ್ತಮ ಫಾರ್ಮ್ ಗೆ ಮರಳಲ್ಲಿ ಹಾಗೂ ಇದೇ ವರ್ಷದಲ್ಲಿ ಪ್ರಾರಂಭವಾಗಲಿರುವ t20 ವರ್ಲ್ಡ್ ಕಪ್ ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಲಿ ಎಂಬುದಾಗಿ ಆಶಿಸುತ್ತಿದ್ದಾರೆ.

Get real time updates directly on you device, subscribe now.