ತಾಜ್ ಮಹಲ್ ಅನ್ನು ಹಿಂದಿಕ್ಕಿದೆ ಮೈಸೂರು ಅರಮನೆ, ‘ಅಂಬಾ ವಿಲಾಸ’ಕ್ಕೆ ಸಿಕ್ಕಿತು ಮತ್ತೊಂದು ಮನ್ನಣೆ. ಏನು ಗೊತ್ತೇ??
ತಾಜ್ ಮಹಲ್ ಅನ್ನು ಹಿಂದಿಕ್ಕಿದೆ ಮೈಸೂರು ಅರಮನೆ, ‘ಅಂಬಾ ವಿಲಾಸ’ಕ್ಕೆ ಸಿಕ್ಕಿತು ಮತ್ತೊಂದು ಮನ್ನಣೆ. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಮೈಸುರು ಅಂದ ಕೂಡಲೇ ಎಲ್ಲರಿಗೂ ಕಣ್ಮುಂದೆ ಬರೋದು ಅಂದ್ರೆ ಮೈಸೂರ್ ಪಾಕ್, ಮೈಸುರು ಅಲ್ಲಿಗೆ, ಮೈಸೂರು ಸಿಲ್ಕ್, ಮೈಸೂರ್ ಸ್ಯಾಂಡಲ್ ಹಾಗೂ ಮೈಸೂರು ಅರಮನೆ ಅಲ್ವಾ?! ಇದೀಗ ಮೈಸೂರು ಅಂದ್ರೆ ಕರ್ನಾಟಕದವರಿಗೆ ಮಾತ್ರವಲ್ಲ ವಿಶ್ವವೇ ಗುರುತಿಸುವ ಮಟ್ಟದಲ್ಲಿ ವಿಶ್ವ ಮನ್ನಣೆ ಪಡೆದಿದೆ ನಮ್ಮ ಹೆಮ್ಮೆಯ ಮೈಸೂರು ಅಂಬಾ ವಿಲಾಸ!
ಹೌದು ಅರಮನೆ ನಗರಿ ಮೈಸೂರು ಇದು ಜಗತ್ತಿನಾದ್ಯಂತ ಹೆಸರಾಗಿರುವ ಪ್ರವಾಸಿ ತಾಣವಾಗಿದೆ. ಗೂಗಲ್ ಪಟ್ಟಿಯಲ್ಲಿ ಹೆಚ್ಚು ರಿವ್ಯೂ ಮಾಡಲಾದ 20 ತಾಣಗಳ ಪಟ್ಟಿಯಲ್ಲಿ ಮೈಸೂರು ಅರಮನೆ 15ನೆ ಸ್ಥಾನವನ್ನು ಗಳಿಸಿ, ಪ್ರೇಮ ಸೌಧ ತಾಜ್ ಮಹಲ್ ನ್ನು ಕೂಡ ಹಿಂದಿಕ್ಕಿದೆ. ಹೌದು, www.ಟಾಪ್-rated.online ವೆಬ್ ಸೈಟ್ ಈ ಪಟ್ಟಿಯನ್ನು ಪ್ರಕಟಿಸಿದ್ದು, ಮೈಸೂರು ಅರಮನೆಗೆ 1.93 ಲಕ್ಷ ಹಾಗೂ ಪ್ರೇಮಸೌಧ ತಾಜ್ ಮಹಲ್ಗೆ 1.87 ಲಕ್ಷ ರೀವ್ಯೂ ಮತ ಬಂದಿದೆ. ಇನ್ನು ಮೆಕ್ಕಾದ ಮಸೀದ್ ಅಲ್ ಹರಮ್ 3.31 ಲಕ್ಷ ರಿವ್ಯೂ ಪಡೆದು ಮೊದಲ ಸ್ಥಾನ ಪಡೆದಿದ್ದರೆ, ಮುಂಬೈನ ಗೈಟ್ ವೇ ಆಫ್ ಇಂಡಿಯಾ 2.58 ಲಕ್ಷ ಪರಾಮರ್ಶೆಯಿಂದ 5ನೇ ಸ್ಥಾನದಲ್ಲಿದೆ. ನವದೆಹಲಿಯ ಇಂಡಿಯಾ ಗೇಟ್ ಗೆ 2.01 ಲಕ್ಷ ರಿವ್ಯೂ ಲಭಿಸಿದ್ದು 14ನೇ ಸ್ಥಾನದಲ್ಲಿದೆ.
ಮೈಸೂರು ಅರಮನೆ ಅತ್ಯಂತ ಆಕರ್ಷಣಿಯವಾಗಿದ್ದು ಬ್ರಿಟೀಷರ ಕಾಲದಲ್ಲಿಯೇ ನಿರ್ಮಾಣಗೊಂಡಿದೆ. ಇದೀಗ ವಿಶ್ವ ತಾಣಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು, ಇದರ ಮಹತ್ವ ಇನ್ನಷ್ಟು ಹೆಚ್ಚಲಿದೆ. ದಸರೆ, ಮಾಗಿ ಉತ್ಸವ, ಯುಗಾದಿ ಸಂಗೀತ, ಯೋಗ ದಿನ ಹೀಗೆ ಅರಮನೆಯಲ್ಲಿ ವರ್ಷಕ್ಕೆ 4ನೇ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಾರದಲ್ಲಿ 6 ದಿನ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತಿದ್ದು, ಪ್ರವಾಸಿಗರಿಗೆ ಬಹಳ ಅಚ್ಚುಮೆಚ್ಚಿನ ತಾಣ ಎನಿಸಿದೆ. ಮೈಸೂರಿನಲ್ಲಿರುವ ಅರಮನೆಗಳಲ್ಲಿ ಅಂಬಾ ವಿಲಾಸ ಅತ್ಯಂತ ಮನಮೋಹಕವಾಗಿರುವಂಥ ಅರಮನೆಯಾಗಿದೆ. ಇಲ್ಲಿನ ಪ್ರತಿಯೊಂದು ಬಾಗಿಲುಗಳು, ಗಾಜಿನ ಕಿಟಕಿ, ಆ ಅದ್ಭುತವಾದ ಆಸನಗಳು, ಕಣ್ಣುಕುಕ್ಕುವಂಥ ಶಿಲಾನ್ಯಾಸ ಇವೆಲ್ಲವೂ ಮೈಸೂರಿಗೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಅರಮನೆಯನ್ನು ದಸರಾ ಸಮಯದಲ್ಲಿ ನೋಡುವುದೇ ಒಂದು ಸಂಭ್ರಮ. ಇಲ್ಲಿ ಒಟ್ಟೂ 97ಸಾವಿರ ದೀಪಾಲಂಕಾರಗಳಿವೆ. ಒಟ್ಟಾರೆಯಾಗಿ ಹೇಳುವುದಾದರೆ ಮೈಸೂರು ಸದಾ ಬೆಳಕಿನಿಂದ ಕಂಗೊಳಿಸುತ್ತಿರುತ್ತದೆ.