ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜೇಮ್ಸ್ ಎಂಬ ಸುನಾಮಿ ಮುಂದೆ ದಾಖಲೆಗಳೇ ಲೆಕ್ಕ ಇಲ್ಲ, ಥೀಯೇಟರ್ ನಲ್ಲಿ ಕಲೆಕ್ಷನ್ ಬಿಡಿ, ಟಿವಿ ರೈಟ್ಸ್ ಬೆಲೆ ಎಷ್ಟು ಗೊತ್ತೇ??

35

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಜೇಮ್ಸ್ ಚಿತ್ರ ಈಗಾಗಲೇ ಬಿಡುಗಡೆ ಆಗಿ ಎರಡು ದಿನಗಳು ಕಳೆದಿದ್ದು ಬಾಕ್ಸಾಫೀಸ್ ನಲ್ಲಿ ಹಿಂದೆಂದೂ ಕಂಡುಕೇಳರಿಯದ ಅಂತಹ ದಾಖಲೆ ಮಟ್ಟದ ಕಲೆಕ್ಷನ್ ಪಡೆದಿದೆ. ನಿಜಕ್ಕೂ ಕೂಡ ಜೇಮ್ಸ್ ಚಿತ್ರದ ದಾಖಲೆಗಳನ್ನು ನೋಡಿ ಪ್ರತಿಯೊಬ್ಬ ಕನ್ನಡಿಗನೂ ಕೂಡ ಹೆಮ್ಮೆಯಿಂದ ಕಾಲರ್ ಎತ್ತುತ್ತಿದ್ದಾನೆ. sಈಗಾಗಲೇ ಮೊದಲ ದಿನವೇ 4000 ಕ್ಕೂ ಅಧಿಕ ಪರದೆಯ ಮೇಲೆ ಬಿಡುಗಡೆಯಾಗಿದ್ದ ಜೇಮ್ಸ್ ಚಿತ್ರ ಬಾಕ್ಸಾಫೀಸ್ ನಲ್ಲಿ ವರ್ಲ್ಡ್ ವೈಟ್ 30 ಕೋಟಿ ರೂಪಾಯಿ ಕಲೆಕ್ಷನ್ ಅನ್ನು ಪ್ರಥಮ ದಿನವೇ ಮಾಡಿ ದಾಖಲೆಯನ್ನು ನಿರ್ಮಿಸಿತು.

ಅಪ್ಪು ಅವರ ಜನಪ್ರಿಯತೆಯನ್ನು ವುದು ಸಾಗರದ ಆಚೆ ಕೂಡ ಹೆಚ್ಚಾಗಿದೆ ಎಂಬುದು ತಿಳಿದುಬಂದಿದೆ. ಹೌದು ಆಸ್ಟ್ರೇಲಿಯಾದಲ್ಲಿ ಮೊದಲ ದಿನವೇ 170ಕ್ಕೂ ಅಧಿಕ ಪರದೆಗಳ ಮೇಲೆ ಜೇಮ್ಸ್ ಚಿತ್ರದ ಭರ್ಜರಿ ಪ್ರದರ್ಶನ ಕಂಡು ಬಂದಿತ್ತು. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆ ಎಂದು ಹೇಳಬಹುದಾಗಿದೆ. ಕೇವಲ ಚಿತ್ರಮಂದಿರಗಳ ಬಾಕ್ಸಾಫೀಸ್ ಕಲೆಕ್ಷನ್ ಮಾತ್ರವಲ್ಲದೆ ಪ್ರಸಾರದ ಹಕ್ಕುಗಳನ್ನು ಮಾರಾಟ ಮಾಡಿ ಕೂಡ ಜೇಮ್ಸ್ ಚಿತ್ರದ ನಿರ್ಮಾಪಕರು ಕೋಟಿ ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂಬ ಸುದ್ದಿಗಳು ಈಗ ಕೇಳಿಬರುತ್ತಿವೆ. ಹಾಗಿದ್ದರೆ ಡಿಜಿಟಲ್ ಪ್ಲಾಟ್ಫಾರ್ಮ್ ನಿಂದಾಗಿ ಎಷ್ಟು ಹಣವನ್ನು ಜೇಮ್ಸ್ ಪಡೆದುಕೊಂಡಿದೆ ಮೊದಲು ತಿಳಿದುಕೊಳ್ಳೋಣ.

ಟಿವಿ ಪ್ರಸಾರ ಹಕ್ಕುಗಳ ಮಾರಾಟ ಓಟಿಟಿ ಪ್ಲಾಟ್ಫಾರ್ಮ್ ಗಳಲ್ಲಿ ಪ್ರಸಾರಮಾಡುವ ಹಕ್ಕುಗಳು ಮಾರಾಟ ಸೇರಿದಂತೆ ಥಿಯೇಟರ್ ಹೊರತುಪಡಿಸಿ ಜೇಮ್ಸ್ 80 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಪಡೆದುಕೊಂಡಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಕನ್ನಡದ ಪ್ರಸಾರಕ್ಕೆ ಸ್ಟಾರ್ ಸುವರ್ಣ ವಾಹಿನಿ 13.80 ಕೋಟಿ ರೂಪಾಯಿ ನೀಡಿದೆ. ಸೋನಿ ಡಿಜಿಟಲ್ ಸಂಸ್ಥೆಯ 40 ಕೋಟಿ ರೂಪಾಯಿಗೆ ಹಕ್ಕುಗಳನ್ನು ಖರೀದಿಸಿದೆ. 80 ಕೋಟಿ ರೂಪಾಯಿ ಎನ್ನುವುದು ಎಲ್ಲಾ ಭಾಷೆಗಳಲ್ಲೂ ಸೇರಿ ಟಿವಿ ರೈಟ್ಸ್ ಮಾರಾಟದ ಬೆಲೆಯಾಗಿದೆ. ಓಟಿಟಿ ಯಲ್ಲಿ ಕನ್ನಡ ವರ್ಷನ್ 7.30 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಕೇವಲ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಮಾತ್ರವಲ್ಲದೆ ಬಾಕ್ಸಾಫೀಸ್ ಹೊರತುಪಡಿಸಿ ಕೂಡ ಡಿಜಿಟಲ್ ವಿಭಾಗದಲ್ಲಿ ಜೇಮ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದಾನೆ ಎಂಬುದನ್ನು ಕೂಡ ಒಪ್ಪಿಕೊಳ್ಳಬೇಕಾಗಿದೆ.

Get real time updates directly on you device, subscribe now.