ಮತ್ತೊಂದು ಹೊಸ ಹೆಜ್ಜೆ ಇತ್ತ ಟಾಟಾ, ಅಂಬಾನಿಯಿಂದ ಹಿಡಿದು ವಿಶ್ವದ ದಿಗ್ಗಜರು ಶಾಕ್ ಆಗಿದ್ದು ಯಾಕೆ ಗೊತ್ತೇ?? ಟಾಟಾ ಜೊತೆ ಕೈ ಜೋಡಿಸಲು ನಾವು ಸಿದ್ದ, ನೀವು??

ಮತ್ತೊಂದು ಹೊಸ ಹೆಜ್ಜೆ ಇತ್ತ ಟಾಟಾ, ಅಂಬಾನಿಯಿಂದ ಹಿಡಿದು ವಿಶ್ವದ ದಿಗ್ಗಜರು ಶಾಕ್ ಆಗಿದ್ದು ಯಾಕೆ ಗೊತ್ತೇ?? ಟಾಟಾ ಜೊತೆ ಕೈ ಜೋಡಿಸಲು ನಾವು ಸಿದ್ದ, ನೀವು??

ನಮಸ್ಕಾರ ಸ್ನೇಹಿತರೇ ಮೊದಲಿನಿಂದಲೂ ಕೂಡ ಭಾರತದ ವಾಣಿಜ್ಯ ಕ್ಷೇತ್ರದಲ್ಲಿ ಟಾಟಾ ಸಂಸ್ಥೆಯ ಕೊಡುಗೆ ಸಾಕಷ್ಟು ಇದೆ ಎಂದು ಹೇಳಬಹುದಾಗಿದೆ. ಒಂದಿಲ್ಲೊಂದು ಹೊಸ ವಿಚಾರಗಳಿಂದ ಟಾಟಾ ಸಂಸ್ಥೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಕೂಡ ತನ್ನ ಪ್ರತಿಷ್ಠೆಯನ್ನು ಸಂಪಾದಿಸಿದೆ. ಈಗಾಗಲೇ ಟಾಟಾ ಸಂಸ್ಥೆಯ ಅಡಿ ಹಲವಾರು ಉಪ ಸಂಸ್ಥೆಗಳು ಕೂಡ ಇವೆ. ಇವುಗಳಲ್ಲಿ ಜಾಗತಿಕವಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿರುವಂತಹ ಸಂಸ್ಥೆಗಳು ಕೂಡ ಟಾಟಾ ಸಂಸ್ಥೆಯ ಉಪ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

ಹಲವಾರು ಸ್ಟಾರ್ಟಪ್ ಗಳಲ್ಲಿ ಕೂಡ ಟಾಟಾ ಸಂಸ್ಥೆ ಹೂಡಿಕೆಯನ್ನು ಕೂಡ ಮಾಡಿದೆ. ಇನ್ನು ಈ ಬಾರಿ ಟಾಟಾ ಸಂಸ್ಥೆ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಈ ಬಾರಿಯ ಐಪಿಎಲ್ ನ ಟೈಟಲ್ ಸ್ಪಾನ್ಸರ್ ಆಗಿದೆ. ಇದಕ್ಕೆ ಪ್ರಮುಖ ಕಾರಣ ಕೂಡ ಇದೆ. ಹೌದು ಗೆಳೆಯರೇ ಇದೇ ಏಪ್ರಿಲ್ 7 ರಿಂದ ತನ್ನ Tata Neu ಅಪ್ಲಿಕೇಶನ್ ಅನ್ನು ಲಾಂಚ್ ಮಾಡಲಿದೆ. ಹೀಗಾಗಿ ಈಗಾಗಲೇ ಇ-ಕಾಮರ್ಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿರುವ ಅಮೆಜಾನ್ ಫ್ಲಿಪ್ಕಾರ್ಟ್ ಜಿಯೋ ಕಾರ್ಟ್ ಸೇರಿದಂತೆ ಹಲವಾರು ಸಂಸ್ಥೆಗಳು ಟಾಟಾ ಸಂಸ್ಥೆಯ ಆಗಮನದಿಂದಾಗಿ ಶೇಕ್ ಆಗಲು ಆರಂಭಿಸಿವೆ ಎನ್ನುವ ಮಾಹಿತಿಗಳು ದೊರೆಯುತ್ತಿವೆ. ಅಷ್ಟಕ್ಕೂ ಟಾಟಾ ಸಂಸ್ಥೆ ಲಾಂಚ್ ಮಾಡುತ್ತಿರುವ ಈ ಅಪ್ಲಿಕೇಶನ್ ನಲ್ಲಿ ಏನೆಲ್ಲ ಸಿಗಲಿದೆ ಎಂಬುದನ್ನು ತಿಳಿಯೋಣ ಬನ್ನಿ.

ಭಾರತದ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಕೂಡ ಇ-ಕಾಮರ್ಸ್ ಕ್ಷೇತ್ರದಲ್ಲಿ ವಿದೇಶಿ ಸಂಸ್ಥೆಗಳು ರಾಜ್ಯಭಾರ ಮಾಡುತ್ತಿವೆ. ಹೀಗಾಗಿ ಭಾರತದ ಸ್ವಂತ ಅಪ್ಲಿಕೇಶನ್ ಆಗಿರುವ Tata Neu ಅಪ್ಲಿಕೇಶನನ್ನು ಲಾಂಚ್ ಮಾಡುವ ಮೂಲಕ all-in-one ಸೇವೆಗಳನ್ನು ಗ್ರಾಹಕರಿಗೆ ನೀಡಲು ಟಾಟಾ ಸಂಸ್ಥೆ ಸಿದ್ಧವಾಗಿದೆ. ಈ ಅಪ್ಲಿಕೇಶನ್ ಮೂಲಕ ಹಣಪಾವತಿ ಸ್ಟ್ರೀಮಿಂಗ್ ಶಾಪಿಂಗ್ ಟಿಕೆಟ್ ಬುಕಿಂಗ್ ದಿನಸಿ ಖರೀದಿ ಸೋಶಿಯಲ್ ಮೆಸೇಜಿಂಗ್ ಡಿಜಿಟಲ್ ಪೇಮೆಂಟ್ ಫುಡ್ ಡೆಲಿವರಿ ಆನ್ಲೈನ್ ಶಾಪಿಂಗ್ ಕೇವಲ ಇಷ್ಟು ಮಾತ್ರವಲ್ಲದೆ ಟಾಟಾ ಸಂಸ್ಥೆಯ ಹಲವಾರು ಅಪ್ಲಿಕೇಶನ್ಗಳನ್ನು ಸೇರಿದಂತೆ ಬಹುತೇಕ ಎಲ್ಲಾ ಡಿಜಿಟಲ್ ಉಪಯೋಗಗಳನ್ನು ಮಾಡುವಂತಹ ಅವಕಾಶವನ್ನು ಗ್ರಾಹಕರಿಗೆ ನೀಡಲಿದೆ. ಅಂದರೆ ಒಂದೇ ಅಪ್ಲಿಕೇಶನ್ ನಲ್ಲಿ ಗ್ರಾಹಕರಿಗೆ ಹಲವಾರು ಉಪಯೋಗಗಳ ದೊರಕಲಿವೆ. ಖಂಡಿತವಾಗಿ ಒಮ್ಮೆ ಲಾಂಚ್ ಆದರೆ ಇಡೀ ಇ ಕಾಮರ್ಸ್ ಕ್ಷೇತ್ರವನ್ನು ಕೂಡ ಟಾಟಾ ಸಂಸ್ಥೆ ಕಬ್ಜಾ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.