ಹೆಚ್ಚು ಬೇಡ ಕೇವಲ ಒಂದು ತಿಂಗಳಿಗೆ 1000 ಉಳಿಸಿ ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ?? ಕಡಿಮೆ ರಿಸ್ಕ್ ನಲ್ಲಿ ಹೇಗೆ ಕೋಟಿ ಗಳಿಸಬಹುದು ಗೊತ್ತೇ?

ಹೆಚ್ಚು ಬೇಡ ಕೇವಲ ಒಂದು ತಿಂಗಳಿಗೆ 1000 ಉಳಿಸಿ ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ?? ಕಡಿಮೆ ರಿಸ್ಕ್ ನಲ್ಲಿ ಹೇಗೆ ಕೋಟಿ ಗಳಿಸಬಹುದು ಗೊತ್ತೇ?

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಶ್ರೀಮಂತರಾಗಬೇಕು ಎನ್ನುವ ಆಸೆಗಳು ಖಂಡಿತವಾಗಿ ಇದ್ದೇ ಇರುತ್ತದೆ. ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಿ ಇರಬೇಕು ಎನ್ನುವ ಮಹತ್ವಾಕಾಂಕ್ಷೆಗಳು ಇರುತ್ತದೆ. ಅಂತವರಿಗೆ ಇಂದು ಒಂದು ಒಳ್ಳೆ ಯೋಜನೆಯನ್ನು ಹೇಳಲು ಹೊರಟಿದ್ದೇವೆ. ಕೇವಲ ತಿಂಗಳಿಗೆ ಸಾವಿರ ರೂಪಾಯಿ ಉಳಿಸಿದರೆ ಸಾಕು ನೀವು ಕೋಟ್ಯಾಧಿಪತಿ ಆಗಬಹುದಾಗಿದೆ. ಅದು ಹೇಗೆ ಏನು ಎನ್ನುವುದರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ.

ಹೌದು ಇದಕ್ಕೆ ಅತ್ಯುತ್ತಮ ಮಾರ್ಗವೆಂದರೆ ಮ್ಯೂಚುವಲ್ ಫಂಡ್ ಎಸ್ಐಪಿ ನಲ್ಲಿ ಪ್ರತಿ ತಿಂಗಳಿಗೆ ಸಾವಿರ ರೂಪಾಯಿಯಂತೆ ಹೂಡಿಕೆ ಮಾಡುವುದು. ಆದರೆ ಇದರಲ್ಲಿ ಉಳಿತಾಯ ಎನ್ನುವುದು ದೀರ್ಘಕಾಲದವರೆಗೆ ಇರಬೇಕು. ತಜ್ಞರು ಹೇಳುವಂತೆ ಮ್ಯೂಚುವಲ್ ಫಂಡ್ ವರ್ಷಕ್ಕೆ ಶೇಕಡ 15% ನೀಡುತ್ತದೆ. ಉದಾಹರಣೆಗೆ 30 ವರ್ಷದ ವರೆಗೆ 1000 ರೂಪಾಯಿಯಂತೆ ಪ್ರತಿ ತಿಂಗಳಿನಂತೆ ಉಳಿತಾಯ ಮಾಡಿದರೆ ನೀವು 70 ಲಕ್ಷ ರೂಪಾಯಿಗಳಿಗಿಂತ ಅಧಿಕ ಹಣವನ್ನು ಗಳಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಮ್ಯೂಚುವಲ್ ಫಂಡ್ ಕಂಪನಿಗಳು step-up ಎನ್ನುವ ವಿಶಿಷ್ಟ ಯೋಜನೆಯನ್ನು ಜಾರಿಗೆ ತಂದಿದೆ. ಇದರಲ್ಲಿ ನೀವು ಪ್ರತಿ ವರ್ಷ ಶೇಕಡಾ ಐದರಷ್ಟು ಉಳಿತಾಯವನ್ನು ಹೆಚ್ಚಿಸಬೇಕು. ಅಂದರೆ ಮೊದಲ ವರ್ಷ ನೀವು 1000 ರೂಪ ಕಟ್ಟುತ್ತಿದ್ದರೆ ನಂತರ ವರ್ಷದಲ್ಲಿ 1050 ರೂಪಾಯಿ ಆಗಲಿದೆ ನಂತರದ ವರ್ಷದಲ್ಲಿ 1100 ರೂಪಾಯಿ ಆಗಲಿದೆ.

ನೀವು ಶೇಕಡ 10% ಸ್ಟೆಪ್ ಅಪ್ ಎಸ್ ಐ ಪಿ ಯನ್ನು ಆಯ್ಕೆ ಮಾಡಿದಾಗ ವರ್ಷಕ್ಕೆ ಶೇಕಡ 15ರಷ್ಟು ರಿಟರ್ನ್ಸ್ ಬರುತ್ತದೆ ಎನ್ನುವುದಾದರೆ ಅದನ್ನು ನೀವು 28 ವರ್ಷಗಳ ಕಾಲ ಮಾಡಿದರೆ ಒಂದು ಕೋಟಿಗಿಂತ ಅಧಿಕ ಆದಾಯವನ್ನು ನೀವು ಮರಳಿ ಪಡೆಯಬಹುದಾಗಿದೆ. ಇದೇ ಯೋಜನೆಯನ್ನು ನೀವು 30 ವರ್ಷಗಳ ಕಾಲ ಮುಂದುವರೆಸುವುದು ಆದರೆ 1.30 ಕೋಟಿ ರೂಪಾಯಿಗಳನ್ನು ನೀವು ನಿಮ್ಮ ಖಾತೆಗೆ ಹಾಕಿ ಕೊಳ್ಳಬಹುದಾಗಿದೆ. ನೀವು ಇದನ್ನು ಪ್ರಾರಂಭ ಮಾಡುವ ಮೊದಲು ಮ್ಯೂಚುಯಲ್ ಫಂಡ್ ಕುರಿತಂತೆ ಉತ್ತಮ ಜ್ಞಾನವನ್ನು ಹೊಂದಿರುವ ನಿಮ್ಮ ಪರಿಚಯಸ್ಥರನ್ನು ಕೇಳಿಕೊಂಡು ಇದರಲ್ಲಿ ಹೂಡಿಕೆ ಮಾಡುವುದು ಉತ್ತಮ. ಆದರೆ ಮ್ಯೂಚುಯಲ್ ಫಂಡ್ ಖಂಡಿತವಾಗಿ ನಿಮಗೆ ದೀರ್ಘಕಾಲದಲ್ಲಿ ಉತ್ತಮ ಆದಾಯವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.