ಶಿಖರ್ ಧವನ್ ರವರಿಗೆ ನಾಯಕನ ಸ್ಥಾನ ನೀಡಿ ಮಯಾಂಕ್ ಅಗರ್ವಾಲ್ ತಂಡದಿಂದ ಹೊರಗುಳಿಯಲು ಕಾರಣವೇನು ಗೊತ್ತೆ??

ಶಿಖರ್ ಧವನ್ ರವರಿಗೆ ನಾಯಕನ ಸ್ಥಾನ ನೀಡಿ ಮಯಾಂಕ್ ಅಗರ್ವಾಲ್ ತಂಡದಿಂದ ಹೊರಗುಳಿಯಲು ಕಾರಣವೇನು ಗೊತ್ತೆ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಈ ಬಾರಿಯ ಟಾಟಾ ಐಪಿಎಲ್ 2022 ರ ಪ್ರತಿಯೊಂದು ಪಂದ್ಯಗಳು ಕೂಡ ಪಕ್ಕಾ ಪೈಸಾ ವಸೂಲ್ ಅನುಭವವನ್ನು ಕ್ರಿಕೆಟ್ ಪ್ರೇಮಿಗಳಿಗೆ ನೀಡುತ್ತಿದೆ. ನಿಜಕ್ಕೂ ಕೂಡ ಯಾವುದೇ ರೋಚಕ ಸಿನಿಮಾದ ಅನುಭವಕ್ಕಿಂತ ಕಡಿಮೆ ಇಲ್ಲದಂತೆ ಪ್ರತಿಯೊಂದು ಪಂದ್ಯಗಳು ಕೂಡ ರೋಚಕತೆಯ ಅನುಭವ ನೀಡುತ್ತಿದೆ. ಇನ್ನು ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿರುವುದು ಪಂಜಾಬ್ ಕಿಂಗ್ಸ್ ತಂಡದ ಕುರಿತಂತೆ. ಪ್ರತಿ ಬಾರಿ ಕೂಡ ಬಲಿಷ್ಠ ತಂಡ ವಿದ್ದರೂ ಪಂಜಾಬ್ ತಂಡ ಉತ್ತಮ ಫಲಿತಾಂಶವನ್ನು ಪಡೆಯುವಲ್ಲಿ ಎಡವುತ್ತಿತ್ತು.

ಆದರೆ ಈ ಬಾರಿ ಮಯಾಂಕ್ ಅಗರ್ವಾಲ್ ರವರ ನಾಯಕತ್ವದಲ್ಲಿ ನಿರ್ಮಾಣಗೊಂಡಿರುವ ಹೊಸ ಪಂಜಾಬ್ ಕಿಂಗ್ಸ್ ತಂಡ ಈಗಾಗಲೇ ಪಾಯಿಂಟ್ಸ್ ಟೇಬಲ್ ನಲ್ಲಿ ಐದನೇ ಸ್ಥಾನದಲ್ಲಿದೆ. ಈಗಾಗಲೇ ಈ ಬಾರಿಯ ಕ್ವಾಲಿಫೈಯರ್ ಅನ್ನು ತಲುಪುವಂತಹ ಎಲ್ಲಾ ಭರವಸೆಯನ್ನು ಕೂಡ ಮೂಡಿಸಿದೆ. ತಂಡದಲ್ಲಿ ಬಹುತೇಕ ಎಲ್ಲಾ ಆಟಗಾರರು ಕೂಡ ತಮ್ಮ ತಂಡಕ್ಕಾಗಿ ಬಹುಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ನಿಮಗೆಲ್ಲ ಗೊತ್ತಿರುವ ಹಾಗೆ ಕಳೆದ ಪಂದ್ಯವನ್ನು ಪಂಜಾಬ್ ಕಿಂಗ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿತ್ತು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದು ಶಿಖರ್ ಧವನ್ ಅವರು. ಕೊನೆಯ ಬಾರಿ ಅವರು ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಇದ್ದಾಗ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ನಾಯಕತ್ವವನ್ನು ನಡೆಸಿದ್ದರು.

ಬರೋಬ್ಬರಿ ಎಂಟು ವರ್ಷಗಳ ನಂತರ ನಾಯಕತ್ವದ ಸ್ಥಾನದಲ್ಲಿ ಶಿಖರ್ ಧವನ್ ರವರು ನಿನ್ನೆ ಕಾಣಿಸಿಕೊಂಡಿದ್ದರು. ಅಷ್ಟಕ್ಕೂ ಮಯಾಂಕ್ ಅಗರ್ವಾಲ್ ರವರಿಗೆ ಏನಾಗಿತ್ತು ಎಂಬುದನ್ನು ತಿಳಿಸುತ್ತೇವೆ ಬನ್ನಿ‌. ಹೌದು ಗೆಳೆಯರೇ ಮಯಾಂಕ್ ಅಗರ್ವಾಲ್ ರವರಿಗೆ ಅಭ್ಯಾಸದ ವೇಳೆ ಕಾಲಿಗೆ ಚೆಂಡು ತಗಲಿ ಇಂಜುರಿ ಆಗಿತ್ತು. ಹೀಗಾಗಿ ವೈದ್ಯರು ಆಡುವುದಕ್ಕಿಂತ ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ ಎನ್ನುವುದಾಗಿ ಸಲಹೆಯನ್ನು ನೀಡಿದರು. ಹೀಗಾಗಿ ಮಯಾಂಕ್ ಅಗರ್ವಾಲ್ ರವರು ವಿಶ್ರಾಂತಿಯನ್ನು ಪಡೆದಿರುತ್ತಾರೆ ಅವರ ಬದಲಿಗೆ ನಾಯಕನ ಸ್ಥಾನದಲ್ಲಿ ಶಿಖರ್ ಧವನ್ ರವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ವಿರುದ್ಧ ಭರ್ಜರಿ ವಿಜಯಗಳನ್ನು ಸಾಧಿಸಿದೆ.