ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜೀವನದಲ್ಲಿ ಎಷ್ಟೆಲ್ಲ ಸಾಧನೆ ಮಾಡಿ, ರಷ್ಯಾವನ್ನು ಸೂಪರ್ ಪವರ್ ಮಾಡಿರುವ ಪುಟಿನ್, ತನ್ನ ಪ್ರೀತಿಗಾಗಿ ಏನು ಮಾಡಿದ್ದರು ಗೊತ್ತೇ?? ಪುಟಿನ್ ಪ್ರೇಮಕಥೆ.

2,931

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಒಂದು ಕೈ ಹಿಟ್ಲರ್ ಗೆ ಸಮಾನ ಅನ್ನೊಮಟ್ಟಿಗಿನ ಛಲವಾದಿ, ಕಠಿಣ ನಿರ್ಧಾರ ತೆಗೆದುಕೊಳ್ಳಬಲ್ಲ ವ್ಯಕ್ತಿತ್ವ ಹೊಂದಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮೇಲೆ ಯುದ್ಧಸಾರಿ ವಿಶ್ವದಾದ್ಯಂತ ಸುದ್ದಿಯಾಗಿದ್ದಾರೆ, ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ ಹೀಗೆ ರಷ್ಯಾ ದೇಶವನ್ನು ಆಳುತ್ತಿರುವ ಈ ದೊರೆಯ ಮನಸ್ಸನ್ನು ಆಳುತ್ತಿದ್ದುದು ಸೌಂದರ್ಯದ ಗಣಿ- ರಷ್ಯಾದ ಜಿಮ್ನಾಸ್ಟ್ ಅಲೀನಾ ಕಬೇವಾ. ಅದೆಂಥಾ ಲವ್ ಸ್ಟೋರಿ ಗೊತ್ತಾ. ಈ ಕಥೆಯ ಮೇಲೆ ಚಿತ್ರಗಳನ್ನು ನಿರ್ಮಿಸಿದರೂ ಆಶ್ಚರ್ಯವಿಲ್ಲ.

ಅಲೀನಾ ಕಬೇವಾ ರಷ್ಯಾದ ಪ್ರಸಿದ್ಧ ಜಿಮ್ನಾಸ್ಟ್. ಆದರೆ ಆಕೆ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಸಂಬಂಧದಿಂದಾಗಿ ಭಾರೀ ಸುದ್ದಿಯಾಗಿದ್ದರು. ಅವರು ಪುಟಿನ್ ಅವರೊಂದಿಗೆ ಅನೇಕ ಬಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಆದರೆ ಯಾರೂ ಈ ಸಂಬಂಧವನ್ನು ಪ್ರಶ್ನಿಸಿರಲಿಲ್ಲ. ಕಬೇವಾ 2000 ರಲ್ಲಿ ಸಿಡ್ನಿ ಒಲಂಪಿಕ್ ಕ್ರೀಡಾಕೂಟದಲ್ಲಿ ದೇಶಕ್ಕೆ ಕಂಚಿನ ಪದಕವನ್ನು ಗೆದ್ದರೆ, 2004 ರಲ್ಲಿ ಅಥೆನ್ಸ್ ಕ್ರೀಡಾಕೂಟದಲ್ಲಿ ತನ್ನ ದೇಶಕ್ಕೆ ಚಿನ್ನವನ್ನು ತಂದುಕೊಟ್ಟರು.

ತಮ್ಮ ದೇಶದ ಗೌರವವನ್ನು ಹೆಚ್ಚಿಸಿದ ರಷ್ಯಾದ ಆಟಗಾರರಲ್ಲಿ ಅಲೀನಾ ಕೂಡ ಒಬ್ಬರು. ಅವರು ವಿವಿಧ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿ ಒಟ್ಟು 14 ಪದಕಗಳನ್ನು, 21 ಯುರೋಪಿಯನ್ ಚಾಂಪಿಯನ್‌ಶಿಪ್ ಪದಕಗಳನ್ನು ಗೆದ್ದಿದ್ದಾರೆ. 2014 ರ ಸೋಚಿ ವಿಂಟರ್ ಒಲಿಂಪಿಕ್ಸ್‌ನಲ್ಲಿ ಟಾರ್ಚ್ ಬೇರರ್ ಪಾತ್ರವನ್ನು ನಿರ್ವಹಿಸಿದ್ದು ರಷ್ಯಾಕ್ಕೂ ಹೆಮ್ಮೆಯ ವಿಷಯವಾಗಿತ್ತು.

ಇನ್ನು ಅಲೀನಾ ವಯಕ್ತಿಕ ವಿಚಾರಕ್ಕೆ ಬಂದರೆ ಈ ಹಿಂದೆ ಆಕೆ ಒಬ್ಬ ಪೋಲೀಸ್‌ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ವರದಿಯಾಗಿತ್ತು. 2005 ರಲ್ಲಿ ಅವರು ಅವನಿಂದ ದೂರವಾದರು. ಇದರ ನಂತರ, 2008 ರಿಂದ, ಅವಳು ವ್ಲಾಡಿಮಿರ್ ಪುಟಿನ್ ಜೊತೆ ಸಂಬಂಧ ಬೆಳೆಸಿದರು. ಸತತ 7 ವರ್ಷಗಳ ಕಾಲ ನಡೆಯಿತು ಪುಟಿನ್, ಅಲೀನಾ ಜೊತೆ ಬಿಗಿಯಾದ ಸಂಬಂಧದಲ್ಲಿ ಬಂಧಿಯಾಗಿದ್ದರು. 2019 ರವರೆಗೂ, ಅಲೀನಾ ಪುಟಿನ್ ಜೊತೆಯಾಗಿ ರಷ್ಯಾದ ವಿವಿಧ ಕಾರ್ಯಕ್ರಮಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದರು, ಆದರೆ ಕಳೆದ 2 ವರ್ಷಗಳಿಂದ ಅದೇನಾಯ್ತೋ ಗೊತ್ತಿಲ್ಲ, ಅಲೀನಾ ಮಾತ್ರ ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲಿಯೂ ಕಾಣಿಸಿಕೊಂಡಿಲ್ಲ

2019 ರಲ್ಲಿ ಮಾಸ್ಕೋದ ಕ್ಲಿನಿಕ್‌ನಲ್ಲಿ ಅಲೀನಾ 2 ಅವಳಿಗಳಿಗೆ ಜನ್ಮ ನೀಡಿದರು. ವಿಪರ್ಯಾಸವೆಂದರೆ ಮಕ್ಕಳಿಗೆ ಜನ್ಮ ನೀಡಿದ ನಂತರ ಅಲೀನಾ ನಿಗೂಢವಾಗಿ ಕಣ್ಮರೆಯಾದರು. ಹಾಗಾಗಿ ಅವರ ಮಕ್ಕಳ ತಂದೆ ವ್ಲಾಡಿಮಿರ್ ಪುಟಿನ್ ಅವರೇ ಎಂದು ಹೇಳಲಾಗುತ್ತದೆ. ಪುಟಿನ್ ಅವರೊಂದಿಗಿನ ಸಂಬಂಧವು ಇಂದಿಗೂ ಚರ್ಚೆಯಾಗುತ್ತವೆ. ಪುಟಿನ್ ಮತ್ತು ಕಬೇವಾ ಅವರ ಸಂಬಂಧದ ಬಗ್ಗೆ ಜನ ಮಾತನಾಡುವಾಗಲೇ ಪುಟಿನ್ ಬೇರೆ ವಿವಾಹವಾದರು. 2014 ರಲ್ಲಿ ವಿಚ್ಛೇದನವನ್ನೂ ಪಡೆದರು. ಆದರೆ ಅಲೀನಾ ಬಗ್ಗೆ ಮಾತ್ರ ಇಂದಿಗೂ ಯಾವ ಸುಳಿವೂ ಇಲ್ಲದ್ದು ದುರದೃಷ್ಟಕರ.

Get real time updates directly on you device, subscribe now.