ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇದೇ ತಿಂಗಳ ಕೊನೆಯಲ್ಲಿ ಆರಂಭವಾಗುವ ಐಪಿಎಲ್ ಗೆ ಆರ್ಸಿಬಿ ಭರದ ಸಿದ್ಧತೆ, ಸ್ಥಾನ ಪಡೆಯಬಹುದಾದ 4 ವಿದೇಶಿಗರು ಯಾರು ಗೊತ್ತೇ??

600

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ಕ್ರೇಜ್ ಈಗ ಜೋರಾಗಿ ಶುರುವಾಗಿದೆ. ಮಾರ್ಚ್ 26 ರಿಂದ ಈ ಕ್ರಿಕೆಟ್ ಹಬ್ಬ ಭಾರತಾದ್ಯಂತ ತನ್ನ ಕಾಲನ್ನು ಪಸರಿಸಲಿದೆ. ಈಗಾಗಲೇ ಎಲ್ಲಾ ಹತ್ತು ಫ್ರಾಂಚೈಸಿಗಳು ತರಬೇತಿ ಶಿಬಿರ ಆರಂಭಿಸಿದ್ದು, ಕೆಲವು ಆಟಗಾರರು ತರಬೇತಿ ಕ್ಯಾಂಪ್ ಗೆ ಬಂದು ಸೇರಿದ್ದಾರೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಐಪಿಎಲ್ ಗಾಗಿ ಸಿದ್ಧತೆಗಳನ್ನು ಭರದಿಂದ ನಡೆ‌ಸುತ್ತಿದೆ. ಈ ನಡುವೆ ಆರ್ಸಿಬಿ ತಂಡದಲ್ಲಿ ಸ್ಥಾನ ಪಡೆಯಲಿರುವ ನಾಲ್ವರು ವಿದೇಶಿ ಆಟಗಾರರು ಯಾರು ಎಂಬ ಪ್ರಶ್ನೆ ಸಹ ಎದ್ದಿದೆ. ಬನ್ನಿ ಆ ಸಂಭವನೀಯ ನಾಲ್ವರು ಆಟಗಾರರು ಯಾರು ಎಂಬುದನ್ನು ತಿಳಿಯೋಣ.

1.ಫಾಪ್ ಡು ಪ್ಲೇಸಿಸ್ : ದಕ್ಷಿಣ ಆಫ್ರಿಕಾದ ಈ ಆಟಗಾರ ಆರ್ಸಿಬಿ ತಂಡದ ನೂತನ ನಾಯಕ ಆಗಬಹುದು ಎಂಬ ಮಾತು ಇದೆ. ಆರಂಭಿಕ ಬ್ಯಾಟ್ಸಮನ್ ಆಗಿ ಹಾಗೂ ಉತ್ತಮ ಫೀಲ್ಡರ್ ಆಗಿ ಡು ಪ್ಲೇಸಿಸ್ ಮ್ಯಾಚ್ ವಿನ್ನರ್ ಆಗಬಹುದು.

2.ಗ್ಲೆನ್ ಮ್ಯಾಕ್ಸ್ವೆಲ್ : ಆಸ್ಟ್ರೇಲಿಯಾದ ಈ ಆಲ್ ರೌಂಡರ್ ಕಳೆದ ಬಾರಿ ಆರ್ಸಿಬಿ ತಂಡದಲ್ಲಿದ್ದರು. ಈ ಭಾರಿ ಕ್ಯಾಪ್ಟನ್ ರೇಸ್ ನಲ್ಲಿ ಸಹ ಇದ್ದಾರೆ. ಆದರೇ ವಿವಾಹದ ಕಾರಣ ಆರಂಭದ ಕೆಲವು ಪಂದ್ಯಗಳಿಗೆ ಇವರು ಅಲಭ್ಯರಾಗಲಿದ್ದಾರೆ‌ ಎಂಬ ಮಾಹಿತಿ ಇದೆ. ಆದರೇ ಅದಿನ್ನು ಖಚಿತವಾಗಿಲ್ಲ.

3.ವನಿಂದು ಹಸರಂಗ : ಸದ್ಯ ವಿಶ್ವದ ಟಿ 20 ಕ್ರಿಕೆಟ್ ನ ನಂಬರ್ ೧ ಬೌಲರ್ ಆಗಿರುವ ಇವರು ಅತಿ ಹೆಚ್ಚು ಮೊತ್ತಕ್ಕೆ ಆರ್ಸಿಬಿ ಪಾಲಾದರು. ಇವರು ಆರ್ಸಿಬಿಯ ಅನುಭವಿ ಸ್ಪಿನ್ನರ್ ಯುಜವೇಂದ್ರ ಚಾಹಲ್ ಸ್ಥಾನವನ್ನು ತುಂಬಬೇಕಾಗುತ್ತದೆ. ಆ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕೆಂದು ಕಾದು ನೋಡಬೇಕು.

4.ಜೋಶ್ ಹೇಜಲ್ವುಡ್ : ಆಸ್ಟ್ರೇಲಿಯಾದ ವೇಗಿ ಹೇಜಲ್ವುಡ್ ಈ ಭಾರಿ ಆರ್ಸಿಬಿ ತಂಡಕ್ಕೆ ದೊರೆತ ಉತ್ತಮ ಆಟಗಾರ. ಇವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತ. ಇವರನ್ನು ಆರ್ಸಿಬಿ ಮ್ಯಾನೇಜ್ ಮೆಂಟ್ ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.