ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜೇಸನ್ ರಾಯ್ ಬದಲು ಖಡಕ್ ಬ್ಯಾಟ್ಸ್ಮನ್ ಕರೆತಂದ ಗುಜರಾತ್ ಟೈಟಾನ್ಸ್, ಜಾಸನ್ ರಾಯ್ ಸ್ಥಾನ ತುಂಬಲು ಸಾಧ್ಯವೇ?? ಯಾರು ಗೊತ್ತೇ??

79

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ೨೦೨೨ನೇ ಆವೃತ್ತಿ ಕೆಲವೇ ದಿನಗಳಲ್ಲಿ ಆರಂಭವಾಗುತ್ತಿದೆ. ಈಗಾಗಲೇ ಎಲ್ಲಾ ಹತ್ತು ಫ್ರಾಂಚೈಸಿಗಳು ತರಬೇತಿ ಶಿಬಿರ ಆಯೋಜನೆ ಮಾಡಿದ್ದು ಎಲ್ಲಾ ಆಟಗಾರರು ಸೂಕ್ತ ತಾಲೀಮಿನಲ್ಲಿ ತೊಡಗಿದ್ದಾರೆ. ಈ ಮಧ್ಯೆ ಹೊಸ ತಂಡವಾದ ಗುಜರಾತ್ ಟೈಟಾನ್ಸ್ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಈ ಭಾರಿ ಕಣಕ್ಕಿಳಿಯಲಿದೆ. ಹರಾಜಿನಲ್ಲಿ ಅತ್ಯುತ್ತಮ ಆಟಗಾರರನ್ನು ಖರೀದಿಸಿದೆ.

ಆದರೇ ಐಪಿಎಲ್ ಆರಂಭಕ್ಕೂ ಮುನ್ನ ತಂಡದ ಪ್ರಮುಖ ಬ್ಯಾಟ್ಸ್ಮನ್ ಹಾಗೂ ಆರಂಭಿಕ ಬ್ಯಾಟ್ಸಮನ್ ಜೇಸನ್ ರಾಯ್ ಐಪಿಎಲ್ ನ ದೀರ್ಘಾವಧಿ ಸರಣಿ ಹಾಗೂ ಬಯೋ ಬಬಲ್ ಕಾರಣ ನೀಡಿ ಐಪಿಎಲ್ ನಿಂದ ಹೊರಗುಳಿಯುವ ನಿರ್ಧಾರವನ್ನು ಪ್ರಕಟಿಸಿದ್ದರು. ಇದು ಗುಜರಾತ್ ಟೈಟಾನ್ಸ್ ತಂಡಕ್ಕೆ ಮರ್ಮಾಘಾತವಾಗಿತ್ತು. ಮೂಲಗಳ ಪ್ರಕಾರ ಜೇಸನ್ ರಾಯ್ ಸುಳ್ಳು ನೆಪ ಹೇಳಿದ್ದಾರೆ. ಅವರು ಐಪಿಎಲ್ ನಿಂದ ಹೊರಗುಳಿಯಲು ಪ್ರಮುಖ ನಿರ್ಧಾರ ಎಂದರೇ ಅದು ಜೇಸನ್ ರಾಯ್ ಕೇವಲ ಎರಡು ಕೋಟಿ ರೂಪಾಯಿ ಮೂಲ ಬೆಲೆಗೆ ಗುಜರಾತ್ ತಂಡದ ಪಾಲಾಗಿದ್ದರು.

ಅದಲ್ಲದೇ ಎರಡು ತಿಂಗಳ ಕಾಲ ಬಯೋ ಬಬಲ್ ನಲ್ಲಿ ಇರಲು ಕಷ್ಟ ಎಂಬ ಕಾರಣಕ್ಕೆ ಹೊರಗುಳಿದರು. ಈಗ ಅವರಿಂದ ತೆರವಾದ ಸ್ಥಾನಕ್ಕೆ ಸಮರ್ಥ ವಿದೇಶಿ ಆಟಗಾರನನ್ನು ಗುಜರಾತ್ ಟೈಟಾನ್ಸ್ ತಂಡ ಹುಡುಕಿ ತಂದಿದೆ. ಆ ಆಟಗಾರ ಬೇರೆ ಯಾರೂ ಅಲ್ಲ, ಆತ ಅಫ್ಘಾನಿಸ್ತಾನ ತಂಡದ ಆರಂಭಿಕ ಬ್ಯಾಟ್ಸಮನ್ ರಶಮಾನುಲ್ಲಾ ಗುರ್ಬಾಜ್. ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗುರ್ಬಾಜ್ ಇದೇ ಮೊದಲ ಭಾರಿ ಐಪಿಎಲ್ ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಶುಭಮಾನ್ ಗಿಲ್ ಜೊತೆ ಗುರ್ಬಾಜ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.