ಧೀಡಿರ್ ಎಂದು ಲಂಕಾ ಡ್ರೆಸ್ಸಿಂಗ್ ರೂಂ ಗೆ ತೆರಳಿದ ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್, ಯಾಕೆ ಗೊತ್ತೇ?? ಭೇಷ್ ಎಂದ ನೆಟ್ಟಿಗರು.

ಧೀಡಿರ್ ಎಂದು ಲಂಕಾ ಡ್ರೆಸ್ಸಿಂಗ್ ರೂಂ ಗೆ ತೆರಳಿದ ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್, ಯಾಕೆ ಗೊತ್ತೇ?? ಭೇಷ್ ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಭಾರತ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ರೋಹಿತ್ ಶರ್ಮಾ ಮೊದಲ ಟೆಸ್ಟ್ ಸರಣಿಯನ್ನೇ ಗೆದ್ದು ಬೀಗಿದ ನಾಯಕ ಎಂಬ ಖ್ಯಾತಿಗೆ ಪಾತ್ರರಾದರು.ಈ ನಡುವೆ ಈ ಟೆಸ್ಟ್ ಹಲವಾರು ಅಚ್ಚರಿಗಳಿಗೆ ಕಾರಣವಾಯಿತು. ದೇಶಿಯ ಟೆಸ್ಟ್ ನಲ್ಲಿ ಮೊದಲ ಬಾರಿಗೆ ಜಸಪ್ರಿತ್ ಬುಮ್ರಾ ಐದು ವಿಕೆಟ್ ಗಳ ಗೊಂಚಲು ಪಡೆದ ಸಾಧನೆ ಮಾಡಿದರು. ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ನಲ್ಲಿ ಮಿಂಚಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಹನುಮ ವಿಹಾರಿ ಸಹ ತಾವು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸೂಕ್ತ ಅಭ್ಯರ್ಥಿ ಎಂದು ಸಾಬೀತುಪಡಿಸಿದರು. ಇದೇ ವೇಳೆ ಲಂಕಾ ತಂಡದ ವೇಗದ ಬೌಲರ್ ಸುರಂಗ ಲಕ್ಮಲ್ ತಮ್ಮ ವೃತ್ತಿ ಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ಈ ವೇಳೆ ಒಂದು ಸ್ವಾರಸ್ಯಕರ ಸಂಗತಿ ಸಹ ನಡೆಯಿತು. ಭಾರತ ದ್ವೀತಿಯ ಇನ್ನಿಂಗ್ಸ್ ನಲ್ಲಿ ಅಕ್ಷರ್ ಪಟೇಲ್ ವಿಕೇಟ್ ಕಳೆದುಕೊಂಡ ತಕ್ಷಣ ಡಿಕ್ಲೇರ್ ಮಾಡಿಕೊಂಡಿತು.

ಈ ಸಂದರ್ಭದಲ್ಲಿ ಏಕಾಏಕಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ಏಕಾಏಕಿ ಶ್ರೀಲಂಕಾ ತಂಡದ ಡ್ರೆಸ್ಸಿಂಗ್ ರೂಂ ಗೆ ಹೋದರು. ಎಲ್ಲರಿಗೂ ಆಶ್ಚರ್ಯ ಆಯಿತು. ಆದರೇ ಕೊನೆಯ ಟೆಸ್ಟ್ ಪಂದ್ಯ ಆಡುತ್ತಿದ್ದ ಶ್ರೀಲಂಕಾ ತಂಡದ ವೇಗದ ಬೌಲರ್ ಸುರಂಗ ಲಕ್ಮಲ್ ರವರಿಗೆ ಅಭಿನಂದನೆ ಸಲ್ಲಿಸಲು ಎನ್ನುವುದು ತಿಳಿಯಿತು. ಈ ವಿಡಿಯೋ ಈಗ ಸದ್ಯ ಈಗ ಕ್ರಿಕೇಟ್ ಒಂದು ಜಂಟಲ್ ಮೆನ್ ಗೇಮ್ ಎಂಬುದಕ್ಕೆ ಸಾಕ್ಷಿ ಎಂದು ಹಲವಾರು ಜನ ಶೇರ್ ಮಾಡುತ್ತಿದ್ದಾರೆ. ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿಯವರ ಕ್ರೀಡಾ ಸ್ಫೂರ್ತಿಗೂ ಸಹ ಎಲ್ಲರೂ ಬಹುಪರಾಕ್ ಎಂದು ಜಯಘೋಷ ಮೊಳಗಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ