ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕನ್ನಡದ ಒಂದು ಕಾಲದ ಟಾಪ್ ನಟ ರವಿಚಂದ್ರನ್ ರವರ ಜೊತೆ ನಟಿಸಿ ಯಶಸ್ಸು ಪಡೆದ ಈ ನಾಯಕಿರಲ್ಲಿ ಬೆಸ್ಟ್ ಜೋಡಿ ಯಾರು ಗೊತ್ತೇ??

323

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಯಾವುದೇ ನಟಿಯನ್ನ ಅವರಿರುವ ಸೌಂದರ್ಯಕ್ಕಿಂತ ಒಂದು ಪಟ್ಟು ಜಾಸ್ತಿ ಚಂದವಾಗಿ ತೆರೆಯ ಮೇಲೆ ಕಾಣುವಂಥೆ ಮಾಡುವ ಚಾಕಚಕ್ಯತೆ, ಆ ರಸಿಕತೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಬಿಟ್ಟರೆ ಬೇರೆಯಾವ ನಿರ್ದೇಶಕ, ನಿರ್ಮಾಪಕರಿಗೂ ಇಲ್ಲ ಅಂದ್ರೆ ಅತಿಶಯೋಕ್ತಿಯಲ್ಲ. ಯಾಕಂದ್ರೆ ಬೇರೆ ಎಲ್ಲಾ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣಿಸಿದ್ದ ಹಲವು ನಟಿಯರು, ಕನ್ನಡಿಗರ ನಡುವೆ ಗುರುತಿಸಿಕೊಂಡಿದ್ದೇ ರವಿಸರ್ ಜೊತೆ ನಟಿಸಿದ ಮೇಲೆನೆ. ಹೌದು ಹಲವು ನತಿಯರನ್ನ ಪರ ಭಾಷೆಗಳಿಂದ ಕೂಡ ಕರೆತಂದು ಉತ್ತಮ ರೀತಿಯಲ್ಲಿ ಅವರ ನಟನೆ ಹಾಗೂ ಸೌಂದರ್ಯವನ್ನು ಸಿನಿ ಪ್ರಿಯರ ನಡುವೆ ಕೊಂಡಾಡುವಂತೆ ಮಾಡಿದ ಹೆಗ್ಗಳಿಕೆ ವಿ. ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಅವುಗಳಲ್ಲಿ ಕೆಲವು ನಟಿಯರು ರವಿಚಂದ್ರನ್ ಅವರಿಗೆ ನಾಯಕಿನಟಿಯಾಗಿ ನಟಿಸಿ ಬೆಸ್ಟ್ ಪೇರ್ ಎನಿಸಿಕೊಂಡಿದ್ದಾರೆ.

ರವಿಚಂದ್ರನ್ ನಟನೆ ಆರಂಭಿಸಿದಾಗ ಅವರ ಜೊತೆ ಸಾಥ್ ನೀಡಿದ್ದು ನಟಿ ಭವ್ಯ ಹಾಗೂ ನಟಿ ಮಹಾಲಕ್ಷ್ಮಿ. ಭವ್ಯಾ ಅವರು್ ಸಂಗ್ರಾಮ, ಪ್ರಳಯಾಂತಕ, ನಾ ನಿನ್ನ ಪ್ರೀತಿಸುವೆ ಈ ಮೂರು ಚಿತ್ರಗಳಲ್ಲಿ ರವಿ ಸರ್ ಜೊತೆ ಅಭಿನಯಿಸಿ ಸೈ ಎನಿಸಿಕೊಂಡವರು. ನಂತರದಲ್ಲಿ ಮಹಾಲಕ್ಷ್ಮಿ ಕೂಡ ಉತ್ತಮ ಜೋಡಿಯಾದ್ರು. ಇದಾದ ಬಳಿಕ ಅನಿವಾರ್ಯವಾಗಿ ಪ್ರೇಮಲೋಕ ಚಿತ್ರವನ್ನ ನಿರ್ದೇಶಿಸುವ ಬವಾಬ್ದಾರಿಯನ್ನು ರವಿಚಂದ್ರನ್ ಹೊರಬೇಕಾಯ್ತು. ನಟನೆ ಹಾಗೂ ನಿರ್ದೇಶನ ಎರಡರ ಜವಾಬ್ದಾರಿಯ ಜೊತೆಗೆ ಪರಭಾಷಾ ನಟಿ ಜೂಹಿ ಚಾವ್ಲಾ ಅವರನ್ನು ಪ್ರಥಮ ಬಾರಿಕೆ ಕನ್ನಡಕ್ಕೆ ಕರೆತರುವ ಜವಾಬ್ದಾರಿಯನ್ನೂ ರವಿ ಸರ್ ನಿಭಾಯಿಸಿದರು. ಇದಾದ ಬಳಿಕ ಶಾಂತಿ ಕ್ರಾಂತಿ ಚಿತ್ರದಲ್ಲಿಯೂ ಜೋಹಿ ಚಾವ್ಲಾ ರವಿಚಂದ್ರನ್ ಗೆ ಜೋಡಿಯಾಗಿ ಅಭಿನಯಿಸಿದ್ರು.

ನಂತರ ರವಿಚಂದ್ರನ್ ಅವರ ಜೊತೆ ಹೆಚ್ಚು ಚಿತ್ರಗಳಲ್ಲಿ ಪರದೆ ಹಂಚಿಕೊಂಡವರೇ ನಟಿ ಖುಷ್ಭೂ. ನಟಿ ಖುಷ್ಭೂ ಇವತ್ತಿಗೂ ಕೂಡ ರವಿಚಂದ್ರನ್ ಅವರೊಂದಿಗೆ ಉತ್ತಮ ಸ್ನೇಹ ಉಳಿಸಿಕೊಳ್ಳುವುದಕ್ಕೆ ಕಾರಣ ಕ್ರೇಜಿಸ್ಟಾರ್ ಅವರ ಸ್ವಭಾವ ಹಾಗೂ ನಡವಳಿಕೆ ಕೂಡ ಕಾರಣ ಎನ್ನಬಹುದು. ಇನ್ನು ನಟಿ ಮೀನ ಪುಟ್ನಂಜ ಅಂತ ರವಿಗೆ ಜೊತೆಯಾದ್ರೆ, ರಾಜಾ ರಾಜಾ ಅಂತ ಪ್ರೀತ್ಸೋದ್ ತಪ್ಪಾ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ನಟಿಸ್ತಿದ್ದ ಕನ್ನಡತಿ ಶಿಲ್ಪಾ ಶೆಟ್ಟಿ ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ರು. ಇನ್ನು ಅಣ್ಣಯ್ಯ ಒಂದೇ ಚಿತ್ರದಲ್ಲಿ ಅಭಿನಯಿಸಿದ್ರೂ ರವಿ ಸರ್ ಗೆ ಉತ್ತಮ ಜೋಡಿ ಅನ್ನಿಸಿದ್ದು ನಟಿ ಮಧುಬಾಲಾ. ಇನ್ನೂ ಅನೇಕ ನಟಿಯರು ಕ್ರೇಜಿಸ್ಟಾರ್ ಜೊತೆ ಅಭಿನಯಿಸಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾದರೆ ಇಷ್ಟು ನಟಿಯರಲ್ಲಿ ರವಿಚಂದ್ರನ್ ಅವರಿಗೆ ಬೆಸ್ಟ್ ಪೇರ್ ಅಂತ ನಿಮಗೆ ಯಾವ ನಟಿ ಅನ್ನಿಸ್ತಾರೆ? ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.

Get real time updates directly on you device, subscribe now.