ಕೊನೆಗೂ ಬಯಲಾಯಿತು ಅಸಲಿ ಮಾಹಿತಿ, ಜೇಮ್ಸ್ ಚಿತ್ರಕ್ಕಾಗಿ ಅಪ್ಪು ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ?? ಇಷ್ಟು ಕಡಿಮೇನಾ??

ಕೊನೆಗೂ ಬಯಲಾಯಿತು ಅಸಲಿ ಮಾಹಿತಿ, ಜೇಮ್ಸ್ ಚಿತ್ರಕ್ಕಾಗಿ ಅಪ್ಪು ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ?? ಇಷ್ಟು ಕಡಿಮೇನಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮ ದಿನದ ವಿಶೇಷವಾಗಿ ಮಾರ್ಚ್ 17ರಂದು ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈಗಾಗಲೇ ಮೊದಲ ದಿನವೇ ಸೆಲೆಬ್ರಿಟಿಗಳು ಕೂಡ ಅಭಿಮಾನಿಗಳ ಜೊತೆಗೆ ಹೋಗಿ ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಭಾವುಕರಾಗಿ ಚಿತ್ರಮಂದಿರಗಳಿಂದ ಹೊರ ಬಂದ ದೃಶ್ಯವನ್ನು ಕೂಡ ನಾವು ನೋಡಿದ್ದೇವೆ.

ಈಗಾಗಲೇ ನಿಮಗೆ ತಿಳಿದಿರುವಂತೆ ಬಿಡುಗಡೆಯಾದ ದಿನದಿಂದಲೂ ಕೂಡ ಜೇಮ್ಸ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ಅಪ್ಪು ರವರನ್ನು ಕೊನೆಯ ಬಾರಿಗೆ ಕಮರ್ಷಿಯಲ್ ಸಿನಿಮಾದಲ್ಲಿ ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳಲು ಫ್ಯಾಮಿಲಿ ಆಡಿಯನ್ಸ್ ಓಡೋಡಿ ಬರುತ್ತಿದ್ದಾರೆ. ನಿಜಕ್ಕೂ ಕೂಡ ಇದು ಸಿನಿಮಾ ಎನ್ನುವುದಕ್ಕಿಂತ ಹೆಚ್ಚಾಗಿ ಅಭಿಮಾನಿಗಳ ಭಾವನೆಯನ್ನು ವುದನ್ನು ಎಲ್ಲರೂ ಕೂಡ ಒಪ್ಪಿಕೊಳ್ಳಲೇಬೇಕು. ಜೇಮ್ಸ್ ಚಿತ್ರದಲ್ಲಿ ಹಲವಾರು ಭಾಷೆಗಳ ಪ್ರಮುಖ ನಟರು ಕೂಡ ನಟಿಸಿರುವುದು ಮತ್ತೊಂದು ವಿಶೇಷವಾಗಿದೆ.

ಇಲ್ಲಿ ಜೇಮ್ಸ್ ಚಿತ್ರದಲ್ಲಿ ನಮ್ಮೆಲ್ಲರ ನೆಚ್ಚಿನ ಅಪ್ಪು ಎಷ್ಟು ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ನಿಮ್ಮಲ್ಲಿ ಪ್ರಶ್ನೆಯಾಗಿ ಉಳಿದುಕೊಂಡಿರಬಹುದು. ಆ ಪ್ರಶ್ನೆಗೆ ನಾವು ವಿವರವಾಗಿ ಉತ್ತರ ನೀಡಲು ಸಿದ್ಧರಾಗಿದ್ದೇವೆ ಬನ್ನಿ. ಹೌದು ಈಗಾಗಲೇ ರಾಜ್ಯಾದ್ಯಂತ ವಿಶ್ವಾದ್ಯಂತ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರಕ್ಕೆ ಅಪ್ಪು ರವರು ಬರೋಬ್ಬರಿ ಏಳು ಕೋಟಿ ರೂಪಾಯಿ ಸಂಭಾವನೆ ಪಡೆದು ಕೊಂಡಿದ್ದಾರಂತೆ. ಜೇಮ್ಸ್ ಚಿತ್ರ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ನಿರ್ಮಿಸಲಿ ಎಂದು ಹಾರೈಸೋಣ. ಎಲ್ಲದಕ್ಕಿಂತ ಮುಖ್ಯವಾಗಿ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಕುಟುಂಬಸಮೇತರಾಗಿ ವೀಕ್ಷಿಸುವುದನ್ನು ಮಾತ್ರ ಮರೆಯಬೇಡಿ.