ಯೋಗದ ಎಲ್ಲಾ ಆಸನಗಳು ಬೇಡ, ಸಮಯವಿಲ್ಲದೆ ಇದ್ದರೇ ಇದೊಂದು ಆಸನ ಮಾಡಿ ನೋಡಿ, ಬದಲಾವಣೆ ನಿಮಗೆ ತಿಳಿಯುತ್ತದೆ.

ಯೋಗದ ಎಲ್ಲಾ ಆಸನಗಳು ಬೇಡ, ಸಮಯವಿಲ್ಲದೆ ಇದ್ದರೇ ಇದೊಂದು ಆಸನ ಮಾಡಿ ನೋಡಿ, ಬದಲಾವಣೆ ನಿಮಗೆ ತಿಳಿಯುತ್ತದೆ.

ನಮಸ್ಕಾರ ಸ್ನೇಹಿತರೇ ಯೋಗ ಮಾಡುವುದರಿಂದ ಎಷ್ಟು ಪ್ರಯೋಜನ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇಇರುತ್ತದೆ. ದೇಹದಲ್ಲಿ ಎಲ್ಲಾ ಸಮಸ್ಯೆಗಳಿಗೆ ನಿರಂತರ ವ್ಯಾಯಾಮ ಹಾಗೂ ಯೋಗ ಒಂದು ಸೂಕ್ತವಾದ ಪರಿಹಾರ. ಪುರಾತನ ಕಾಲದಿಂದಲೂ ಪ್ರಚಲಿತದಲ್ಲಿದ್ದ ಯೋಗ ಪದ್ಧತಿಗಳು ದೇಹವನ್ನು ಸುಸ್ಥಿತಿಯಲ್ಲಿ ಇಡುವುದು ಮಾತ್ರವಲ್ಲದೆ ಮಾನಸಿಕವಾಗಿಯೂ ಕೂಡ ನಮ್ಮನ್ನು ಸದೃಢ ಗೊಳಿಸುತ್ತದೆ. ಹಾಗಾಗಿ ನಾವಿಲ್ಲಿ ದೇಹಕ್ಕೆ ಅತ್ಯಂತ ಅಗತ್ಯವಾದ ಹಾಗೂ ಅತ್ಯುತ್ತಮವಾದ ಒಂದು ಆಸನದ ಬಗ್ಗೆ ನಾವಿಲ್ಲಿ ಮಾಹಿತಿಯನ್ನ ನೀಡುತ್ತಿದ್ದೇವೆ. ಅದು ಯಾವ ಆಸನ ಅದರ ಪ್ರಯೋಜನಗಳೇನು ನೋಡೋಣ ಬನ್ನಿ.

ಇಂದು ನಾವು ಹೇಳುತ್ತಿರುವ ಆಸನ ಸುಖಾಸನ. ದೇಹದಲ್ಲಿ ಚೈತನ್ಯವನ್ನು ಹೆಚ್ಚಿಸಿ ಮನಸ್ಸಿಗೆ ನೆಮ್ಮದಿಯನ್ನು ಕೊಡುವಂಥ ಅಸನವಿದು. ಈ ಆಸನವನ್ನು ಮಾಡುವುದು ಕೂಡ ಸುಲಭ. ಸುಖಾಸನದಲ್ಲಿ ಕೂರುವುದು ಹೇಗೆ ಎಂದರೆ, ಮೊದಲಿಗೆ ಒಂದು ಯೋಗಾ ಮ್ಯಾಟ್ ನ್ನ ನೆಲಕ್ಕೆ ಹಾಸಿಕೊಳ್ಳಿ. ಯೋಗ ಮ್ಯಾಟ್ ಇಲ್ಲದವರು ಬಟ್ಟೆಯನ್ನು ನೆಲಕ್ಕೆ ಹಾಸಿಕೊಂಡು ಕೂಡ ಈ ಆಸನವನ್ನು ಮಾಡಬಹುದು. ಮೊದಲಿಗೆ ಕಾಲನ್ನು ಎರಡೂ ಕಡೆಗೂ ಮಡಚಿ ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ. ನಂತರ ಕೈಗಳನ್ನು ಕಾಲಿನ ಮಂಡಿಯ ಮೇಲಿಟ್ಟುಕೊಳ್ಳಬೇಕು. ಕೈಗಳು ಮಂಡಿಯ ಮೇಲೆ ಉದ್ದವಾಗಿ ಚಾಚಿರಬೇಕು (ಚಿತ್ರದಲ್ಲಿ ತೋರಿಸಿದಂತೆ) ನಿಮ್ಮ ತೋರುಬೆರಳಿಗೆ ಹೆಬ್ಬೆರಳನ್ನು ತಾಗಿಸಿದಂತೆ ಕೈ ಬೆರಳುಗಳ ಭಂಗಿ ಇರಬೇಕು. ಇನ್ನು ಸುಖಾಸನದಲ್ಲಿ ಬೆನ್ನು ನೆರವಾಗಿರಬೇಕು. ಧ್ಯಾನ ಮಾಡುವಾಗ ಕೂಡ ಈ ಭಂಗಿಯಲ್ಲಿ ಕುಳಿತುಕೊಳ್ಳುವುದು ತುಂಬಾ ಒಳ್ಳೆಯದು. ಸುಖಾಸನ ಮಾಡುವಾಗ ಕಣ್ಣುಗಳನ್ನು ಮುಚ್ಚಿ ಮೈಯನ್ನು ಸಡಿಲಿಸಿ ಆರಾಮವಾಗಿ ಕುಳಿತುಕೊಳ್ಳಬೇಕು.

ಸುಖಾಸನವನ್ನು ಖಾಲಿಹೊಟ್ಟೆಯಲ್ಲಿ ಇರುವಾಗ ಅಂದರೆ ಬೆಳಿಗ್ಗೆ ಎದ್ದ ಕೊಡಲೇ ಮಾಡುವುದು ಸೂಕ್ತ. ಸುಖಾಸನ ಮಾಡುವುದರಿಂದ ಸ್ನಾಯುಗಳೂ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ದೇಹದಲ್ಲಿ ರಕ್ತಪರಿಚಲನೆ ಸರಿಯಾಗಿ ಆಗುತ್ತದೆ. ಇದರಿಂದ ಹೃದ್ರೋಗದಂಥ ಕಾಯಿಲೆಗಳೂ ಕೂಡ ನಮ್ಮನ್ನು ಬಾಧಿಸುವುದಿಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ ಏಕಾಗ್ರತೆ ಮೂಡುತ್ತದೆ ಹಾಗೂ ಮನಸ್ಸಿಗೆ ಶಾಂತಿ ಲಭಿಸುತ್ತದೆ.

ಇನ್ನು ಸುಖಾಸನ ಮಾಡುವುದಕ್ಕಿಂತ ಮೊದಲು ವಹಿಸಬೇಕಾದ ಮುನ್ನೆಚ್ಚರಿಗೆ ಏನೆಂದರೆ ಮಂಡಿ ನೋವು ಹಾಗೂ ಬೆನ್ನು ನೋವು ಇರುವವರು ವೈದ್ಯರ ಸಲಹೆ ಇಲ್ಲದೆ ಈ ಆಸನವನ್ನು ಮಾಡಬೇಡಿ. ಸಿಯಾಟಿಕಾ ರೋಗಿಗಳು ಇದನ್ನು ಮಾಡಬಾರದು. ದಿನಕ್ಕೆ 10 ನಿಮಿಷ ಈ ಸುಖಾಸನದಲ್ಲಿ ಕೂರಬೇಕು. ಹೀಗೆ ಮಾಡಿ ನಿಮ್ಮ ದೇಹದಲ್ಲಿ ಆಗುವ ಧನಾತ್ಮಕ ಬದಲಾವಣೆಗಳನ್ನು ನೀವೇ ಗಮನಿಸಿ.