ಆರ್ಸಿಬಿ ಡುಪ್ಲೆಸಿಸ್ ರವರನ್ನು ನಾಯಕನನ್ನಾಗಿ ಮಾಡಿದಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಗವಾಸ್ಕರ್ ಹೇಳಿದ್ದೇನು ಗೊತ್ತೇ??

ಆರ್ಸಿಬಿ ಡುಪ್ಲೆಸಿಸ್ ರವರನ್ನು ನಾಯಕನನ್ನಾಗಿ ಮಾಡಿದಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಗವಾಸ್ಕರ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾವು ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಬಂದಾಗಲೆಲ್ಲ ಈ ಬಾರಿ ಖಂಡಿತವಾಗಿ ನಮ್ಮ ನೆಚ್ಚಿನ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನಕ ಗೆಲ್ಲುತ್ತದೆ ಎಂಬ ಗಟ್ಟಿ ನಿರ್ಧಾರವನ್ನು ಹೊಂದಿರುತ್ತಿದ್ದೆವು. ಆದರೆ ಕಳೆದ ಬಾರಿ ವಿರಾಟ್ ಕೊಹ್ಲಿ ರವರು ನಾಯಕತ್ವದಿಂದ ಕೆಳಗಿಳಿದನಂತರ ಮುಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎಂಬುದಾಗಿ ಎಲ್ಲರೂ ಕೂಡ ಗೊಂದಲದಲ್ಲಿ ಬಿದ್ದಿದ್ದರು.

ಕೊನೆಗೂ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿದೆ. ಹೌದು ವಿರಾಟ್ ಕೊಹ್ಲಿ ರವರ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ದಕ್ಷಿಣ ಆಫ್ರಿಕಾದ ಮೂಲದ ಡುಪ್ಲೆಸಿಸ್ ರವರು ಆಯ್ಕೆಯಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೆಗಾ ಹರಾಜಿನಲ್ಲಿ ಡುಪ್ಲೆಸಿಸ್ ರವರನ್ನು ಬರೋಬ್ಬರಿ 8 ಕೋಟಿ ರೂಪಾಯಿಗೆ ಖರೀದಿಸಿತ್ತು. ಈಗಾಗಲೇ ನಿಮಗೆ ತಿಳಿದಿರುವಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಪ್ರತಿವರ್ಷ ಟಾಪ್ ರನ್ ಸ್ಕೋರರ್ ಆಗಿ ಡುಪ್ಲೆಸಿಸ್ ಅವರು ಕಾಣಿಸಿಕೊಂಡಿದ್ದಾರೆ.

ಈ ಬಾರಿ ಅವರ ಆಯ್ಕೆಯಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡುವ ತವಕದಲ್ಲಿದೆ. ಡುಪ್ಲೆಸಿಸ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿರುವುದರ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಅವರು ಏನು ಹೇಳಿದ್ದಾರೆ ಅನ್ನುವುದನ್ನು ತಿಳಿಯೋಣ ಬನ್ನಿ. ಹೌದು ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಗಿರುವ ಸುನೀಲ್ ಗಾವಸ್ಕರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡುಪ್ಲೆಸಿಸ್ ರವರನ್ನು ನಾಯಕನನ್ನಾಗಿ ಆಯ್ಕೆ ಮಾಡಿರುವುದನ್ನು ಸ್ವಾಗತಿಸಿ ಶ್ಲಾಘಿಸಿದ್ದಾರೆ. ಇದು ಬೆಂಗಳೂರು ತಂಡದ ಉತ್ತಮ ಆಯ್ಕೆ ಎಂಬುದಾಗಿ ಹೊಗಳಿದ್ದಾರೆ. ನಾಯಕನಾಗಿ ಡುಪ್ಲೆಸಿಸ್ ರವರಿಗೆ ಅಗತ್ಯವಾದಂತಹ ಅನುಭವ ಇದೆ ಎಂಬುದನ್ನು ಕೂಡ ಇಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಕೇಳಿದ ನಂತರ ಅಭಿಮಾನಿಗಳು ಕೂಡ ಈ ಸಲ ಕಪ್ ನಮ್ದೇ ಎನ್ನುವುದನ್ನು ಜೋರಾಗಿ ಹೇಳಲು ಆರಂಭಿಸಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.