ಮುಂಬೈ ವಿರುದ್ಧ ಆರ್ಸಿಬಿಗೆ ತಂಡಕ್ಕೆ ಭರ್ಜರಿ ಗೆಲುವು, ಈ ಪಂದ್ಯದಲ್ಲಿ ಗಮನಿಸಬೇಕಾಗಿರುವಂತಹ ಪ್ರಮುಖ ಅಂಶಗಳು ಯಾವ್ಯಾವು ಗೊತ್ತೇ??

ಮುಂಬೈ ವಿರುದ್ಧ ಆರ್ಸಿಬಿಗೆ ತಂಡಕ್ಕೆ ಭರ್ಜರಿ ಗೆಲುವು, ಈ ಪಂದ್ಯದಲ್ಲಿ ಗಮನಿಸಬೇಕಾಗಿರುವಂತಹ ಪ್ರಮುಖ ಅಂಶಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ನಲ್ಲಿ ಎಲ್ಲಾ ತಂಡಗಳು ಕೂಡ ಸಾಕಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿದಿರುವುದರಿಂದಾಗಿ ಈ ಬಾರಿ ಬಹುತೇಕ ಎಲ್ಲಾ ತಂಡಗಳು ಕಪ್ ಗೆಲ್ಲಲು ಫೇವರೆಟ್ ತಂಡಗಳು ಎಂದು ಎನಿಸಿದೆ. ಚಾಂಪಿಯನ್ ತಂಡ ಗಳಾಗಿರುವ ಮುಂಬೈ ಇಂಡಿಯನ್ಸ್ ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈ ಬಾರಿ ಐಪಿಎಲ್ ನಲ್ಲಿ ಮಂಕುಬಡಿದಂತೆ ನಾಲ್ಕಕ್ಕೆ ನಾಲ್ಕೂ ಪಂದ್ಯಗಳನ್ನು ಕೊಡುತ್ತಿವೆ. ಇದು ಈ ಬಾರಿಯ ಐಪಿಎಲ್ ಅಭಿಮಾನಿಗಳಿಗೆ ಆಶ್ಚರ್ಯವನ್ನು ತರಿಸಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

ಇದುವರೆಗೂ ಕೂಡ ಕಪ್ ಗೆಲ್ಲದೆ ಇರುವ ನಮ್ಮೆಲ್ಲರ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್ ನಲ್ಲಿ ನಾಲ್ಕಕ್ಕೆ ಮೂರು ಪಂದ್ಯಗಳನ್ನು ಈಗಾಗಲೇ ಗೆದ್ದಿದೆ. ಹೀಗಾಗಿ ಈ ಬಾರಿಯ ಕಪ್ ಗೆಲ್ಲುವ ಫೆವರೇಟ್ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಾಣೋದಕ್ಕೆ ಸಿಗುತ್ತಿದೆ. ಇದು ನಿಜಕ್ಕೂ ಕೂಡ ನಮ್ಮ ರಾಯಲ್ ಅಭಿಮಾನಿಗಳಿಗೆ ಸಂತೋಷವನ್ನು ನೀಡಿರುವುದಂತೂ ಸುಳ್ಳಲ್ಲ. ಪ್ರತಿವರ್ಷ ಕಪ್ ಗೆಲ್ಲಬಹುದು ಎನ್ನುವ ಅನುಮಾನಗಳು ಮೂಡುತ್ತಿದ್ದವು. ಆದರೆ ಈ ಬಾರಿ ಖಂಡಿತವಾಗಿ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನುವ ಆತ್ಮವಿಶ್ವಾಸ ಮೂಡಿದೆ ಎಂಬುದಾಗಿ ಹೇಳಬಹುದಾಗಿದೆ.

ಅದರಲ್ಲೂ ನಿನ್ನೆಯಷ್ಟೇ ಐದು ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಸುಲಭವಾಗಿ ಸೋಲಿಸಿದ ಮೇಲೆ ಖಂಡಿತವಾಗಿ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುವಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಮೊದಲನೇ ಗೆಲುವನ್ನು ಹುಡುಕುತ್ತಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ಸೋಲನ್ನು ಉಣಿಸುವ ಮೂಲಕ 7 ವಿಕೆಟ್ಗಳ ಗೆಲುವನ್ನು ಪುಣೆಯ ಮೈದಾನದಲ್ಲಿ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಮೊತ್ತವನ್ನು ಕಲೆಹಾಕುವಲ್ಲಿ ಒದ್ದಾಡುತ್ತಿತ್ತು. ತಂಡದ ನೆರವಿಗೆ ಬಂದ ಸೂರ್ಯ ಕುಮಾರ್ ಯಾದವ್ 68 ರನ್ನುಗಳು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ. ತಂಡ 151 ರನ್ನುಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 152 ರನ್ನುಗಳ ಗುರಿಯನ್ನು ಒಂಬತ್ತು ಹೆಸರುಗಳು ಉಳಿದಿರುವಂತೆ ಗೆದ್ದು ಬೀಗಿದೆ.

ನಿನ್ನೆಯ ಪಂದ್ಯದಲ್ಲಿ ಮೂರು ವಿಚಾರಗಳು ಪ್ರಮುಖವಾಗಿ ಗಮನ ಸೆಳೆದಿವೆ. ಮೊದಲನೇದಾಗಿ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಹಂತದಲ್ಲಿ 62 ರನ್ನುಗಳಿಗೆ ಐದು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿ ಬಂದ ಸೂರ್ಯ ಕುಮಾರ್ ಯಾದವ್ ಅವರು ಬರೋಬ್ಬರಿ 37 ಎಸೆತಗಳಲ್ಲಿ 68 ರನ್ನುಗಳನ್ನು ಬಾರಿಸಿದ್ದಾರೆ. ಇದರಲ್ಲಿ ಐದು ಬೌಂಡರಿ ಹಾಗೂ ಆರು ಸಿಕ್ಸರ್ ಗಳು ಕೂಡ ಶಾಮೀಲಾಗಿವೆ. ಮೊಹಮ್ಮದ್ ಸಿರಾಜ್ ರವರ ಓವರ್ನಲ್ಲಿ ಬರೋಬ್ಬರಿ 21 ರನ್ ಗಳನ್ನು ಕೂಡ ಬಾರಿಸಿ ಎಲ್ಲರೂ ಮಂತ್ರಮುಗ್ಧವಾಗುವಂತೆ ಮಾಡಿದ್ದಾರೆ.

152 ರನ್ನುಗಳ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಯುವ ಉದಯೋನ್ಮುಖ ಆಟಗಾರನಾಗಿರುವ ಅನುಜ್ ರಾವತ್ ರವರು ಒಂದು ಒಳ್ಳೆ ಸ್ಟ್ಯಾಂಡಿಂಗ್ ಆಟೋವನ್ನು ನೀಡಿದ್ದಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. 47 ಎಸೆತಗಳಲ್ಲಿ ಬರೋಬ್ಬರಿ 66 ರನ್ನುಗಳನ್ನು ಬಾರಿಸಿರುವ ಅನುಜ್ ರಾವತ್ ಎರಡು ಬೌಂಡರಿ ಹಾಗೂ ಆರು ಸಿಕ್ಸರ್ ಗಳನ್ನು ಬಾರಿಸಿದ್ದಾರೆ. ತಂಡದ ಕಪ್ತಾನ ಹಾಗೂ ಓಪನಿಂಗ್ ಬ್ಯಾಟ್ಸ್ ಮ್ಯಾನ್ ಆಗಿರುವ ಡುಪ್ಲೆಸಿಸ್ ರವರು ಬೇಗನೆ ಔಟ್ ಆದನಂತರ ವಿರಾಟ್ ಕೊಹ್ಲಿ ಅವರ ಜೊತೆಗೂಡಿ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದ್ದಾರೆ.

ಇನ್ನು ಮೂರನೇ ವಿಚಾರವನ್ನು ಗಮನಿಸುವುದಾದರೆ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಲೈನ್ ಅಪ್ ತುಂಬಾನೇ ವೀಕ್ ಆಗಿ ಕಾಣಿಸಿಕೊಂಡಿದೆ ಎಂದರೂ ತಪ್ಪಾಗಲಾರದು. ಯಾಕೆಂದರೆ ಡುಪ್ಲೆಸಿಸ್ ರವರ ವಿಕೆಟನ್ನು ಬೇಗನೆ ತೆಗೆಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಓಟಕ್ಕೆ ತಡೆ ಹಾಕುವ ಪ್ರಯತ್ನವನ್ನು ಮುಂಬೈ ಇಂಡಿಯನ್ಸ್ ತಂಡ ಮುಂದೆ ಮಾಡುವುದಕ್ಕೆ ಹೋಗಲಿಲ್ಲ ಎಂದು ಹೇಳಬಹುದಾಗಿದೆ. ಎಲ್ಲಾ ಪಂದ್ಯಗಳನ್ನು ಈ ಪಂದ್ಯಗಳಲ್ಲಿ ಕೂಡ ಮುಂಬೈ ಇಂಡಿಯನ್ಸ್ ತಂಡದ ಸೋಲಿಗೆ ಬೌಲಿಂಗ್ ವಿಭಾಗದಲ್ಲಿರುವ ಕೊರತೆಯೆಂದು ಕೂಡ ಹೇಳಬಹುದಾಗಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಗೆಲ್ಲಲು ಎರಡು ವಿಭಾಗದಲ್ಲಿ ಅದರಲ್ಲೂ ಕೂಡ ವಿಶೇಷವಾಗಿ ಬೌಲಿಂಗ್ ವಿಭಾಗದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸ್ವಲ್ಪಮಟ್ಟಿಗೆ ತಲೆಕೆಡಿಸಿಕೊಳ್ಳಬೇಕಾಗಿದೆ.