ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್, ಎಲ್ಲವೂ ಸರಿ ಇದೆ ಎನ್ನುವಾಗ ಇದೇನಾಯ್ತು ಕನ್ನಡತಿಗೆ?? ಅಭಿಮಾನಿಗಳಿಗೆ ಬಾರಿ ನಿರಾಸೆ. ಮುಂದೇನು ನಡೆಯಲಿದೆ ಗೊತ್ತೇ??

70

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಕನ್ನಡತಿ ಧಾರಾವಾಹಿ ಹಲವಾರು ವಿಚಾರಗಳಿಗಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಒಂದು ಕಡೆ ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಅವರ ಪಾತ್ರದ ಕಾಂಬಿನೇಷನ್ ವಿಚಾರದಲ್ಲಿ ಜನರ ಮೆಚ್ಚುಗೆಯನ್ನು ಗಳಿಸಿದರೆ, ಇನ್ನೊಂದು ವಿಚಾರವೇನೆಂದರೆ ಕನ್ನಡತಿ ಧಾರಾವಾಹಿ ಯಲ್ಲಿರುವ ಕನ್ನಡದ ಉಲ್ಲೇಖಗಳು ನಿಜಕ್ಕೂ ಕೂಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈಗ ಇತ್ತೀಚೆಗಷ್ಟೆ ಮತ್ತೊಂದು ವಿಚಾರದ ಕುರಿತಂತೆ ಕೂಡ ಸುದ್ದಿಯಲ್ಲಿದೆ ಕನ್ನಡ ಧಾರಾವಾಹಿ ತಂಡ. ಅದೇನು ಎಂಬುದನ್ನು ತಿಳಿಯೋಣ ಬನ್ನಿ.

ಕನ್ನಡತಿ ಧಾರವಾಹಿ ಪ್ರತಿಯೊಂದು ವಿಚಾರದಲ್ಲೂ ಕೂಡಾ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತದೆ. ಪ್ರತಿಯೊಂದು ಪಾತ್ರಗಳು ಕೂಡ ಪ್ರಮುಖವಾದ ಪಾತ್ರವನ್ನು ಧಾರವಾಹಿಯಲ್ಲಿ ಪಡೆದುಕೊಂಡಿದೆ. ಇತ್ತೀಚಿಗೆ ಧಾರವಾಹಿ ಕೆಟ್ಟ ಕೆಲಸಗಳಿಂದಲೇ ತನ್ನ ಗುರುತನ್ನು ಹೊಂದಿರುವ ಸಾನಿಯಾ ಪಾತ್ರವನ್ನು ಪ್ರಮುಖ ವನ್ನಾಗಿಸಿತ್ತು. ಇದರಿಂದಾಗಿ ಪ್ರೇಕ್ಷಕರು ಕೂಡ ಇಂತಹ ಕೆಟ್ಟ ಪಾತ್ರಗಳನ್ನು ನಿರ್ವಹಿಸುವ ಪಾತ್ರವನ್ನು ವಿಜ್ರಂಭಿಸುವ ಮೂಲಕ ಸಮಾಜಕ್ಕೆ ಯಾವ ಸಂದೇಶವನ್ನು ನೀಡಲು ಹೋಗಿದ್ದೀರಿ ಎಂಬುದಾಗಿ ಎಚ್ಚರಿಸಿದೆ. ಇದನ್ನು ಅವಲೋಕಿಸಿದ ಕನ್ನಡತಿ ಧಾರಾವಾಹಿ ತಂಡ ನಂತರ ಕುರ್ಚಿಯ ನಿಶ್ಚಿತಾರ್ಥವನ್ನು ಪ್ರಮುಖ ಮುನ್ನೆಲೆಗೆ ತರುತ್ತದೆ. ಧಾರವಾಹಿ ತಂಡದ ಈ ಪ್ರಬುದ್ಧ ನಿಲುವು ಪ್ರೇಕ್ಷಕರನ್ನು ಇನ್ನು ಕೂಡ ಮೆಚ್ಚುವಂತೆ ಮಾಡಿತ್ತು.

ಇನ್ನು ಈ ದಾರವಾಹಿಯಲ್ಲಿ ಕೇವಲ ಹರ್ಷ ಹಾಗೂ ಭುವಿ ಪಾತ್ರಗಳು ಮಾತ್ರವಲ್ಲದೆ ಬಹುತೇಕ ಎಲ್ಲಾ ಪಾತ್ರಗಳು ಕೂಡ ಪ್ರಾಮುಖ್ಯತೆಯನ್ನು ಹೊಂದಿದ್ದವು. ಆದರೆ ಎಲ್ಲಾ ಪ್ರಮುಖ ಪಾತ್ರಗಳಲ್ಲಿ ಇಂದು ನಾವು ಹೇಳಹೊರಟಿರುವ ಪಾತ್ರವೂ ಇನ್ನು ಕೆಲವೇ ದಿನಗಳಲ್ಲಿ ಧಾರವಾಹಿಯಿಂದ ಹೊರ ನಡೆಯಲಿದೆ ಎಂಬುದಾಗಿ ಸುದ್ದಿಗಳು ಕೇಳಿಬರುತ್ತಿವೆ. ಹಾಗಿದ್ದರೆ ಕನ್ನಡತಿ ಧಾರಾವಾಹಿಯಿಂದ ಹೊರ ಹೋಗಲಿರುವ ಪಾತ್ರ ಯಾವುದು ಎನ್ನುವುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಆ ಪಾತ್ರ ಇನ್ಯಾವುದು ಅಲ್ಲ ಅರ್ಚನ ತಾಯಿಯ ಪಾತ್ರವನ್ನು ಅಂದರೆ ರತ್ನ ಪಾಲ ಪಾತ್ರದಾರಿ ಇನ್ನೇನು ಕೆಲವೇ ಸಂಚಿಕೆಗಳಲ್ಲಿ ಹೊರನಡೆದಿದ್ದಾರೆ ಎನ್ನುವುದು ತಿಳಿದುಬಂದಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಮ್ಮನ ಪಾತ್ರಕ್ಕೆ ಮೊದಲಿನಿಂದಲೂ ಕೂಡ ಗಂಭೀರವಾದ ಆರೋಗ್ಯ ಸಮಸ್ಯೆ ಇತ್ತು. ಈ ಹಿನ್ನೆಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅವರು ಮರಣವನ್ನು ಹೊಂದಲಿದ್ದಾರೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಹರ್ಷನ ಮದುವೆಯನ್ನು ನೋಡುವಂತಹ ಅವರ ಕೊನೆಯ ಇಚ್ಛೆಯನ್ನು ಕೂಡ ತಿಳಿಸಿದ್ದರು.

ಅಮ್ಮಮ್ಮ ರತ್ನಮಾಲಾ ಅವರ ಇಚ್ಛೆಯಂತೆ ಹರ್ಷನಿಗೆ ಭುವಿಯನ್ನು ಕೂಡ ಸೆಲೆಕ್ಟ್ ಮಾಡಿದ್ದಾಯಿತು. ಮಗನಿಗೆ ಒಳ್ಳೆ ಹೆಂಡತಿ ಹಾಗೂ ಕುಟುಂಬಕ್ಕೆ ಒಳ್ಳೆ ಸೊಸೆ ಕೂಡ ಸಿಕ್ಕಾಯಿತು. ಇತ್ತೀಚಿಗಷ್ಟೇ ಅವರನ್ನು ಪರೀಕ್ಷಿಸಿರುವ ವೈದ್ಯರು ಕೂಡ ಯಾವ ಸಂದರ್ಭದಲ್ಲಿ ಕೂಡ ಮರಣವನ್ನು ಹೊಂದಬಹುದಾಗಿದೆ ಎಂಬುದನ್ನು ಮುನ್ನಚರಿಕೆ ತಿಳಿಸಿದ್ದಾರೆ. ಈ ಕುರಿತಂತೆ ಎಲ್ಲರೂ ಕೂಡ ದುಃಖಿತರಾಗಿದ್ದಾರೆ. ಪ್ರೇಕ್ಷಕರು ಕೂಡ ಅವರನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಿ ಭುವಿಯ ಆಯುರ್ವೇದ ವೈದ್ಯಕೀಯದಲ್ಲಾದರೂ ಉಳಿಸಿಕೊಳ್ಳಿ ಎಂಬುದಾಗಿ ಧಾರವಾಹಿ ತಂಡಕ್ಕೆ ಬೇಡಿಕೆ ಇಟ್ಟಿದ್ದಾರೆ.

ಹರ್ಷ ಹಾಗೂ ರತ್ನಮಾಲಾ ರವರ ಅಮ್ಮ ಮಗನ ಸ ಬಾಂಧವ್ಯವನ್ನು ಧಾರವಾಹಿಯ ಪ್ರಾರಂಭದಿಂದಲೂ ಕೂಡ ಪ್ರೇಕ್ಷಕರು ಮೆಚ್ಚಿಕೊಂಡು ಬಂದಿದ್ದಾರೆ. ಹೀಗಾಗಿ ರತ್ನಮಾಲ ಪಾತ್ರ ವನ್ನು ಕಳೆದುಕೊಳ್ಳಲು ಪ್ರೇಕ್ಷಕರು ಇಷ್ಟಪಡುತ್ತಿಲ್ಲ. ಹೀಗಾಗಿಯೇ ನಿರ್ದೇಶಕರ ಬಳಿ ಹೇಗಾದರೂ ಮಾಡಿ ಅವರನ್ನು ಉಳಿಸಿಕೊಳ್ಳಿ ಎಂಬುದಾಗಿ ಬೇಡಿಕೆಯಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ಕುರಿತಂತೆ ನಿರ್ದೇಶಕರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.