ದ್ರಾವಿಡ್ ರೋಹಿತ್ ಮಾಸ್ಟರ್ ಪ್ಲಾನ್, 2023ರ ವಿಶ್ವಕಪ್ ಗೆ ಭಾರತ ತಂಡ ಹೇಗೆ ಸಿದ್ಧವಾಗಿದೆ ಗೊತ್ತೇ?? ಸಂಭಾವ್ಯ ಹನ್ನೊಂದರ ಬಳಗ ಹೇಗಿದೆ ಗೊತ್ತೇ??

ದ್ರಾವಿಡ್ ರೋಹಿತ್ ಮಾಸ್ಟರ್ ಪ್ಲಾನ್, 2023ರ ವಿಶ್ವಕಪ್ ಗೆ ಭಾರತ ತಂಡ ಹೇಗೆ ಸಿದ್ಧವಾಗಿದೆ ಗೊತ್ತೇ?? ಸಂಭಾವ್ಯ ಹನ್ನೊಂದರ ಬಳಗ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ತಂಡ ಕ್ರಿಕೆಟ್ ಆಡುವ ಎಲ್ಲಾ ರಾಷ್ಟ್ರಗಳ ವಿರುದ್ದ ಜಯಿಸಿದರೂ, ಹಲವಾರು ವರ್ಷಗಳಿಂದ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಈ ವರ್ಷದ ಅಂತ್ಯದಲ್ಲಿ ಟಿ೨೦ ವಿಶ್ವಕಪ್, ಮುಂದಿನ ವರ್ಷ ಏಕದಿನ ವಿಶ್ವಕಪ್ ಹೀಗೆ ಎರಡು ಮಹತ್ವದ ಸರಣಿಗಳು ಎದುರು ಬರುತ್ತಿವೆ. ಹಾಗಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಮುಂದೆ ಬಹುದೊಡ್ಡ ಗುರಿ ಇದೆ. ಮಹತ್ವದ ಕಪ್ ಗೆಲ್ಲಲು ಭಾರತ ತಂಡ ಭರದ ಸಿದ್ಧತೆಗಳನ್ನು ನಡೆಸುತ್ತಿದೆ.

ಸದ್ಯ ಭಾರತ ತಂಡದ ಬ್ಯಾಟಿಂಗ್ ಶಕ್ತಿ ಅದ್ಭುತವಾಗಿದೆ. ವಿಶ್ವಕಪ್ ಗೆಂದು ಐವರು ತಜ್ಞ ಬ್ಯಾಟ್ಸ್ಮನ್ ಗಳು, ಇಬ್ಬರು ಆಲ್ ರೌಂಡರ್ ಗಳು ನಾಲ್ವರು ತಜ್ಞ ಬೌಲರ್ ಗಳನ್ನು ಹುಡುಕುತ್ತಿದೆ. ಬನ್ನಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಂಭವನೀಯ ಸದಸ್ಯರು ಯಾರು ಎಂಬುದನ್ನು ತಿಳಿಯೋಣ.

ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಕಣಕ್ಕಿಳಿಯಬಹುದು. ಶಿಖರ್ ಗೆ ವಯಸ್ಸಾದರೂ ಏಕದಿನ ಪಂದ್ಯಗಳಲ್ಲಿ ಉತ್ತಮ ಸರಾಸರಿ ಹೊಂದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಎಂದಿನಂತೆ ವಿರಾಟ್ ಕೊಹ್ಲಿ ಆಡಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್, ಐದನೇ ಕ್ರಮಾಂಕದಲ್ಲಿ ವಿಕೇಟ್ ಕೀಪರ್ ರಿಷಭ್ ಪಂತ್, ಆರನೇ ಕ್ರಮಾಂಕದಲ್ಲಿ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅಥವಾ ಸೂರ್ಯ ಕುಮಾರ್ ಯಾದವ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಏಳನೇ ಕ್ರಮಾಂಕದಲ್ಲಿ ಆಲ್ ರೌಂಡರ್ ಗಳಾದ ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್ , ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯುವ ಸಾಧ್ಯತೆ ಇದೆ.

ಎಂಟನೇ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್ ರಲ್ಲಿ ಒಬ್ಬರು ಆಡಬಹುದು. ಒಂಬತ್ತನೇ ಕ್ರಮಾಂಕದಲ್ಲಿ ವೇಗಿ ಜಸಪ್ರಿತ್ ಬುಮ್ರಾ ಆಡುವ ನೀರಿಕ್ಷೆ ಇದೆ. ಹತ್ತನೇ ಕ್ರಮಾಂಕದಲ್ಲಿ ಸ್ಪಿನ್ನರ್ ಯುಜವೇಂದ್ರ ಚಾಹಲ್ ಆಡಲಿದ್ದಾರೆ. ಹನ್ನೊಂದನೇ ಕ್ರಮಾಂಕದಲ್ಲಿ ವೇಗಿ ಮಹಮದ್ ಸಿರಾಜ್, ಮಹಮದ್ ಶಮಿ, ಪ್ರಸಿದ್ದ್ ಕೃಷ್ಣ ಬಳಿ ಒಬ್ಬರೂ ಆಡಬಹುದು. ಈ ಹೆಸರುಗಳಲ್ಲದೇ ಬೇರೆ ಯಾವುದಾದರೊಂದು ಹೆಸರು ಸೇರುವುದು ಕಷ್ಟ ಸಾಧ್ಯ. ಈ ತಂಡದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

ತಂಡ ಇಂತಿದೆ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ವೆಂಕಟೇಶ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜವೇಂದ್ರ ಚಾಹಲ್, ಜಸಪ್ರಿತ್ ಬುಮ್ರಾ,ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಮಹಮದ್ ಸಿರಾಜ್,ಮಹಮದ್ ಶಮಿ, ಪ್ರಸಿದ್ದ್ ಕೃಷ್ಣ, ಕುಲದೀಪ್ ಯಾದವ್.