ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜ್ಯೋತಿಷ್ಯ: ಕುಂಭ ರಾಶಿಗೆ ಶುಕ್ರ ದೇವನ ಪ್ರವೇಶ, ನಾಲ್ಕು ರಾಶಿಯವರ ಅದೃಷ್ಟವೇ ಬದಲು, ಯಾರ್ಯಾರಿಗೆ ಹಣದ ಲಾಭ ಗೊತ್ತೇ??

1,818

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಶುಕ್ರ ಗ್ರಹವನ್ನು ಎರಡನೇ ಅತಿ ದೊಡ್ಡ ಗ್ರಹ ಎಂದು ಪರಿಗಣಿಸಲಾಗಿದೆ. ಶುಕ್ರ ಸಂಪತ್ತು, ಐಶ್ವರ್ಯ, ಪ್ರೀತಿ, ಪ್ರಣಯ ಮತ್ತು ಸೌಂದರ್ಯದ ಅಧಿಪತಿ. ಮಾರ್ಚ್ 31 ರಂದು ಕುಂಭ ರಾಶಿಯಲ್ಲಿ ಶುಕ್ರ ಸಂಕ್ರಮಣ ನಡೆಯಲಿದೆ. ಇದು ಏಪ್ರಿಲ್ 28 ರವರೆಗೆ ಇರುತ್ತದೆ. ಶುಕ್ರನ ಸಂಕ್ರಮವು ಕೆಲವು ರಾಶಿಯವರಿ ಜೀವನದಲ್ಲಿ ಹಲವು ಬದಲಾವಣೆಯನ್ನು ತರುತ್ತದೆ. ಯಾವ ರಾಶಿ ಮೇಲೆ ಬದಲಾವಣೆಯಾಗಲಿದೆ ಬನ್ನಿ ನೋಡೋಣ.

ಮೇಷ ರಾಶಿ: ಶುಕ್ರ ಸಂಚಾರದಿಂದ ಮೇಷ ರಾಶಿಯವರಿಗೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಆದಾಯ ಹೆಚ್ಚಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ.

ಸಿಂಹ ರಾಶಿ: ಇನ್ನು ಸಿಂಹ ರಾಶಿಗೆ ಬಂದರೆ ಶುಕ್ರನು 7 ನೇ ಮನೆಯಲ್ಲಿ ಸಾಗುತ್ತಾನೆ, ಈ ಕಾರಣದಿಂದಾಗಿ ಪಾಲುದಾರಿಕೆ ವ್ಯವಹಾರದಲ್ಲಿ ಅಪಾರ ಹಣದ ಲಾಭ ಗಳಿಸುತ್ತೀರಿ. ವ್ಯವಹಾರದಲ್ಲಿ ಆರ್ಥಿಕ ಸ್ಥಿತಿಯು ಇನ್ನೂ ಉತ್ತಮವಾಗುತ್ತಾ ಸಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ಸಿಗುತ್ತದೆ. ಉದ್ಯೋಗದಲ್ಲಿ ಸಕಾರಾತ್ಮಕ ಬೆಳವಣಿಗೆ ಯಾಗುತ್ತದೆ. ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಸಂತೋಷವಿರುತ್ತದೆ.

ಮಕರ ರಾಶಿ: ಈ ರಾಶಿಯವರಿಗೆ ಶುಕ್ರ ಸಂಕ್ರಮವು ತುಂಬಾ ಪ್ರಯೋಜನಕಾರಿ. ನಿಮ್ಮ ಆದಾಯ ಹೆಚ್ಚಾಗುತ್ತದೆ ಹಣಕಾಸಿನ ಲಾಭವು ಮೊದಲಿಗಿಂತ ಉತ್ತಮವಾಗಿರುತ್ತದೆ. ಅಲ್ಲದೆ, ಯಾವುದಾದರೂ ವ್ಯವಹಾರದಲ್ಲಿ ಹಣ ಸಿಕ್ಕಿಹಾಕಿಕೊಂಡಲ್ಲಿ ಅದು ವಾಪಾಸ್ ಸಿಗುತ್ತದೆ. ಸಹಭಾಗಿತ್ವದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಯಶಸ್ಸು ಸಿಗುತ್ತದೆ.

ಕುಂಭ ರಾಶಿ: ಶುಕ್ರನ ರಾಶಿಯ ಬದಲಾವಣೆಯಿಂದಾಗಿ, ಅದೃಷ್ಟ ನಿಮ್ಮ ಕೈ ಹಿಡಿತುತ್ತದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳ ಸಹಕಾರಸಿಗುತ್ತದೆ. ಭೂಮಿ ಮತ್ತು ಆಸ್ತಿ ಕೆಲಸದಿಂದ ಆರ್ಥಿಕ ಲಾಭವಾಗುತ್ತದೆ. ಇನ್ನು ಹೂಡಿಕೆ ಮಾಡಿದರೆ ಲಾಭ ಸಿಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಇದರಲ್ಲಿ ನಿಮ್ಮ ರಾಶಿಯಾವುದು ? ನಮಗೆ ಕಮೆಂಟ್ ಮಾಡಿ ತಿಳಿಸಿ.

Get real time updates directly on you device, subscribe now.