ಆರ್ಸಿಬಿಗೆ ಇರುವ ಈ ಮೂರು ಸಮಸ್ಯೆಗಳೇ ಸೋಲಿಗೆ ಕಾರಣವಾಗಬಹುದು, ನಿವಾರಣೆಯಾಗದಿದ್ದರೆ ಪ್ಲೇ ಆಫ್ ಕೂಡ ಹೋಗೋದು ಡೌಟ್, ಯಾವ್ಯಾವು ಗೊತ್ತೇ??

ಆರ್ಸಿಬಿಗೆ ಇರುವ ಈ ಮೂರು ಸಮಸ್ಯೆಗಳೇ ಸೋಲಿಗೆ ಕಾರಣವಾಗಬಹುದು, ನಿವಾರಣೆಯಾಗದಿದ್ದರೆ ಪ್ಲೇ ಆಫ್ ಕೂಡ ಹೋಗೋದು ಡೌಟ್, ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಭಾರಿಯ ಐಪಿಎಲ್ ಹಲವಾರು ಹೊಸತನಗಳಿಗೆ ಸಾಕ್ಷಿಯಾಗಲಿದೆ. ಎರಡು ಹೊಸ ತಂಡಗಳು ಸಹ ಈ ಭಾರಿ ಸೇರಿಕೊಂಡಿವೆ. ಎರಡು ಗುಂಪುಗಳಾಗಿ ರೌಂಡ್ ರಾಬಿನ್ ಲೀಗ್ ಮೂಲಕ ಟೂರ್ನಿ ನಡೆಯಲಿದೆ. ಇನ್ನು ಕನ್ನಡಿಗರ ತಂಡ ಆರ್ಸಿಬಿ ಸಹ ಹೊಸ ನಾಯಕನೊಂದಿಗೆ ಹಲವಾರು ನೀರಿಕ್ಷೆಗಳನ್ನು ಈ ಭಾರಿ ಇಟ್ಟುಕೊಂಡಿದೆ.

ದಕ್ಷಿಣ ಆಫ್ರಿಕಾದ ಫಾಪ್ ಡು ಪ್ಲೇಸಿಸ್ ಈ ಭಾರಿ ಆರ್ಸಿಬಿ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಅಭಿಮಾನಿಗಳ ಈ ಸಲ ಕಪ್ ನಮ್ದೇ ಎಂಬ ಘೋಷಣೆ, ಈ ಭಾರಿ ಸಹ ಕೇವಲ ಘೋಷಣೆಯಾಗಿ ಉಳಿಯಲಿದೆ ಎಂದು ಹೇಳಲಾಗುತ್ತಿದೆ. ತಜ್ಞರ ಪ್ರಕಾರ ಆರ್ಸಿಬಿ ಈ ಭಾರಿ ಸಹ ಪ್ಲೇ ಆಫ್ ಗೂ ಸಹ ಎಂಟ್ರಿ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಮೂರು ಕಾರಣಗಳನ್ನು ಸಹ ತಿಳಿಸಿದ್ದಾರೆ. ಬನ್ನಿ ಆ ಮೂರು ಕಾರಣಗಳನ್ನು ತಿಳಿಯೋಣ.

1.ಫೀನಿಶರ್ ಗಳ ಕೊರತೆ : ಆರ್ಸಿಬಿ ಈ ಹಿಂದಿನ ಸೀಸನ್ ನಿಂದಲೂ ಸಹ ಉತ್ತಮ ಆರಂಭ ಪಡೆದಾಗಿಯೂ ಹೊರತು ಫೀನಿಶರ್ ಗಳ ಕೊರತೆಯಿಂದ ಹಲವಾರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಈ ಭಾರಿ ಆರ್ಸಿಬಿಯಲ್ಲಿ ಹೇಳಿಕೊಳ್ಳುವಂತಹ ಫೀನಿಶರ್ ಗಳಿಲ್ಲ. ದಿನೇಶ್ ಕಾರ್ತಿಕ್, ಶಹಬಾಜ್ ಅಹಮದ್, ವನಿಂದು ಹಸರಂಗ , ರುದರ್ಫೋರ್ಡ್ ಬಗ್ಗೆ ಭರವಸೆ ಇಡಲು ಸಾಧ್ಯವಿಲ್ಲ.

2.ಫಾರೀನ್ ಆಟಗಾರರು ಸ್ಥಾನದ ಮೇಲೆ ಪ್ರಯೋಗ ನಡೆಸಲು ಅಡ್ಡಿ – ನಾಯಕನಾಗಿ ಫಾಪ್ ಡು ಪ್ಲೇಸಿಸ್ ವಿದೇಶಿ ಕೋಟಾ ಅಡಿಯಲ್ಲಿ ಸ್ಥಾನ ಪಡೆದಿದ್ದಾರೆ. ಹಾಗಾಗಿ ಆರ್ಸಿಬಿ ಉಳಿದ ಮೂರು ಆಟಗಾರರಲ್ಲೇ ಪ್ರಯೋಗ ನಡೆಸುವ ಅನಿವಾರ್ಯತೆಗೆ ಸಿಲುಕಬೇಕಾಗುತ್ತದೆ. ಇದು ತಂಡದ ಸಂಯೋಜನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

3.ಭಾರತೀಯ ಸ್ಟಾರ್ ಆಟಗಾರರ ಕೊರತೆ – ಪ್ರತಿ ಬಾರಿಯಂತೆ ಈ ಭಾರಿ ಸಹ ಭಾರತೀಯ ಆಟಗಾರರ ಕೊರತೆ ಇದೆ. ಯುವ ಆಟಗಾರದಿದ್ದರೂ, ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ತಿಳಿದಿಲ್ಲ. ಮೇಲಾಗಿ ದೇಶಿ ಟೂರ್ನಿಗಳಲ್ಲಿ ಸಹ ಇರುವ ಆಟಗಾರರ ಬ್ಯಾಟ್ ನಿಂದ ಉತ್ತಮ ರನ್ ಗಳು ಬಂದಿಲ್ಲ. ಹೀಗಾಗಿ ಸಮರ್ಥ ಆಡುವ ಹನ್ನೊಂದು ಸದಸ್ಯರನ್ನು ಆಯ್ಕೆ ಮಾಡುವುದು ಆರ್ಸಿಬಿ ತಂಡಕ್ಕೆ ದೊಡ್ಡ ಸವಾಲಾಗಲಿದೆ. ಇದನ್ನು ಮ್ಯಾನೇಜ್ಮೆಂಟ್ ಹೇಗೆ ಸರಿಪಡಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ