ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇನ್ನೇನು ಮುಂದಿನ ತಿಂಗಳು ಆರಂಭವಾಗಲಿರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾರೆಲ್ಲ ಹೋಗಬಹುದಂತೆ ಗೊತ್ತೇ?? ವಿವಾದಿತ ವ್ಯಕ್ತಿಗಳೇ ಜಾಸ್ತಿಯಾದರೆ??

77

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮನರಂಜನೆ ವಿಚಾರದಲ್ಲೇ ಆಗಲಿ ಅಥವಾ ಮೇಕಿಂಗ್ ವಿಚಾರದಲ್ಲೇ ಆಗಲಿ ಕನ್ನಡ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮ. ಈಗಾಗಲೇ ಎಂಟು ಸೀಸನ್ ಗಳು ಮುಗಿದಿದ್ದು ಇನ್ನೇನು ಕೆಲವೇ ಸಮಯಗಳಲ್ಲಿ 9ನೇ ಸೀಸನ್ ಆರಂಭವಾಗಲಿದೆ. ಇನ್ನು ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಬಿಗ್ ಬಾಸ್ ಸೀಸನ್ 9ರಲ್ಲಿ ಯಾರೆಲ್ಲಾ ಭಾಗವಹಿಸಬಹುದು ಎನ್ನುವ ಸಂಭಾವ್ಯರ ಪಟ್ಟಿಯಲ್ಲಿ ಹಲವಾರು ಪ್ರಖ್ಯಾತ ಹೆಸರು ಕೂಡ ಶಾಮೀಲಾಗಿದೆ. ಹಾಗಿದ್ದರೆ ಈ ಲಿಸ್ಟಿನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಚೇತನ್: ಆ ದಿನಗಳು ಖ್ಯಾತಿಯ ನಟ ಚೇತನ್ ಕುಮಾರ್ ರವರು ಸಿನಿಮಾರಂಗದಲ್ಲಿ ನಟನೆಗಿಂತ ಹೆಚ್ಚಾಗಿ ವಿವಾ’ದಗಳಲ್ಲಿ ಸುದ್ದಿಯಾಗಿರುವುದು ಹೆಚ್ಚು. ಇತ್ತೀಚಿಗಷ್ಟೆ ಕೂಡ ಬಂಧನವನ್ನು ಎದುರಿಸಿ ಜೈಲುವಾಸವನ್ನು ಕೂಡ ಅನುಭವಿಸಿದ್ದರು. ಹಲವಾರು ಹೋರಾ’ಟಗಳಲ್ಲಿ ಆಗಾಗ ಭಾಗವಹಿಸುತ್ತಲೇ ಇರುತ್ತಾರೆ. ಇವರನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಕೂಡ ಕಾಣಬಹುದಾಗಿದೆ ಎಂಬ ಸುದ್ದಿಗಳು ದಟ್ಟವಾಗಿ ಹರಿದಾಡುತ್ತಿವೆ.

ದಿವ್ಯ ವಸಂತ; ಕೆಲವು ಸಮಯಗಳ ಹಿಂದೆ ಇವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸಕತ್ತಾಗಿ ಸೌಂಡ್ ಮಾಡಿತ್ತು. ಬಿಟಿವಿ ವಾಹಿನಿ ನಿರೂಪಕರಾಗಿರುವ ಇವರು ಅಮೂಲ್ಯ ರವರ ಪ್ರೆಗ್ನೆಂಟ್ ವಿಚಾರವನ್ನು ಹಬ್ಬದಂತೆ ತಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿರುವ ಹಿನ್ನೆಲೆಯಲ್ಲಿ ಟೀಕೆಗೆ ಒಳಗಾಗಿದ್ದರು. ನಂತರ ಟೀಕೆಯನ್ನೇ ಇವರು ತಮ್ಮ ಪ್ರಚಾರಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ. ಇವರು ಕೂಡ ಬಿಗ್ ಬಾಸ್ ನಲ್ಲಿ ಕಾಣಬಹುದಾದ ಸಾಧ್ಯತೆಗಳಿವೆ.

ಸೋನು ಶ್ರೀನಿವಾಸಗೌಡ; ಟಿಕ್ ಟಾಕ್ ಮೂಲಕ ಫೇಮಸ್ ಆಗಿರುವ ಸೋನು ಶ್ರೀನಿವಾಸಗೌಡ ರವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲವರ್ಸ್ ಗಳನ್ನು ಹೊಂದಿದ್ದಾರೆ. ಆದರೆ ಸರಿಯಾಗಿ ಕನ್ನಡ ಮಾತನಾಡಲು ಬರದೆ ಇರುವ ಕಾರಣದಿಂದಾಗಿ ಯಾವಾಗಲೂ ಟೀಕೆಗೆ ಒಳಗಾಗುತ್ತಲೇ ಇರುತ್ತಾರೆ. ಇವರು ಕೂಡ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತಕ್ಕೆ ಬರಬಹುದಾದ ಚಾನ್ಸ್ ಇದೆ.

ಜಗದೀಶ್; ಇತ್ತೀಚಿನ ದಿನಗಳಲ್ಲಿ ಲಾಯರ್ ಜಗದೀಶ್ ಎಂದೇ ಖ್ಯಾತರಾಗಿರುವ ಜಗದೀಶ ರವರು ಕೂಡ ಈ ಬಾರಿಯ ಬಿಗ್ ಬಾಸ್ ಗೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸೌಂಡ್ ಮಾಡುತ್ತಿದೆ. ಈಗಾಗಲೇ ಹಲವಾರು ವಿವಾ’ದಗಳಲ್ಲಿ ತೊಡಗಿಕೊಂಡಿರುವ ಇವರು ಬಿಗ್ ಬಾಸ್ ಮನೆಯಲ್ಲಿ ಬಂದರು ಕೂಡ ಕಾಂಟ್ರ’ವರ್ಸಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಲೋಕ್; ಪ್ರತಿ ಸೀಸನ್ನಲ್ಲಿ ಕೂಡ ಒಬ್ಬ ಹಾಡುಗಾರ ಖಂಡಿತವಾಗಿ ಬಿಗ್ಬಾಸ್ ಮನೆಯನ್ನು ಪ್ರವೇಶಿಸುತ್ತಲೇ ಇರುತ್ತಾರೆ. ಈ ಬಾರಿ ಕನ್ನಡದ ಖ್ಯಾತ ಮ್ಯೂಸಿಷಿಯನ್ ಆಗಿರುವ ಮತ್ತು ರಾಪ್ ಗಾಯಕರಾಗಿರುವ ಅಲೋಕ್ ರವರು ಬಿಗ್ ಬಾಸ್ ಮನೆಯನ್ನು ಪ್ರವೇಶಿಸಲಿದ್ದಾರೆ ಎಂಬ ಸುದ್ದಿಗಳು ಕೂಡ ಸತ್ಯಕ್ಕೆ ಹತ್ತಿರವಾದದ್ದು. ಆದರೆ ಅಧಿಕೃತವಾಗಿ ಅನೌನ್ಸ್ ಅದಾಗಲೇ ಗೊತ್ತಾಗೋದು ಹೋಗ್ತಾರೆ ಇಲ್ವಾ ಎನ್ನೋದು. ಆದರೆ ಇವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಲು ಕಾದಿರುವ ಅಭಿಮಾನಿಗಳ ಸಂಖ್ಯೆ ಮಾತ್ರ ದೊಡ್ಡದಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡದ ಸಂಗೀತ ಕ್ಷೇತ್ರದ ಮಾಡರ್ನ್ ಕಿಂಗ್ ಅಲೋಕ ಎಂದರೂ ಕೂಡ ತಪ್ಪಾಗಲಾರದು.

ರೂಪೇಶ್ ರಾಜಣ್ಣ; ಕನ್ನಡ ಭಾಷೆ ನೆಲ ನುಡಿ ಎಂದು ಬಂದಾಗ ಯಾವುದೇ ಹೋರಾಟ ವಿರಲಿ ಯಾರ ವಿರುದ್ಧವೇ ಹೋರಾಟ ವಿರಲಿ ರೂಪೇಶ್ ರಾಜಣ್ಣ ಮುಂದಾಳತ್ವವನ್ನು ವಹಿಸಿಕೊಂಡು ಮುಂದೆ ನಿಲ್ಲುತ್ತಾರೆ. ಹೀಗಾಗಿ ಅವರನ್ನು ಕೂಡ ಕನ್ನಡ ಕಿರುತೆರೆ ಅತ್ಯಂತ ದೊಡ್ಡ ರಿಯಾಲಿಟಿ ಶೋನಲ್ಲಿ ನೋಡಬೇಕೆಂಬುದಾಗಿ ಎಲ್ಲರೂ ಕಾತರರಾಗಿದ್ದಾರೆ.

ನಜ್ಮಾ ಚಿಕ್ಕನೇರಳೆ; ಸದಾಕಾಲ ಸೋಶಿಯಲ್ ಮಾಡಿದರೆ ಸುದ್ದಿಯಲ್ಲಿರುವ ನಜ್ಮಾ ಚಿಕ್ಕನೇರಳೆ ರವರು ಹಲವಾರು ವಿಚಾರಗಳಿಗಾಗಿ ಚರ್ಚೆಯಲ್ಲಿ ಕೂಡ ಕಾಣಸಿಗುತ್ತಾರೆ. ಸಾಮಾಜಿಕವಾಗಿ ನಡೆಯುವಂತಹ ಹಲವಾರು ವಿಚಾರಗಳ ಕುರಿತಂತೆ ಕೂಡ ಸುದ್ದಿಯಲ್ಲಿರುವ ನಜ್ಮಾ ಚಿಕ್ಕನೇರಳೆ ರವರು ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಬಹುದಾಗಿದೆ.

ರಾಘವೇಂದ್ರ; ಮಜಾ ಭಾರತ ರಾಘವೇಂದ್ರ ಎಂದೇ ಕರೆಸಿಕೊಳ್ಳುವ ಇವರು ಸ್ತ್ರಿಪಾತ್ರದಲ್ಲಿ ಆಗಾಗ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗಾಗಿ ಇವರನ್ನು ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣುವ ಸಾಧ್ಯತೆ ಇದೆ. ಇವರೇ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣುವ ಸಂಭಾವ್ಯರ ಪಟ್ಟಿಯಲ್ಲಿ ಕಾಣಸಿಗುವ ಸೆಲೆಬ್ರಿಟಿಗಳು. ಇವರಲ್ಲಿ ಯಾರೆಲ್ಲ ಬರಬಹುದು ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.