ನಿಮ್ಮ ಮನೆಯಲ್ಲಿ ಗ್ಯಾಸ್ ಬೇಗ ಖಾಲಿ ಆಗುತ್ತಿದೆಯೇ?? ಹಾಗಿದ್ದರೆ ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ. ಗ್ಯಾಸ್ ಜೊತೆಗೆ ಹಣ ಉಳಿಸಿ.

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಸಿಲೆಂಡರ್ ಗ್ಯಾಸ್ ಮನೆಯಲ್ಲಿದ್ದಾಗ ಹೆಂಗಸರಿಗೆ ಖುಷಿಯೂ ಹೌದು, ದುಃಖವು ಹೌದು. ಯಾಕೆ ಅಂತೀರಾ ಗ್ಯಾಸ್ ತುಂಬಿಕೊಂಡಿದ್ದರೆ ಅಡುಗೆ ಮಾಡುವುದು ಸುಲಭ. ಅದೇ ಗ್ಯಾಸ್ ಕಮ್ಮಿಯಾಗ್ತಿದ್ದರೆ ನಾಳೆಗೆ ಏನಾದ್ರೂ ಮುಗಿದು ಹೋದರೆ ಅನ್ನೋ ಟೆನ್ಶನ್. ಅದು ಅಲ್ದೇ ಸಿಲೆಂಡರ್ ಬೆಲೆ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಗ್ಯಾಸ್ ನ ಉಳಿತಾಯವನ್ನು ಮುತುವರ್ಜಿಯಿಂದ ಮಾಡುವುದು ಕೂಡ ಅತ್ಯಂತ ಮುಖ್ಯ.

ಪ್ರತಿ ತಿಂಗಳಿಗೊಮ್ಮೆ ಗ್ಯಾಸ್ ಸಿಲೆಂಡರ್ ತೆಗೆದುಕೊಳ್ಳುವವರು ಈಗ ನಾವು ಹೇಳುವ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಖಂಡಿತವಾಗಿಯೂ ಒಂದು ತಿಂಗಳಿಗಿಂತ ಹೆಚ್ಚು ಉಳಿಸಬಹುದು. ಮೊದಲನೆಯದಾಗಿ ಗ್ಯಾಸ್ ಬರ್ನರ್ ಅನ್ನು ಸರಿಯಾಗಿ ಶುಚಿಗೊಳಿಸಬೇಕು ಇಲ್ಲವಾದಲ್ಲಿ, ಗ್ಯಾಸ್ ಸರಿಯಾಗಿ ಬರದೇ ಬರ್ನರ್ ಸಂಪೂರ್ಣವಾಗಿ ಉರಿಯುವುದಿಲ್ಲ. ಹೀಗಾದಾಗ ಅಡಿಗೆಗೆ ಹೆಚ್ಚು ಸಮಯ ಬೇಕಾಗುತ್ತದೆ. ಅಲ್ಲದೆ ಗ್ಯಾಸ್ ಬಣ್ಣದಲ್ಲಿ ನೀಲಿ ಬಣ್ಣವನ್ನು ಬಿಟ್ಟು ಹಳದಿ ಅಥವಾ ಕೆಂಪು ಬಣ್ಣ ಬಂದರೆ ಬರ್ನರ್ ನಲ್ಲಿ ಸಮಸ್ಯೆ ಇದೆ ಎಂದು ಅರ್ಥ. ಹಾಗಾಗಿ ಗ್ಯಾಸ್ ಉಳಿಸುವಲ್ಲಿ ಬರ್ನರ್ ಸ್ವಚ್ಛತೆ ಕೂಡ ಅತ್ಯಂತ ಮುಖ್ಯ.

ಮುಂದಿನದು ಕೆಲವು ಧಾನ್ಯಗಳು ಅಥವಾ ಅಕ್ಕಿಗಳನ್ನು ಬೇಯಿಸುವುದಕ್ಕಿಂತ ಮೊದಲು ಸ್ವಲ್ಪ ಹೊತ್ತು ನೆನೆಸುವುದು ಉತ್ತಮ. ಯಾಕಂದರೆ ಕೆಲವು ಧಾನ್ಯಗಳು ಅಥವಾ ಅಕ್ಕಿ ಬೇಯಿಸುವುದಕ್ಕೆ ಸಮಯಬೇಕಾಗುತ್ತದೆ ಹಾಗಾಗಿ ಅವುಗಳನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟು ನಂತರ ಬೇಯಿಸಿದರೆ ಉಳಿತಾಯವಾಗುತ್ತದೆ. ಇನ್ನು ಅಡುಗೆ ಮಾಡುವಾಗ ಪಾತ್ರೆಗಳನ್ನು ತೊಳೆದು ಹಾಗೆ ನೇರವಾಗಿ ಗ್ಯಾಸ್ ಮೇಲೆ ಇಡಬಾರದು ಯಾಕೆಂದರೆ ಕುಕ್ಕರ್ ಅಥವಾ ಇತರ ಪಾತ್ರೆಗಳಲ್ಲಿ ನೀರು ಇದ್ದರೆ ಅದು ಬಿಸಿ ಆಗುವುದಕ್ಕೆ ಸಮಯ ಬೇಕು. ಅದರ ಬದಲು ಪಾತ್ರೆಯನ್ನು ನೀವು ಸ್ವಚ್ಛವಾಗಿ ಒರೆಸಿ ಗ್ಯಾಸ್ ಮೇಲಿಟ್ಟರೆ ಅದು ತಕ್ಷಣ ಬಿಸಿಯಾಗುತ್ತದೆ ಆಗ ಕೂಡಲೇ ಅಡುಗೆ ಸಿದ್ಧತೆ ಮಾಡಬಹುದು.

ಇನ್ನು ಅಡುಗೆ ಮಾಡುವಾಗ ಯಾವೆಲ್ಲ ಸಾಮಗ್ರಿಗಳು ಬೇಕು ಅವುಗಳನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳಿ ಉದಾಹರಣೆಗೆ ಗ್ಯಾಸ್ ಸ್ಟೌವ್ ಮೇಲೆ ಪಾತ್ರೆಯನ್ನಿಟ್ಟು ಒಗ್ಗರಣೆಯ ಸಾಮಾನುಗಳನ್ನು ಹುಡುಕುವುದು ಒಳ್ಳೆಯ ಅಭ್ಯಾಸವಲ್ಲ ಇದರಿಂದ ಗ್ಯಾಸ್ ಅನಗತ್ಯವಾಗಿ ಖಾಲಿಯಾಗುತ್ತದೆ. ಅದರ ಬದಲು ಎಲ್ಲವನ್ನು ಸಿದ್ಧಪಡಿಸಿ ಇಟ್ಟುಕೊಂಡರೆ ತಕ್ಷಣವೇ ಅಡುಗೆ ರೆಡಿ ಮಾಡಬಹುದು. ಇನ್ನೂ ಗ್ಯಾಸ್ ಉಳಿಸಲು ನೀವು ಮಾಡಬೇಕಾದ ಮತ್ತೊಂದು ಮುಖ್ಯ ಕೆಲಸ ಎಂದರೆ ಬೇಯಿಸಬೇಕಾದ ವಸ್ತುಗಳನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವುದು. ಇದರಿಂದ ಬೇಗ ಬೇಯುವುದು ಮಾತ್ರವಲ್ಲದೆ ಗ್ಯಾಸ್ ಕೂಡ ಉಳಿತಾಯವಾಗುತ್ತದೆ.

ಇನ್ನು ಪೈಪ್ ಅಥವಾ ರೆಗ್ಯುಲೇಟರ್ ಗಳಲ್ಲಿ ಗ್ಯಾಸ್ಟಿಕ್ ಆಗುತ್ತದೆ ಎಂಬುದನ್ನು ಮೊದಲೇ ನೋಡಿಕೊಳ್ಳಿ. ಒಮ್ಮೊಮ್ಮೆ ಗ್ಯಾಸ್ ಲೀಕ್ ಆಗ್ತಾ ಇರುತ್ತೆ ಆದರೆ ಅದು ಗೊತ್ತಾಗುವುದಿಲ್ಲ ಬಹಳ ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಗ್ಯಾಸ್ ಸೋರಿಕೆ ಆಗುವುದು ಕಂಡುಬರುತ್ತದೆ. ಹಾಗಾಗಿ ತಿಳಿದಿರುವವರ ಬಳಿ ಸ್ಟೋ ಮಧ್ಯಭಾಗದಲ್ಲಿರುವ ರಬ್ಬರ್ ಪೈಪನ್ನು ಚೆಕ್ ಮಾಡಿಸಿಟ್ಟುಕೊಳ್ಳಿ. ಇಂತಹ ಕೆಲವು ಸಣ್ಣಪುಟ್ಟ ವಿಷಯಗಳನ್ನು ನೀವು ಅಳವಡಿಸಿಕೊಂಡರೆ ಖಂಡಿತವಾಗಿಯೂ ಗ್ಯಾಸನ್ನು ಉಳಿಸಬಹುದು. ಸ್ನೇಹಿತರೆ ಗ್ಯಾಸ್ ಉಳಿಸಲು ನಿಮಗೂ ಇತರ ಸಲಹೆಗಳು ಗೊತ್ತಿದ್ದರೆ ತಪ್ಪದೇ ನಮಗೆ ಕಾಮೆಂಟ್ ಮಾಡಿ ತಿಳಿಸಿ.