ಅತ್ಯದ್ಭುತ ಕ್ಯಾಚ್ ಮೂಲಕ ಪಂದ್ಯಕ್ಕೆ ತಿರುವನ್ನು ನೀಡಿದ ಕೊಹ್ಲಿ, ವಿಶೇಷ ಕ್ಯಾಚ್ ಅನ್ನು ಅರ್ಪಿಸಿದ್ದು ಯಾರಿಗೆ ಗೊತ್ತೇ??

ಅತ್ಯದ್ಭುತ ಕ್ಯಾಚ್ ಮೂಲಕ ಪಂದ್ಯಕ್ಕೆ ತಿರುವನ್ನು ನೀಡಿದ ಕೊಹ್ಲಿ, ವಿಶೇಷ ಕ್ಯಾಚ್ ಅನ್ನು ಅರ್ಪಿಸಿದ್ದು ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿನ್ನೆ ರೋಚಕವಾಗಿ ಪಂದ್ಯವನ್ನು ಗೆದ್ದಿರುವುದು ನಿಮಗೆಲ್ಲಾ ಗೊತ್ತಿದೆ. ಏನೋ ಈ ಪಂದ್ಯಾಟದಲ್ಲಿ ವಿರಾಟ್ ಕೊಹ್ಲಿ ರವರು ಒಂದೇ ಕೈಯಲ್ಲಿ ಹಿಡಿದಿರುವಂತಹ ಕ್ಯಾಚ್ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು‌‌. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಈ ಬಾರಿಯೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್ಮನ್ಗಳು ಗಮನಾರ್ಹ ಪ್ರದರ್ಶನವನ್ನು ನೀಡಲಿಲ್ಲ. ಡುಪ್ಲೆಸಿಸ್ ಅನುಜ್ ರಾವತ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ದೊಡ್ಡ ಸ್ಕೋರ್ ಮಾಡಲು ಎಡವಿದ್ದಾರೆ.

ಈ ಸಂದರ್ಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬಂದಂತಹ ಗ್ಲೆನ್ ಮ್ಯಾಕ್ಸ್ವೆಲ್ ರವರು ಬರೋಬ್ಬರಿ 55 ರನ್ನುಗಳ ದೊಡ್ಡ ಆಟವನ್ನು ಪ್ರದರ್ಶಿಸಿದರು. ನಂತರ ಜೊತೆಯಾದ ಶಾಬಾಜ್ ಹಾಗೂ ದಿನೇಶ್ ಕಾರ್ತಿಕ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉತ್ತಮ ಮೊತ್ತವನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅದರಲ್ಲೂ ದಿನೇಶ್ ಕಾರ್ತಿಕ್ ರವರು ಒಂದೇ ಓವರ್ ನಲ್ಲಿ 28ರಂದು ಗಳನ್ನು ಬಾರಿಸುವ ಮೂಲಕ ತಮ್ಮ ವಿಶ್ವರೂಪವನ್ನು ಪ್ರದರ್ಶಿಸಿದ್ದಾರೆ. ಇವರಿಬ್ಬರ ಬಿರುಸಿನ ಬ್ಯಾಟಿಂಗ್ ಮೂಲಕ 20 ಓವರ್ಗಳಲ್ಲಿ 189 ರನ್ನುಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಾರಿಸಿತ್ತು.

190 ರನ್ನುಗಳ ಗುರಿಯನ್ನು ಬೆನ್ನತ್ತಿದ್ದ ಡೆಲ್ಲಿ ತಂಡದ ಪರವಾಗಿ ಡೇವಿಡ್ ವಾರ್ನರ್ ರವರು 66 ರನ್ನುಗಳು ಹಾಗೂ ರಿಷಬ್ ಪಂತ್ ರವರು 34 ರನ್ನುಗಳನ್ನು ಬಾರಿಸಿದ್ದು ಬಿಟ್ಟರೆ ಬೇರೆ ಯಾರೂ ಕೂಡ ನಿರೀಕ್ಷಿತ ಪ್ರದರ್ಶನವನ್ನು ನೀಡಲಿಲ್ಲ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 16 ರನ್ನುಗಳಿಂದ ಸೋತಿತು. ಇನ್ನು ಇದೇ ಸಂದರ್ಭದಲ್ಲಿ ರಿಷಬ್ ಪಂತ್ ರವರು 30 ಗಜಗಳ ಸರ್ಕಲ್ನಲ್ಲಿ ಒಂದು ಶಾರ್ಟ್ ಹೊಡೆದಾಗ ವಿರಾಟ್ ಕೊಹ್ಲಿ ರವರು ಅದನ್ನು ಒಂದೇ ಕೈಯಲ್ಲಿ ಕ್ಯಾಚ್ ಹಿಡಿಯುತ್ತಾರೆ. ಇದಾದ ನಂತರ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ ರವರ ಕಡೆಗೆ ತಿರುಗಿ ಸಂಭ್ರಮವನ್ನು ಆಚರಿಸುವುದು ಕೂಡ ಕ್ಯಾಮೆರಾ ಕಣ್ಣಿಗೆ ಕಂಡುಬಂದಿದೆ. ಇನ್ನು ಈ ಕ್ಯಾಚನ್ನು ತಮ್ಮ ಸಹ ಕ್ರಿಕೆಟಿಗ ಆಗಿದ್ದಂತಹ ಎಬಿ ಡಿವಿಲಿಯರ್ಸ್ ರವರಿಗೆ ವಿರಾಟ್ ಕೊಹ್ಲಿ ರವರು ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಕೂಡ ವಿರಾಟ್ ಕೊಹ್ಲಿ ರವರು ಎಬಿಡಿ ರವರನ್ನು ನೆನಪಿಸಿಕೊಂಡಿದ್ದು ಎಲ್ಲರ ಮನಗೆದ್ದಿದೆ.