ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಚೆನ್ನೈ ವಿರುದ್ಧ ಸೋತಿರುವ ಆರ್ಸಿಬಿ ತಂಡ, ಮುಂದೆ ಡೆಲ್ಲಿ ವಿರುದ್ದದ ಪಂದ್ಯದಲ್ಲಿ ಗೆಲ್ಲಬೇಕು ಎಂದರೆ, ಈ ಕೆಲಸ ಮಾತ್ರ ಮಾಡಬಾರದು. ಏನು ಗೊತ್ತೇ??

62

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ನಮ್ಮೆಲ್ಲರ ನೆಚ್ಚಿನ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನಲ್ಲಿ 2 ಸೋಲು ಹಾಗೂ 3 ಗೆಲುವಿನೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಆರನೇ ಸ್ಥಾನವನ್ನು ಅಲಂಕರಿಸಿದೆ. ಇನ್ನು ಇದೇ ಏಪ್ರಿಲ್ 16ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ. ಈ ಸಂದರ್ಭದಲ್ಲಿ ಕೆಲವೊಂದು ಮಿಸ್ಟೇಕ್ ಗಳ ಕುರಿತಂತೆ ಅವಲೋಕನ ಮಾಡುವುದು ಒಳ್ಳೆಯದು.

ನಿಮಗೆಲ್ಲರಿಗೂ ಮೊದಲೇ ಗೊತ್ತಿರುವ ಹಾಗಿರುವಾಗ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ವಿಚಾರದಲ್ಲಿ ಸಾಕಷ್ಟು ಹೊಂದಿದ್ದು ದೊಡ್ಡ ಮೊತ್ತವನ್ನಾಗಲಿ ಬೆನ್ನತ್ತಿ ಗುರಿ ಸಾಧಿಸುವ ತಾಕತ್ತು ತಂಡಕ್ಕಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಗ್ಗರಿಸಿತು ಎಂದು ಹೇಳಬಹುದಾಗಿದೆ. ಆದರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಸೋತಿತು ಎಂದು ಹೇಳುವುದಕ್ಕಿಂತ ವಿರೋಚಿತ ಸೋಲನ್ನು ಅನುಭವಿಸಿತು ಎಂದು ಹೇಳಬಹುದಾಗಿದೆ.

ಯಾಕೆಂದರೆ ಕೊನೆಯವರೆಗೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ದಿನೇಶ್ ಕಾರ್ತಿಕ್ ರವರ ಬ್ಯಾಟಿಂಗ್ ನೋಡಿ ಗೆಲ್ಲುವುದು ಅನುಮಾನವೇ ಎಂಬುದಾಗಿ ಅಂದುಕೊಂಡಿತ್ತು. ಅಷ್ಟರ ಮಟ್ಟಿಗೆ ದಿನೇಶ್ ಕಾರ್ತಿಕ್ ರವರು ಎಂಟನೇ ವಿಕೆಟ್ ನಲ್ಲಿಯೂ ಕೂಡ ಉತ್ತಮ ಆಟವನ್ನು ಪ್ರದರ್ಶಿಸಿದ್ದರು. ನಾನ್ ಸ್ಟ್ರೈಕ್ ಎಂಡ್ ನಲ್ಲಿ ಇನ್ನೊಬ್ಬ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಸಾಥ್ ನೀಡಿದ್ದರೆ ಖಂಡಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಗೆಲ್ಲುತ್ತಿತ್ತು.

ಈ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ನಡೆದಿದೆ. ಈ ತಪ್ಪನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸರಿಪಡಿಸಿಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಪ್ರಮುಖವಾಗಿ ಸೋಲಿಗೆ ಕಾರಣವಾಗಿರುವುದು ಹರ್ಷಲ್ ಪಟೇಲ್ ರವರ ಅನುಪಸ್ಥಿತಿ ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ತಂಡದ ಪ್ರಮುಖ ಬೌಲರ್ ಆಗಿರುವ ಹರ್ಷಲ್ ಪಟೇಲ್ ಅವರು ತಮ್ಮ ವೈಯಕ್ತಿಕ ಫ್ಯಾಮಿಲಿ ಕಾರಣಗಳಿಂದಾಗಿ ತಂಡವನ್ನು ಬಿಟ್ಟು ಈಗ ಹೊರ ಹೋಗಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ನಲ್ಲಿ ಸಾಕಷ್ಟು ಕೊರತೆ ಉಂಟಾಗುವಂತೆ ಮಾಡಿದೆ. ಹೀಗಾಗಿ ಕೊನೆಯ ಓವರ್ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಗಳು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬೇಕಾಬಿಟ್ಟಿಯಾಗಿ ರನ್ನುಗಳನ್ನು ಬಿಟ್ಟುಕೊಟ್ಟಿದ್ದಾರೆ.

ಹರ್ಷಲ್ ಪಟೇಲ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲಿಂಗ್ ಆಲ್ರೌಂಡರ್ ಆಗಿದ್ದರು. ತಂಡದಲ್ಲಿ ಕ್ರೂಷಿಯಲ್ ಸಮಯದಲ್ಲಿ ತಂಡದ ಸೇವಿಯರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರ ಬದಲಿ ಬೌಲರ್ ಆಟಗಾರನನ್ನು ಅಂದರೆ ಸಿದ್ಧಾರ್ಥ್ ಕೌಲ್ ಅಥವಾ ಮಿಲಿಂದ್ ರವರನ್ನು ತಂಡದಲ್ಲಿ ಹಾಕಿ ಕೊಳ್ಳಬೇಕಾಗಿತ್ತು ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆಲಸವನ್ನು ಮಾಡಲಿಲ್ಲ. ಇದು ಕೂಡ ಹಿನ್ನಡೆಗೆ ಕಾರಣವಾಗಿರಬಹುದು ಎಂಬುದಾಗಿ ಅವಲೋಕಿಸಲಾಗಿದೆ.

ಇನ್ನು ಡುಪ್ಲೆಸಿಸ್ ಅವರವರ ನಾಯಕತ್ವವು ಕೂಡ ಹರ್ಷಲ್ ಪಟೇಲ್ ರವರ ಅನುಪಸ್ಥಿತಿಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಡೆ’ತ್ ಓವರ್ ಗಳಲ್ಲಿ ಹೆಚ್ಚಾಗಿ ಬೌಲಿಂಗ್ ಮಾಡುತ್ತಿದ್ದದ್ದು ಹರ್ಷಲ್ ಪಟೇಲ್ ರವರು. ಆದರೆ ಈ ಬಾರಿ ಅವರ ಅನುಪಸ್ಥಿತಿಯಲ್ಲಿ ಯಾರಿಗೆ ಬೌಲಿಂಗ್ ನೀಡುವುದು ಎನ್ನುವುದು ಡುಪ್ಲೆಸಿಸ್ ರವರಿಗೆ ಗೊಂದಲವಾಗಿತ್ತು ಈ ಕಾರಣದಿಂದಾಗಿಯೇ ಹಸರಂಗ ಸೇರಿದಂತೆ ಬೇರೆಯವರಿಗೆ ಬೌಲಿಂಗ್ ನೀಡಿ 180 ಆಸುಪಾಸಿನಲ್ಲಿ ಇರಬೇಕಾಗಿದ್ದ ಟಾರ್ಗೆಟ್ 200ನ್ನು ದಾಟಿತ್ತು.

ಒಟ್ಟಾರೆಯಾಗಿ ಗಮನಿಸಿದರೆ ಹರ್ಷಲ್ ಪಟೇಲ್ ರವರ ಅನುಪಸ್ಥಿತಿ ತಂಡವನ್ನು ಬೆಂಬಿಡದಂತೆ ಕಾಡಿದೆ. ಹೀಗಾಗಿ ಅವರ ಬದಲಿ ಬೌಲರನ್ನು ತಂಡದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಹಾಗೂ ಆದಷ್ಟು ಬೇಗ ಹರ್ಷಲ್ ಪಟೇಲ್ ರವರು ತಂಡವನ್ನು ಸೇರಿಕೊಳ್ಳಲಿ ಎಲ್ಲರ ಆಶಯವಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಶೇರ್ ಮಾಡಿಕೊಳ್ಳುವುದು ಮಾತ್ರ ಮರೆಯಬೇಡಿ.

Get real time updates directly on you device, subscribe now.