ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸ್ಥಾನ ಬದಲಿಸಿದ ಸೂರ್ಯ ದೇವ, ಈ ಸ್ಥಾನ ಪಲ್ಲಟದಿಂದ 5 ರಾಶಿಯವರಿಗೆ ರಾಜಯೋಗ, ಯಾರ್ಯಾರಿಗೆ ಗೊತ್ತೇ?? ನಿಮ್ಮ ಭವಿಷ್ಯ ಹೇಗಿದೆ ಗೊತ್ತೇ??

56

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವಂತಹ ದೊಡ್ಡ ವರ್ಗವೇ ಇದೆ. ಜ್ಯೋತಿಷಿ ಶಾಸ್ತ್ರಿಗಳಲ್ಲಿ ಬದಲಾವಣೆ ಆಗುವಂತಹ ಸಂದರ್ಭದಲ್ಲಿ ಹಲವಾರು ರಾಶಿಯ ವ್ಯಕ್ತಿಗಳಿಗೆ ಕೂಡ ಅದರ ಪರಿಣಾಮ ತಟ್ಟುತ್ತದೆ. ಇಂದಿನ ವಿಚಾರದಲ್ಲಿ ನಾವು ಸೂರ್ಯನ ರಾಶಿ ಬದಲಾವಣೆ ಕುರಿತಂತೆ ಹೇಳಲು ಹೊರಟಿದ್ದೇವೆ. ಇದೇ ಮಾರ್ಚ್ 15ರಿಂದ ಸೂರ್ಯನ ರಾಶಿ ಪಲ್ಲಟ ನಡೆಯಲಿದೆ. ಸೂರ್ಯ ಮಂಗಳಕರ ವಾಗಿರುವುದರಿಂದ 5 ರಾಶಿಯವರಿಗೆ ಮಂಗಳಕರ ದಿನವು ಎದುರಾಗಲಿದೆ. ಹಾಗಿದ್ದರೆ ಆ 5 ರಾಶಿಯವರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ; ಆದಾಯದ ಮನೆಯಲ್ಲಿ ಸೂರ್ಯದೇವನ ಸಂಚಾರವಿರುವುದರಿಂದ ಆಗಿ ವೃಷಭರಾಶಿಯವರ ಜೀವನದಲ್ಲಿ ಆದಾಯದ ಹರಿವು ಹೇರಳವಾಗಿ ಮೂಡಿಬರಲಿದೆ. ಸಾಮಾನ್ಯವಾಗಿ ಹಣ ಹರಿವು ಮಾತ್ರವಲ್ಲದೆ ಹಲವಾರು ಮೂಲಗಳಿಂದ ಅನಿರೀಕ್ಷಿತವಾಗಿ ಹಣದ ಹೊಳೆ ಹರಿದು ಬರಲಿದೆ. ಈ ಸಂದರ್ಭ ಹೂಡಿಕೆಗೆ ಪ್ರಶಸ್ತ ವಾಗಿರುವ ಸಮಯವಾಗಿರುವುದರಿಂದ ವಿಶೇಷವಾಗಿ ಆಸ್ತಿಯ ಮೇಲೆ ಹೂಡಿಕೆ ಮಾಡುವುದು ಬಹಳಷ್ಟು ಲಾಭದಾಯಕವಾಗಿರಲಿದೆ. ವೃಷಭ ರಾಶಿಯವರು ಈ ಸಮಯವನ್ನು ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವುದು ಉತ್ತಮವಾಗಿದೆ.

ಮಿಥುನ ರಾಶಿ; ಮಿಥುನ ರಾಶಿಯವರ ವೃತ್ತಿಯಲ್ಲಿ ಸೂರ್ಯದೇವನ ಸಂಚಾರವಿದೆ. ಹೀಗಾಗಿ ಕೆಲಸದಲ್ಲಿ ಪ್ರಮೋಷನ್ ದೊರೆಯಲಿದ್ದು ವ್ಯಾಪಾರದಲ್ಲಿ ಹೇರಳವಾದ ಲಾಭಾಂಶ ದೊರೆಯಲಿದೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿರುವವರಿಗೆ ಹಲವಾರು ಸಮಯಗಳಿಂದ ಕಾಯುತ್ತಿದ್ದ ಯಶಸ್ಸು ದೊರೆಯಲಿದೆ. ರಾಜಕೀಯ ಕ್ಷೇತ್ರದಲ್ಲಿ ಆಕ್ಟಿವ್ ಆಗಿರುವವರಿಗೆ ಈ ಸಂದರ್ಭದಲ್ಲಿ ಉನ್ನತ ಪದವಿ ದೊರೆಯುವಂತಹ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿದೆ.

ಕರ್ಕಾಟಕ ರಾಶಿ; ಕರ್ಕಾಟಕ ರಾಶಿಯವರ ಅದೃಷ್ಟದ ಮನೆಯಲ್ಲಿ ಸೂರ್ಯನ ಸಂಚಾರ ಮಾಡಲಿದ್ದಾನೆ. ಹೀಗಾಗಿ ಕರ್ಕಾಟಕ ರಾಶಿಯವರ ಮೂರು ವಿಭಾಗದಲ್ಲಿ ಅದೃಷ್ಟದ ಹೊಳೆ ಹರಿದು ಬರಲಿದೆ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯಲಿದ್ದಾರೆ ವ್ಯಾಪಾರ-ವ್ಯವಹಾರದಲ್ಲಿ ಹಣವನ್ನು ಗಳಿಸಲಿದ್ದಾರೆ ಹಾಗೂ ಸಮಾಜದಲ್ಲಿ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ ಸೂರ್ಯನ ಸಂಚಾರದಿಂದ ಕರ್ಕಾಟಕ ರಾಶಿಯವರಿಗೆ ಬಂಪರ್ ಉಡುಗೊರೆ ಲಭಿಸಲಿದೆ.

ವೃಶ್ಚಿಕ ರಾಶಿ; ಸೂರ್ಯನ ಸಂಚಾರದ ಸಂದರ್ಭದಲ್ಲಿ ವೃಶ್ಚಿಕರಾಶಿಯವರಿಗೆ ಎಲ್ಲಾ ವಿಭಾಗಗಳಲ್ಲೂ ಕೂಡ ಲಾಭದ ನಿರೀಕ್ಷೆ ಇದೆ. ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಒದಗಿಬರಲಿದೆ. ಬೇಕಾಗಿರುವ ಸಂದರ್ಭದಲ್ಲಿ ನಿಮ್ಮ ಕೈಗೆ ಹಣ ಬಂದು ಸೇರಲಿದೆ. ಕೌಟುಂಬಿಕ ಅಂತಃಕಲಹಗಳು ಮುಗಿದು ಶಾಂತಿಯನ್ನು ವುದು ನೆಲೆಸಲಿದೆ. ದೂರ ಪ್ರದೇಶಗಳಿಗೆ ಪ್ರವಾಸವನ್ನು ಹೋಗುವ ಸಾಧ್ಯತೆ ಕೂಡ ಈ ಸಂದರ್ಭದಲ್ಲಿ ಒದಗಿಬರಲಿದೆ ಎಂಬುದಾಗಿ ಹೇಳಬಹುದಾಗಿದೆ.

ಧನು ರಾಶಿ; ಸೂರ್ಯನ ರಾಶಿ ಸಂಚಾರದಿಂದಾಗಿ ಧನುರಾಶಿಯವರಿಗೆ ಆರ್ಥಿಕ ಸ್ಥಿತಿಗತಿಯಲ್ಲಿ ಸಾಕಷ್ಟು ಉನ್ನತಮಟ್ಟದ ಯಶಸ್ಸು ದೊರಕಲಿದೆ. ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಕೆಲಸ ಅಥವಾ ವ್ಯವಹಾರದಲ್ಲಿ ಇರುವವರಿಗೆ ಗೆಲುವು ನಿರೀಕ್ಷಿತ ವಾಗಿದೆ. ಹೊಸ ಮನೆ ಕಾರು ಅಥವಾ ಜಾಗವನ್ನು ಖರೀದಿಸಬಹುದಾದಂತಹ ಸಾಧ್ಯತೆ ದಟ್ಟವಾಗಿದ್ದು ಅತಿಶೀಘ್ರದಲ್ಲೇ ಅವುಗಳ ಆಗಮನ ನಿಮ್ಮ ಜೀವನದಲ್ಲಿ ನಡೆಯಲಿದೆ. ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಈ ರಾಶಿಯವರಿಗೆ ಸಾಕಷ್ಟು ಸಮಯಗಳಿಂದ ಕಾಯ್ಕೊಂಡು ಬರುತ್ತಿದ್ದ ಎಲ್ಲಾ ಕನಸುಗಳು ನನಸಾಗುವ ಸಾಧ್ಯತೆ ಹೆಚ್ಚಾಗಿದೆ. ನಿಂತುಹೋಗಿದ್ದ ಎಲ್ಲಾ ಕೆಲಸಗಳು ಕೂಡ ಸಂಪೂರ್ಣವಾಗಲಿವೆ. ಮದುವೆಗಾಗಿ ಕಾಯುತ್ತಿರುವವರ ವೈವಾಹಿಕ ಜೀವನವು ಅತಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಸೂರ್ಯದೇವನ ಆಶೀರ್ವಾದದಿಂದಾಗಿ ಜೀವನ ಸರಿಯಾದ ದಿಕ್ಕಿನಲ್ಲಿ ಚಲಿಸಲು ಆರಂಭವಾಗಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.