ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಈ ಬಾರಿಯ ಐಪಿಎಲ್ ಗೆ ಬಿಸಿಸಿಐ ವಿಮೆ ಮಾಡಿಸಿರುವ ಮೊತ್ತ ಎಷ್ಟು ಗೊತ್ತೇ?? ಒಂದು ವೇಳೆ ಐಪಿಎಲ್ ನಿಂತು ಹೋದರೇ ಇನ್ಶೂರೆನ್ಸ್ ಕಂಪನಿಗಳು ಎಷ್ಟು ಕೋಟಿ ಕೊಡಲಿವೆ ಗೊತ್ತೇ?

42

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಕ್ರಿಕೆಟ್ ಸಂಸ್ಥೆ ನಡೆಸುವಂತಹ ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಐಪಿಎಲ್ ಅನ್ನು ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎನ್ನುವುದಾಗಿ ಸುಖಾಸುಮ್ಮನೆ ಹೇಳುವುದಿಲ್ಲ. ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ನಡೆಸುವಂತಹ ಐಪಿಎಲ್ ಸಾಕಷ್ಟು ವಿಚಾರಗಳಿಗಾಗಿ ತನ್ನ ದುಬಾರಿ ತನವನ್ನು ಆಗಾಗ ಪ್ರದರ್ಶಿಸುತ್ತಲೇ ಇರುತ್ತದೆ.

ಈಗಾಗಲೇ ವಿಶ್ವದಲ್ಲಿ ಐಪಿಎಲ್ ಅನ್ನು ನೋಡಿ ಹಲವಾರು ಕ್ರಿಕೆಟ್ ಸಂಸ್ಥೆಗಳು ಕ್ರಿಕೆಟ್ ಟೂರ್ನಮೆಂಟ್ ಅನ್ನು ಪ್ರಾರಂಭಿಸಿದರು ಕೂಡ ಐಪಿಎಲ್ ರೇಂಜಿನಲ್ಲಿ ಯಶಸ್ಸನ್ನಾಗಲಿ ಅಥವಾ ದುಬಾರಿ ತನವನ್ನಾಗಲಿ ಪ್ರದರ್ಶಿಸಲು ಸಾಧ್ಯವೇ ಇಲ್ಲ. ಐಪಿಎಲ್ ಹಲವಾರು ಕಾರಣಗಳಿಗಾಗಿ ಪ್ರತಿವರ್ಷ ಪ್ರೇಕ್ಷಕರಿಗೆ ವಿಶೇಷವಾದ ಕ್ರಿಕೆಟ್ ಅನುಭವವನ್ನು ತರುತ್ತದೆ. ಅದರಲ್ಲೂ ಈ ಬಾರಿಯ ಟಾಟಾ ಐಪಿಎಲ್ 2022 ರಲ್ಲಿ ಎರಡು ಹೊಸ ತಂಡಗಳು ಕೂಡ ಟೂರ್ನಮೆಂಟನ್ನು ಸೇರಿಕೊಂಡಿವೆ. ಇನ್ನು ಈ ಬಾರಿಯ ಐಪಿಎಲ್ ಅನ್ನು ಟಾಟಾ ಸಂಸ್ಥೆ ಸ್ಪಾನ್ಸರ್ ಆಗಿ ನಿರ್ವಹಿಸುತ್ತಿದೆ.

ನಿಮಗೆ ತಿಳಿದಿರುವಂತೆ ಇಂತಹ ದೊಡ್ಡ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸುವಾಗ ಹಲವಾರು ಅನಿಶ್ಚತತೆ ಗಳನ್ನು ಎದುರಿಸಬೇಕಾಗುತ್ತದೆ. ಹವಾಮಾನ ಗಲಬೆ ಹೀಗೆ ಟೂರ್ನಮೆಂಟ್ ಗೆ ಅಡ್ಡಿ ಅಥವಾ ಹಾನಿ ಉಂಟು ಮಾಡುವಂತಹ ಹಲವಾರು ವಿಚಾರಗಳು ಯಾರಿಗೂ ತಿಳಿಯದಂತೆ ನಡೆಯಬಹುದು. ಹೀಗಾಗಿ ಇಂತಹ ಪರಿಸ್ಥಿತಿಯನ್ನು ಎದುರಿಸಲು ವಿಮೆಯನ್ನು ಮಾಡಲಾಗುತ್ತದೆ. ಇಂತಹ ಅನಿಶ್ಚಿತ ಘಟನೆಗಳಿಂದ ನಷ್ಟವನ್ನು ತಪ್ಪಿಸಲು ವಿಮೆಯನ್ನು ಮಾಡಲಾಗುತ್ತದೆ. ಕಳೆದ ಆವೃತ್ತಿಯಲ್ಲಿ ನಾಲ್ಕು ಸಾವಿರ ಕೋಟಿ ರೂಪಾಯಿ ವಿಮೆಯನ್ನು ಮಾಡಲಾಗಿತ್ತು. ಆದರೆ ಈ ಬಾರಿಯ ಐಪಿಎಲ್ ನಲ್ಲಿ ವಿಮೆಯ ಮೊತ್ತವನ್ನು ಹೆಚ್ಚಿಸಲಾಗಿದೆ.

ಅದಕ್ಕೆ ಕಾರಣಗಳು ಕೂಡವೆ ಈ ಬಾರಿ ಎರಡು ಹೊಸ ತಂಡಗಳು ಸೇರಿವೆ. ಈ ಬಾರಿಯ ಪಂದ್ಯಗಳನ್ನು ಕೇವಲ ಮಹಾರಾಷ್ಟ್ರ ರಾಜ್ಯದಲ್ಲಿ ಮಾಡಲಾಗುತ್ತಿದೆ. ಅಂದರೆ ಒಂದೇ ಜಾಗದಲ್ಲಿ, ಈಗ ಸದ್ಯಕ್ಕೆ ಮುಂಬೈ ಹಾಗೂ ಪುಣೆ ನಗರಗಳಲ್ಲಿ ಮಾತ್ರ ಪಂದ್ಯಾಟಗಳು ನಡೆಯುತ್ತಿವೆ. ಹೀಗಾಗಿ ಇಂತಹ ಕ್ರಮಗಳಿಂದಾಗಿ ಅಪಾಯಗಳು ಕೂಡ ಹೆಚ್ಚಿವೆ. ಹೀಗಾಗಿ ಈ ಬಾರಿಯ ವಿಮೆಯನ್ನು 5000 ಕೋಟಿ ರೂಪಾಯಿ ಹೆಚ್ಚಿಸಲಾಗಿದೆ. ಅಂದರೆ ಕಳೆದ ಬಾರಿಯ ನಿಮಗಿಂತ 25% ಹೆಚ್ಚಿಸಲಾಗಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಈ ಬಾರಿ ತಂಡಗಳ ಹಾಗೂ ಪಂದ್ಯಾಟಗಳ ಹೆಚ್ಚಿಗೆ ನಡುವೆ ವಿಮೆಯ ಮೊತ್ತ ಕೂಡ ಹೆಚ್ಚಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

Get real time updates directly on you device, subscribe now.