ಮತ್ತೆ ಮುನ್ನೆಲೆ ಬಂದ ಗೆಲುವಿನ ರೂವಾರಿ ಚರ್ಚೆ. ಆರ್ಸಿಬಿ vs KKR ಪಂದ್ಯದಲ್ಲಿ ದಿನೇಶ್ ರವರ ಹೊಗಳುತ್ತಿರುವಾಗ, ಅಸಲಿ ಮ್ಯಾಚ್ ವಿನ್ನರ್ ಅವರಲ್ಲ ಎಂದದ್ದು ಯಾಕೆ ಗೊತ್ತೇ??

ಮತ್ತೆ ಮುನ್ನೆಲೆ ಬಂದ ಗೆಲುವಿನ ರೂವಾರಿ ಚರ್ಚೆ. ಆರ್ಸಿಬಿ vs KKR ಪಂದ್ಯದಲ್ಲಿ ದಿನೇಶ್ ರವರ ಹೊಗಳುತ್ತಿರುವಾಗ, ಅಸಲಿ ಮ್ಯಾಚ್ ವಿನ್ನರ್ ಅವರಲ್ಲ ಎಂದದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಟಾಟಾ ಐಪಿಎಲ್ 2022 ಪ್ರಾರಂಭವಾಗಿದ್ದು ಕ್ರಿಕೆಟ್ ಲೋಕದ ಮಹಾ ಮನೋರಂಜನೆ ಕೂಡ ಈಗಾಗಲೇ ಆರಂಭವಾಗಿದೆ ಎಂದು ಹೇಳಬಹುದಾಗಿದೆ. ಎಲ್ಲರೂ ಕೂಡ ಅದರಲ್ಲೂ ಕ್ರಿಕೆಟ್ ಅಭಿಮಾನಿಗಳಲ್ಲದವರು ಕೂಡ ಐಪಿಎಲ್ ಅನ್ನು ಕುರ್ಚಿಯ ತುದಿಯಲ್ಲಿ ಕುಳಿತು ನೋಡುತ್ತಿದ್ದಾರೆ.

ಅಷ್ಟರಮಟ್ಟಿಗೆ ಐಪಿಎಲ್ ಪಂದ್ಯಗಳು ಎಲ್ಲರಿಗೆ ಮನರಂಜನೆ ನೀಡುತ್ತಿವೆ. ಅದರಲ್ಲೂ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭವನ್ನು ಪಡೆದುಕೊಳ್ಳದಿದ್ದರೂ ಕೂಡ ಎರಡನೇ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ನೀವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಗಮನಿಸಿರಬಹುದು. ಪಂದ್ಯದ ಗೆಲುವಿನ ಶ್ರೇಯವನ್ನು ಹರ್ಷಲ್ ಪಟೇಲ್ ಹಾಗೂ ದಿನೇಶ್ ಕಾರ್ತಿಕ್ ರವರಿಗೆ ನೀಡಲಾಗುತ್ತಿದೆ. ಆದರೆ ನಿಜವಾಗಿ ಹೇಳಬೇಕೆಂದರೆ ಪಂದ್ಯದ ಗೆಲುವಿನ ಶ್ರೇಯವನ್ನು ಮತ್ತೊಬ್ಬ ಪ್ರಮುಖ ಕ್ರಿಕೆಟಿಗನಿಗೆ ನೀಡಬೇಕಾಗುತ್ತದೆ. ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 18.5 ಓವರುಗಳಿಗೆ 128 ರನ್ನುಗಳನ್ನು ಮಾಡಿ ಆಲೌಟ್ ಆಗಿತ್ತು. ಯಾಕೆಂದರೆ ಇದು ಬೌಲಿಂಗ್ ಪಿಚ್ ಆಗಿದ್ದ ಕಾರಣದಿಂದಾಗಿ ಬ್ಯಾಟ್ಸ್ಮನ್ಗಳು ರನ್ ಗಳಿಸುವುದು ಕಷ್ಟಸಾಧ್ಯವಾಗಿತ್ತು.

ಇದೇ ಪರಿಣಾಮವಾಗಿ ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟ್ ಮಾಡಲು ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ 17ರಂದು ಗಳಿಸುವಷ್ಟರಲ್ಲಿ 3 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿಕೆಟ್ ಹೋಗದಂತೆ ಕೊನೆಯವರೆಗೂ ಕ್ರೀಸಿನಲ್ಲಿ ನಿಂತುಕೊಂಡು ಆಡುವಂತಹ ಆಟಗಾರ ಬೇಕಾಗಿತ್ತು. ಆ ಸಂದರ್ಭದಲ್ಲಿ ರುದರ್ಫೋರ್ಡ್ 40 ಬಾಲ್ ಗಳಲ್ಲಿ 26 ರನ್ ಗಳಿಸಿ ಕ್ರೀಸಿನಲ್ಲಿ ಗೋಡೆಯಂತೆ ನಿಂತಿದ್ದರು. ನಂತರ ಕೊನೆಗೆ ಬಂದ ದಿನೇಶ್ ಕಾರ್ತಿಕ್ ಹಾಗೂ ಹರ್ಷಲ್ ಪಟೇಲ್ ಅವರು ಫಿನಿಶಿಂಗ್ ಟಚ್ ನೀಡುತ್ತಾರೆ. ಆದರೆ ಇಲ್ಲಿ ಯಾರೂ ಕೂಡ ರುದರ್ಫೋರ್ಡ್ ರವರ ತಾಳ್ಮೆ ಬ್ಯಾಟಿಂಗ್ ಕುರಿತಂತೆ ಯಾರೂ ಮಾತನಾಡುವುದಿಲ್ಲ. ಮೊದಲಾಗಿ ಕೊನೆಯದಾಗಿ ಬಂದಂತಹ ದಿನೇಶ್ ಕಾರ್ತಿಕ್ ಹಾಗೂ ಹರ್ಷಲ್ ಪಟೇಲ್ ರವರಿಗೆ ಹೊಗಳಲು ಪ್ರಾರಂಭಿಸುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.