RCB ಗೆ ಮತ್ತೊಮ್ಮೆ ಮೋಸ ನಡೆಯಿತೇ, ಕಳೆದ ಬಾರಿ ನೋಬಾಲ್ ಈ ಬಾರಿ ಔಟ್; ಅದೂ ಕೊಹ್ಲಿ ವಿರುದ್ಧವೇ ಆಗಬೇಕಾ, ವೈರಲ್ ಆ ವಿಡಿಯೋದಲ್ಲಿ ಏನಿದೆ ಗೊತ್ತೇ??

RCB ಗೆ ಮತ್ತೊಮ್ಮೆ ಮೋಸ ನಡೆಯಿತೇ, ಕಳೆದ ಬಾರಿ ನೋಬಾಲ್ ಈ ಬಾರಿ ಔಟ್; ಅದೂ ಕೊಹ್ಲಿ ವಿರುದ್ಧವೇ ಆಗಬೇಕಾ, ವೈರಲ್ ಆ ವಿಡಿಯೋದಲ್ಲಿ ಏನಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಖಂಡಿತವಾಗಿ ಈ ಬಾರಿಯ ಟಾಟಾ ಐಪಿಎಲ್ 2022 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ತಂಡದ ಅಭಿಮಾನಿಗಳಿಗೆ ಸಂತೋಷದಾಯಕ ಸೀಸನ್ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇದಕ್ಕೆ ಕಾರಣ ಡುಪ್ಲೆಸಿಸ್ ರವರ ನಾಯಕತ್ವವೇ ಅಥವಾ ವಿರಾಟ್ ಕೊಹ್ಲಿ ರವರು ಮತ್ತೊಮ್ಮೆ ಬ್ಯಾಟಿಂಗ್ ಲಯಕ್ಕೆ ಮರಳಿರುವುದೇ ಯಾವುದು ಎಂದು ಸರಿಯಾಗಿ ಹೇಳಲು ಸಾಧ್ಯವಾಗುತ್ತಿಲ್ಲ ಆದರೆ ಎರಡು ಕೂಡ ಟ್ರ್ಯಾಕಿಗೆ ಮರಳಿ ಬಂದಿರುವುದು ನಿಜ.

ಹೌದು ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಬರೋಬ್ಬರಿ ಮೂರು ಪಂದ್ಯಗಳನ್ನು ಗೆದ್ದಿದೆ. ನಿನ್ನೆ ನಡೆದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಟೂರ್ನಮೆಂಟಿನ ನಾಲ್ಕನೇ ಸೋಲನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಣಿಸಿದೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವನ್ನು ಬಿಟ್ಟು ಬೇರೆ ಯಾವ ವಿಚಾರಗಳನ್ನು ಕೂಡ ತನ್ನೊಳಗೆ ತೆಗೆದುಕೊಳ್ಳಲು ಇಷ್ಟಪಡುತ್ತಿಲ್ಲ.

ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಕೂಡ ಸುಲಭವಾದ ಗೆಲುವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಾಖಲಿಸಿದೆ. ಈ ಬಾರಿಯ ಸೀಸನ್ ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಟವನ್ನು ಮರೆತಂತಿದೆ ಎಂದು ಹೇಳಬಹುದಾಗಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭವನ್ನು ಕಲೆ ಹಾಕುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಆದರೆ ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನೆರವಿಗೆ ಬಂದಿದ್ದು ಸೂರ್ಯಕುಮಾರ್ ಯಾದವ್. ಸೂರ್ಯ ಕುಮಾರ್ ಯಾದವ್ ರವರು 37 ಎಸೆತಗಳಲ್ಲಿ 68 ರನ್ನುಗಳನ್ನು ಕಲೆ ಹಾಕಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಗಳಿಗೆ 151 ರನ್ನುಗಳನ್ನು ಕಲೆ ಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಬೌಲಿಂಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಹಸರಂಗ ಹಾಗೂ ಹರ್ಷಲ್ ಪಟೇಲ್ ಇಬ್ಬರೂ ಕೂಡ ತಲಾ ಎರಡು ವಿಕೆಟ್ ಗಳನ್ನು ಪಡೆದುಕೊಂಡಿರುತ್ತಾರೆ.

ಆರಂಭದಿಂದಲೇ ಹಲವಾರು ಪಂದ್ಯಗಳಿಂದ ಫಾರ್ಮ್ ನಲ್ಲಿ ಇಲ್ಲದಿರುವಂತಹ ಕಿಂಗ್ ಕೊಹ್ಲಿ ಮತ್ತೊಮ್ಮೆ ಈ ಪಂದ್ಯದ ಮೂಲಕ ತಮ್ಮ ಅಸಲಿ ಫಾರ್ಮ್ ಗೆ ಮರಳುತ್ತಾರೆ. ಯುವ ಆಟಗಾರ ಅನುಜ್ ರವತ್ ಕೂಡ 47 ಎಸೆತಗಳಲ್ಲಿ 66 ರನ್ನುಗಳನ್ನು ಬಾರಿಸುತ್ತಾರೆ. ನಮ್ಮೆಲ್ಲರ ನೆಚ್ಚಿನ ಕಿಂಗ್ ಕೊಹ್ಲಿ 36 ಎಸೆತಗಳಲ್ಲಿ 48 ರನ್ ಬಾರಿಸಿದ್ದಾರೆ. ಒಂಬತ್ತು ಎಸೆತಗಳು ಉಳಿದಿರುವಂತೆ ತಂಡ ಗೆಲ್ಲಲು ಇವರಿಬ್ಬರೂ ಕೂಡ ಕಾರಣವಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿದ್ದೇನೋ ನಿಜ. ಆದರೆ ಇಲ್ಲಿ ನಿನ್ನೆ ವಿರಾಟ್ ಕೊಹ್ಲಿ ರವರ ವಿಚಾರದಲ್ಲಿ ಒಂದು ಅನ್ಯಾಯ ನಡೆದಿದೆ ಎಂದು ಹೇಳಬಹುದಾಗಿದೆ.

ಹೌದು ನಿನ್ನೆ ನಿಮಗೆಲ್ಲರಿಗೂ ತಿಳಿದಿರುವಂತೆ ವಿರಾಟ್ ಕೊಹ್ಲಿ ಇರುವವರು ಔಟ್ ಆಗುವ ಮೂಡಿನಲ್ಲಿರಲಿಲ್ಲ. ತಂಡವನ್ನು ನಾಟಕ ಆಗುವ ಮೂಲಕ ಗೆಲ್ಲಿಸಬೇಕೆಂದು ಇಚ್ಛೆ ಅವರಲ್ಲಿತ್ತು. ಆದರೆ ನಿನ್ನೆ ಬ್ರೇವಿಸ್ ರವರ ರವರ ಬೌಲಿಂಗ್ನಲ್ಲಿ ಅಂಪೈರ್ ವಿರಾಟ್ ಕೊಹ್ಲಿ ರವರಿಗೆ ಎಲ್ಬಿಡಬ್ಲ್ಯು ಔಟ್ ನೀಡುತ್ತಾರೆ. ಹಿರೇ ಕೂಡಲೇ ವಿರಾಟ್ ಕೊಹ್ಲಿ ಇರುವವರು ಈ ತೀರ್ಪಿನ ವಿರುದ್ಧ ಜಿಆರ್ಎಸ್ ತೆಗೆದುಕೊಳ್ಳುತ್ತಾರೆ. ಆದರೆ ಥರ್ಡ್ ಅಂಪೈರ್ ಕೂಡ ಬ್ಯಾಟ್ ಹಾಗೂ ಪ್ಯಾಡ್ ಒಂದೇ ಸಮಯದಲ್ಲಿ ಸಾಗಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸಿ ಅವರು ಕೂಡ ಹೌದು ಎನ್ನುವುದಾಗಿ ತೀರ್ಪನ್ನು ನೀಡುತ್ತಾರೆ.

ಇದು ಅಭಿಮಾನಿಗಳಲ್ಲಿ ಮಾತ್ರವಲ್ಲದೆ ವಿರಾಟ್ ಕೊಹ್ಲಿ ರವರಿಗೆ ಕೂಡ ಅಸಮಾಧಾನವನ್ನು ತರಿಸಿತ್ತು. ಈ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹಾಗೂ ಕೋಪದಿಂದ ಮೈದಾನದಿಂದ ಹೊರನಡೆದ ವಿರಾಟ್ ಕೊಹ್ಲಿ ರವರ ವಿಡಿಯೋ ತುಣುಕುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪದೇಪದೇ ಅಂಪೈರ್ಗಳು ವಿರಾಟ್ ಕೊಹ್ಲಿ ರವರಿಗೆ ಇಂತಹ ತಪ್ಪು ತೀರ್ಪುಗಳನ್ನು ಯಾಕೆ ನೀಡುತ್ತಾರೆ ಎಂಬುದಾಗಿ ಅಸಮಾಧಾನವನ್ನು ವ್ಯಕ್ತಪಡಿಸಿರುವ ರೀತಿ ಕಂಡುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಂಬಾನಿ ರವರು ಅಂಪೈರ್ ಗಳಿಗೆ ಇದಕ್ಕೂ ಕೂಡ ಹಣ ನೀಡಿದ್ದಾರೆಯೇ ಎನ್ನುವುದಾಗಿ ವ್ಯಂಗ್ಯವಾಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವೇನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.