ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಪ್ಪು ಬದುಕಿಲ್ಲ ಎಂದು ತಿಳಿಯದೆ ಇರುವ ನಾಗಮ್ಮ ಅತ್ತೆ ಪುನೀತ್ ಹುಟ್ಟುಹಬ್ಬಕ್ಕೆ ಏನು ಮಾಡಿದ್ದಾರೆ ಗೊತ್ತೇ?? ಇಂತಹ ಪತಿಸ್ಥಿತಿ ಯಾರಿಗೂ ಬೇಡ.

198

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ಆರು ತಿಂಗಳಿಗೂ ಅಧಿಕ ಕಾಲ ಕಳೆದುಹೋಗಿದೆ. ಆದರೆ ಇಂದಿಗೂ ಕೂಡ ಅವರು ತೋರಿಸಿಕೊಟ್ಟಿರುವ ಒಳ್ಳೆಯ ಮಾರ್ಗದ ಮೂಲಕ ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅಪ್ಪು ಅವರಂತಹ ವ್ಯಕ್ತಿತ್ವ ಈ ಹಿಂದೆ ಹುಟ್ಟಿಲ್ಲ ಇನ್ನು ಮುಂದೆ ಹುಟ್ಟೋದು ಇಲ್ಲ. ಸಿನಿಮಾದ ಆಚೆಗೂ ಕೂಡ ಅಪ್ಪು ರವರ ವ್ಯಕ್ತಿತ್ವ ಎನ್ನುವುದು ನಿಜಕ್ಕೂ ಕೂಡ ಪ್ರತಿಯೊಬ್ಬರು ಅನುಸರಿಸಬೇಕಾದಂತಾಗಿತ್ತು. ನಿಜಕ್ಕೂ ಕೂಡ ಅವರೊಬ್ಬ ಆದರ್ಶ ವ್ಯಕ್ತಿಯೆಂದರೆ ಖಂಡಿತವಾಗಿ ತಪ್ಪಾಗಲಾರದು.

ಇನ್ನು ಸದ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ವಿಶೇಷವಾಗಿ ಮಾರ್ಚ್ 17ರಂದು ದೇಶ-ವಿದೇಶಗಳಲ್ಲಿ ಜೇಮ್ಸ್ ಚಿತ್ರ ಅದ್ದೂರಿಯಾಗಿ ತೆರೆಕಾಣಲಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ನಿಂದಾಗಿ ಚಿತ್ರದ ಟಿಕೆಟ್ಗಳು ಮೂರು ದಿನಗಳವರೆಗೆ ಸೋಲ್ಡ್ ಔಟ್ ಆಗಿದೆ. ಇದು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ಮುರಿದಿದ್ದು ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ಅಳಿಸಿ ಹೊಸ ದಾಖಲೆಯನ್ನು ಬರೆಯುವ ನಿರೀಕ್ಷೆಯಿದೆ. ಅಪ್ಪು ಸಿನಿಮಾಗಳ ನಿಜವಾದ ಕ್ರೇಜ್ ಏನು ಎನ್ನುವುದು ಈಗ ತಿಳಿಯುತ್ತಿದೆ.

ಇನ್ನು ಕೆಲವು ಸಮಯಗಳ ಹಿಂದೆ ಅಷ್ಟೇ ನಿಮಗೆ ಅಣ್ಣಾವ್ರ ತಂಗಿ ಆಗಿರುವ ನಾಗಮ್ಮನವರ ವಿಚಾರವನ್ನು ನಾವು ತಿಳಿಸಿದ್ದೆವು. ಹೌದು ಅವರಿಗೆ ಅಪ್ಪು ಅಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಇದುವರೆಗೂ ಕೂಡ ಅವರಿಗೆ ಅಪ್ಪು ರವರ ಮರಣದ ವಿಚಾರವನ್ನು ತಿಳಿಸಿಲ್ಲ. ಯಾಕೆಂದರೆ ಈಗಾಗಲೇ ವಯೋಸಹಜವಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ನಾಗಮ್ಮನವರ ವಯಸ್ಸು 90 ವರ್ಷವಾಗಿದೆ. ಈ ಕಾರಣದಿಂದಾಗಿ ಅಪ್ಪು ಅವರ ಮರಣದ ವಿಚಾರವನ್ನು ತಿಳಿಸಿದರೆ ಅವರ ಆರೋಗ್ಯದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಹೆಚ್ಚಾಗಿದ್ದು ಇದೇ ಕಾರಣಕ್ಕಾಗಿ ಇನ್ನೂ ತಿಳಿಸಿಲ್ಲ. ಅಪ್ಪು ಪ್ರತಿಬಾರಿ ಕೂಡ ನಾಗತ್ತೆ ಅವರನ್ನು ನೋಡಲು ಗಾಜನೂರಿಗೆ ಬರುತ್ತಿದ್ದರು. ಆ ಕ್ಷಣಗಳನ್ನು ನೆನೆಸಿಕೊಂಡರೆ ಇಂದಿಗೂ ಕೂಡ ಕಣ್ಣಲ್ಲಿ ನೀರು ಜಿನುಗುತ್ತದೆ.

ಇತ್ತೀಚಿಗಷ್ಟೇ ಟಿವಿ ವಾಹಿನಿಯೊಂದು ಗಾಜನೂರಿನಲ್ಲಿ ಇರುವ ನಾಗತ್ತೆ ರವರ ಬಳಿಗೆ ಹೋಗಿದೆ. ಹೋಗಿ ಇದೇ ಮಾರ್ಚ್ 17ರಂದು ಅಪ್ಪು ಅವರ ಜನ್ಮದಿನದ ವಿಶೇಷವಾಗಿ ಜೇಮ್ಸ್ ಚಿತ್ರ ಬಿಡುಗಡೆಯಾಗುತ್ತಿದೆ ಅಪ್ಪು ಅವರಿಗೆ ವಿಶ್ ಮಾಡಿ ಎಂಬುದಾಗಿ ಕೇಳಿದ್ದಾರೆ. ಅಪ್ಪು ಅವರ ಮರಣದ ವಿಚಾರವನ್ನು ತಿಳಿಯದ ಮುಗ್ಧ ನಾಗತ್ತೆ ನನ್ನ ಮುದ್ದು ಅಳಿಯನಿಗೆ ಶುಭಾಶಯಗಳನ್ನು ಕೋರಿ ಸಿನಿಮಾವನ್ನು ನೋಡುವುದಾಗಿ ಹೇಳಿದ್ದಾರೆ.

ಈಗಾಗಲೇ ನಾಗಮ್ಮ ಮಾತನಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರ ಕಣ್ಣಂಚಿನಲ್ಲಿ ನೀರು ಹರಿಯುವಂತೆ ಮಾಡಿದೆ. ನಿಜಕ್ಕೂ ಕೂಡ ಈ ದೃಶ್ಯ ಹೃದಯ ಕಿವುಚುವಂತಿತ್ತು. ನಾಗಮ್ಮ ರವರಿಗೆ ಅಳಿಯ ಅಪ್ಪು ರವರ ಮರಣದ ವಿಚಾರ ತಿಳಿಯದೆ ಇರಲಿ ಎಂದು ಹಾರೈಸೋಣ ಹಾಗೂ ಜೇಮ್ಸ್ ಬಾಕ್ಸ್ ಆಫೀಸ್ ನಲ್ಲಿ ಗೆದ್ದು ಅಪ್ಪು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರೋಣ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಹಾಗೂ ಜೇಮ್ಸ್ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡುವುದಾದರೆ ಕೂಡ ಕಾಮೆಂಟ್ ಮಾಡಿ ತಿಳಿಸಿ.

Get real time updates directly on you device, subscribe now.