ಬಿಗ್ ನ್ಯೂಸ್: ಮತ್ತೊಂದು ಕ್ಷೇತ್ರಕ್ಕೆ ಎಂಟ್ರಿ ಕೊಡಲು ಸಿದ್ಧವಾಗ ಟಾಟಾ, ಡಿಜಿಟಲ್ ಯುಗದಲ್ಲಿ ದಿಗ್ಗಜ ಕಂಪನಿಗಳಿಗೆ ಬಿಗ್ ಶಾಕ್. ನಡೆಯುತ್ತಿರುವುದಾದರೂ ಏನು ಗೊತ್ತೇ??

ಬಿಗ್ ನ್ಯೂಸ್: ಮತ್ತೊಂದು ಕ್ಷೇತ್ರಕ್ಕೆ ಎಂಟ್ರಿ ಕೊಡಲು ಸಿದ್ಧವಾಗ ಟಾಟಾ, ಡಿಜಿಟಲ್ ಯುಗದಲ್ಲಿ ದಿಗ್ಗಜ ಕಂಪನಿಗಳಿಗೆ ಬಿಗ್ ಶಾಕ್. ನಡೆಯುತ್ತಿರುವುದಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಾಟಾ ಕಂಪನಿ ಭಾರತ ದೇಶದ ಕಂಪನಿ. ಸ್ವಾತಂತ್ರ್ಯ ಬಂದಾಗಿನಿಂದ ದೇಶ ಕಟ್ಟುವ ಕೆಲಸದಲ್ಲಿ ಟಾಟಾ ಕಂಪೆನಿಯ ಕೊಡುಗೆ. ಉಪ್ಪಿನಿಂದ ಹಿಡಿದು ವಿಮಾನಯಾನದ ತನಕ ಟಾಟಾ ಕಂಪನಿ ತನ್ನ ಉದ್ಯಮವನ್ನು ವಿಸ್ತರಿಸಿಕೊಂಡಿದೆ. ಇತ್ತೀಚೆಗೆ ಐಪಿಎಲ್ ನಲ್ಲಿ ಸಹ ಪ್ರಮುಖ ಜಾಹೀರಾತುದಾರನಾಗಿ ಗುರುತಿಸಿಕೊಂಡಿದೆ. ಇನ್ನು ಇದೀಗ ಮತ್ತೊಂದು ಕ್ಷೇತ್ರಕ್ಕೆ ಕಾಲಿಡುವ ಮೂಲಕ ದೇಶವನ್ನು ಮತ್ತಷ್ಟು ಹೆಚ್ಚಾಗಿ ಆರ್ಥಿಕತೆಯಲ್ಲಿ ಬಲಪಡಿಸಲು ಮುಂದಾಗಿದೆ.

ಹೌದು ಸ್ನೇಹಿತರೇ ಸದ್ಯ ನಿಮಗೆ ತಿಳಿದಂತೆ ಈಗ ನಡೆಯುತ್ತಿರುವುದು ಡಿಜಿಟಲ್ ಯುಗ. ಬಹುಪಾಲು ವ್ಯವಹಾರಗಳು ನಡೆಯುತ್ತಿರುವುದು ಆನ್ ಲೈನ್ ನಲ್ಲಿ. ಅದರಲ್ಲೂ ಡಿಜಿಟಲ್ ಪೇಮೇಂಟ್ ಆಫ್ ಗಳನ್ನು ಈಗ ಎಲ್ಲರೂ ಬಳಸತೊಡಗಿದ್ದಾರೆ. ಅದರಲ್ಲಿ ಸಿಂಹಪಾಲು ಎಂದರೇ ಗೂಗಲ್ ಪೇ ಮತ್ತು ಫೋನ್ ಪೇ. ಆ ನಂತರದ ಸ್ಥಾನವನ್ನು ಪೇಟಿಮ್ ಹಾಗೂ ಅಮೇಜಾನ್ ಪೇ ಪಡೆದಿದೆ.

ಈಗ ಈ ಎಲ್ಲಾ ಡಿಜಿಟಲ್ ಪೇಮೇಂಟ್ ಆಪ್ ಗಳಿಗೆ ಸೆಡ್ಡು ಹೊಡೆಯಲು ಟಾಟಾ ಕಂಪನಿ ಸಹ ಟಾಟಾ ಪೇ ಎಂಬ ಡಿಜಿಟಲ್ ಪೇಮೇಂಟ್ ಆಪ್ ತರಲು ಮುಂದಾಗಿದೆ. ಈಗಾಗಲೇ ಐಸಿಐಸಿಐ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅದರ ಸಹಭಾಗಿತ್ವದಲ್ಲಿ ಶೀಘ್ರದಲ್ಲಿಯೇ ಆಪ್ ಕಾರ್ಯಾರಂಭಗೊಳ್ಳಲಿದೆ ಎಂದು ಹೇಳಲಾಗಿದೆ. ಇದು ಭಾರತೀಯ ಡಿಜಿಟಲ್ ಪೇಮೇಂಟ್ ಆಪ್ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುವ ಸಾಧ್ಯತೆ ಇದೆ. ಭಾರತದಲ್ಲಿ 4.52 ಬಿಲಿಯನ್ ಜನ ಡಿಜಿಟಲ್ ಪೇಮೇಂಟ್ ಆಪ್ ಬಳಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ, ಟಾಟಾ ಪೇ ಬಂದ ಮೇಲೆ ಈ ಸಂಖ್ಯೆ ಎಷ್ಟು ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ, ನಾವು ಕೂಡ ಇದಕ್ಕಾಗಿ ಕಾಯುತ್ತಿದ್ದು, ಬಿಡುಗಡೆಯಾದ ದಿನವೇ ಬಳಸಲು ಪ್ರಾರಂಭ ಮಾಡುತ್ತೇವೆ, ಮತ್ತೆ ನೀವು??. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.