ಸಹೋದರಿ ಇಹಲೋಕ ತ್ಯಜಿಸಿದ ಬಳಿಕ ತಂಡ ತೊರೆದಿರುವ ಹರ್ಷಲ್ ಬದಲಿಗೆ ಚೆನ್ನೈ ವಿರುದ್ಧ ಆಡುತ್ತಿರುವ ಬೌಲರ್ ಯಾರು ಗೊತ್ತೇ??

ಸಹೋದರಿ ಇಹಲೋಕ ತ್ಯಜಿಸಿದ ಬಳಿಕ ತಂಡ ತೊರೆದಿರುವ ಹರ್ಷಲ್ ಬದಲಿಗೆ ಚೆನ್ನೈ ವಿರುದ್ಧ ಆಡುತ್ತಿರುವ ಬೌಲರ್ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಪ್ರದರ್ಶನದ ಮೂಲಕ ಕೇವಲ ಅಂಕಪಟ್ಟಿಯಲ್ಲಿ ಮಾತ್ರವಲ್ಲದೆ ಅಭಿಮಾನಿಗಳ ಮನಸ್ಸಿನಲ್ಲಿ ಕೂಡ ಒಂದೊಂದೇ ಸ್ಥಾನ ಮೇಲೇರುತ್ತಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಈಗಾಗಲೇ ಮೂರು ಪಂದ್ಯಗಳನ್ನು ಗೆದ್ದು ಆರು ಅಂಕಗಳನ್ನು ಸಂಪಾದಿಸಿದೆ.

ಖಂಡಿತವಾಗಿ ಈ ಬಾರಿ ಡುಪ್ಲೆಸಿಸ್ ರವರ ನಾಯಕತ್ವ ತಂಡದಲ್ಲಿ ಉತ್ತಮ ಬದಲಾವಣೆ ತಂದಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ತಂಡದಲ್ಲಿ ಬಹುತೇಕ ಎಲ್ಲಾ ಆಟಗಾರರು ಕೂಡ ಸಮಾನ ಪ್ರದರ್ಶನವನ್ನು ನೀಡುತ್ತಿದ್ದಾರೆ. ಈ ಬಾರಿ ಯಾವುದೇ ವಿಭಾಗದಲ್ಲಿಯೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊರತೆಯನ್ನು ವರ್ಷದ ಮಟ್ಟಿಗೆ ಕಡಿಮೆ ಅಥವಾ ಕಳಪೆ ಪ್ರದರ್ಶನವನ್ನು ನೀಡುತ್ತಿಲ್ಲ ಎನ್ನುವುದು ಎಲ್ಲರಿಗೂ ಇರುವಂತಹ ಸಮಾಧಾನಕರ ವಿಚಾರ.

ಇನ್ನು ಈಗಾಗಲೇ ನಾಲ್ಕು ಪಂದ್ಯಗಳನ್ನು ಆಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಆಡಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋಲು-ಗೆಲುವಿನ ರೇಶಿಯೋ ನೋಡಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವೇ ಮೇಲಿದೆ ಆದರೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿರುವ ನಾಲ್ಕು ಪಂದ್ಯಗಳನ್ನು ಕೂಡ ಸೋತು ಸುಣ್ಣವಾಗಿ. ಹೀಗಾಗಿ ಗೆಲ್ಲುವ ಫೇವರಿಟ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಾಗಿದೆ. ಆದರೆ ಇದಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ತಲುಪಿದೆ ಎಂದರೆ ತಪ್ಪಾಗಲಾರದು.

ಹೌದು ಗೆಳೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಆಗಿರುವ ಹರ್ಷಲ್ ಪಟೇಲ್ ರವರ ತಂಗಿ ಇತ್ತೀಚಿಗಷ್ಟೇ ಮರಣವನ್ನು ಹೊಂದಿರುವುದು ನಿಮಗೆಲ್ಲರಿಗೂ ತಿಳಿದಿದೆ. ಇದೇ ಕಾರಣಕ್ಕಾಗಿ ಹರ್ಷಲ್ ಪಟೇಲ್ ರವರು ಮನೆಗೆ ಹಿಂದಿರುಗಿದ್ದಾರೆ. ಮುಂದಿನ ದಿನಗಳಲ್ಲಿ ಆಡಲು ಹರ್ಷಲ್ ಪಟೇಲ್ ರವರು ಬಂದರೂ ಕೂಡ ಖಂಡಿತವಾಗಿ ಹಲವಾರು ದಿನಗಳೇ ಕಳೆಯಬಹುದಾಗಿದೆ. ಯಾಕೆಂದರೆ ಕ್ವಾರಂಟೈನ್ ಸೇರಿದಂತೆ ಬಯೋ ಬಬಲ್ ಮಾದರಿಯ ಹಲವಾರು ಪ್ರಕ್ರಿಯೆಗಳಲ್ಲಿ ಒಳಗಾಗಬೇಕಾಗುತ್ತದೆ. ಹೀಗಾಗಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಒಂದು ಹರ್ಷಲ್ ಪಟೇಲ್ರವರು ಬರುವ ಸಾಧ್ಯತೆ ಇಲ್ಲ.

ಸದ್ಯಕ್ಕೆ ಆಸ್ಟ್ರೇಲಿಯಾ ಮೂಲದ ವೇಗದ ಬೌಲರ್ ಆಗಿರುವ ಜೋಶ್ ಹೆಝಲ್ ವುಡ್ ರವರು ಮುಂದಿನ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನುವ ಶುಭಸುದ್ದಿ ಕೂಡ ಸಿಕ್ಕಿದೆ. ಆದರೆ ಹರ್ಷಲ್ ಪಟೇಲರವರ ಬದಲಿಗೆ ಇಂಡಿಯನ್ ಬೌಲರ್ ಯಾರು ಅವರ ಸ್ಥಾನವನ್ನು ತುಂಬಲಿದ್ದಾರೆ ಎನ್ನುವ ಕುರಿತಂತೆ ಎರಡು ಆಯ್ಕೆಗಳು ಈಗ ಕಣ್ಣಮುಂದಿವೆ. ಹಾಗಿದ್ದರೆ ಅವರು ಯಾರು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ವಿರಾಟ್ ಕೊಹ್ಲಿ ರವರ ಜೊತೆಗೆ ಅಂಡರ್-19 ತಂಡದ ಜೊತೆ ಆಟಗಾರ ಆಗಿರುವ ಹಾಗೂ ಈ ಹಿಂದೆ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪ್ರಮುಖ ಬೌಲರ್ ಆಗಿ ಕಾಣಿಸಿಕೊಂಡಿದ್ದ ಸಿದ್ಧಾರ್ಥ್ ಕೌಲ್ ರವರು ಈ ಬಾರಿ ಅಂದರೆ ಚೆನ್ನೈ ತಂಡದ ವಿರುದ್ಧ ಪಂದ್ಯದಲ್ಲಿ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ಸುದ್ದಿಗಳು ಕೇಳಿಬರುತ್ತಿವೆ. ಮತ್ತೊಬ್ಬ ಬೌಲರ್ ಆಗಿರುವ ಮಿಲಿಂದ್ ಕೂಡ ಆಯ್ಕೆಯ ನಿರೀಕ್ಷೆ ಪಟ್ಟಿಯಲ್ಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಖಂಡಿತವಾಗಿ ಮುಂದಿನ ಪಂದ್ಯವನ್ನು ಆಡಲಿದ್ದಾರೆ ಎಂಬುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಒಳ ಮೂಲಗಳು ತಿಳಿಸಿವೆ. ನಿಮ್ಮ ಪ್ರಕಾರ ಯಾರು ಆಡಬಹುದು ಎನ್ನುವುದನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುವ ಮೂಲಕ ಶೇರ್ ಮಾಡಿಕೊಳ್ಳಿ.