22 ವರ್ಷದ ಯುವತಿ ತಿಂಗಳಿಗೆ 6 ಲಕ್ಷ ರೂಪಾಯಿ ಸಂಪಾದಿಸುತ್ತಾರೆ, ಈ ಉದ್ಯಮ ನೀವು ಕೂಡ ಆರಂಭಿಸಿ ಹಣಗಳಿಸಿ, ಎಷ್ಟೆಲ್ಲಾ ಲಾಭ ಇದೆ ಗೊತ್ತೇ??

22 ವರ್ಷದ ಯುವತಿ ತಿಂಗಳಿಗೆ 6 ಲಕ್ಷ ರೂಪಾಯಿ ಸಂಪಾದಿಸುತ್ತಾರೆ, ಈ ಉದ್ಯಮ ನೀವು ಕೂಡ ಆರಂಭಿಸಿ ಹಣಗಳಿಸಿ, ಎಷ್ಟೆಲ್ಲಾ ಲಾಭ ಇದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ಹೆಚ್ಚಾಗಿ ಉದ್ಯೋಗಗಳಿಗಿಂತಲೂ ಉದ್ಯಮಗಳಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಉದ್ಯೋಗಿ ನಿಮ್ಮದೇ ಸ್ವಂತ ವ್ಯವಹಾರವನ್ನು ಆರಂಭಿಸಿದರೆ ಅದರಲ್ಲಿ ಆದಾಯವೂ ಹೆಚ್ಚು. ಸ್ವ-ಉದ್ಯೋಗ ಮಾಡಿದ ಖುಷಿಯೂ ಹೆಚ್ಚು. ಹೀಗೆ ಈ ಸ್ವಂತ ವ್ಯವಹಾರವನ್ನು ಆರಂಭಿಸಿ ತಿಂಗಳಿಗೆ ಆರು ಲಕ್ಷ ರೂಪಾಯಿ ಸಂಪಾದನೆಯನ್ನು ಮಾಡುತ್ತಿದ್ದಾರೆ 22 ವರ್ಷದ ಶ್ರದ್ಧಾ ಧವನ್.

ಹೌದು, ಮಹಾರಾಷ್ಟ್ರದ ನಿಘೋಷ್ ನಿವಾಸಿ ಶ್ರದ್ಧಾ ಧವನ್ ಕುಟುಂಬ ವ್ಯವಹಾರಕ್ಕೆ ಕೈ ಜೋಡಿಸಿದರು. 1998 ರಲ್ಲಿ ಕೇವಲ ಒಂದು ಎಮ್ಮೆಯನ್ನು ಶ್ರದ್ಧಾ ಅವರ ಮನೆಯಲ್ಲಿ ಸಾಕಿದ್ದರು. ಇದರಿಂದ ಡೈರಿ ಬ್ಯುಸಿನೆಸ್ ನ್ನೂ ಮಾಡಲು ಸಾಧ್ಯವಿರಲಿಲ್ಲ. ಕ್ರಮೇಣ ಎಮ್ಮೆಯನ್ನು ಜಾಸ್ತಿ ಸಾಕಿ, ಡೈರಿಗೆ ಹಾಲನ್ನು ಕಳುಹಿಸುವ ವ್ಯವಹಾರ ಆರಂಭಿಸಿದರು. 2012ರಲ್ಲಿ ಶುದ್ಧ ತಾನೇ ಸ್ವತಃ ಸೈಕಲ್ ತುಳಿದು ಹಾಲಿನ ಡೈರಿ ಗೆ ಹಾಲನ್ನು ಹಾಕುವ ಕೆಲಸವನ್ನು ಮಾಡುತ್ತಿದ್ದರು.

ಶೃದ್ದಾ ಅವರ ಬುದ್ಧಿವಂತಿಕೆ ಹಾಗೂ ಮನೆಯವರ ಸಾಥ್ ನಿಂದಾಗಿ, ಇದೀಗ 80 ಎಮ್ಮೆಗಳು ಹಾಗೂ ಎರಡಂತಸ್ತಿನ ಹಾಲಿನ ಡೈರಿ ಯನ್ನು ಮಾಡಿ ಶೃದ್ಧಾ ಸ್ವ-ಉದ್ಯೋಗವನ್ನು ಮಾಡುತ್ತಿದ್ದಾರೆ. ಅಲ್ಲದೆ ತಿಂಗಳಿಗೆ ಆರು ಲಕ್ಷಕ್ಕೂ ಅಧಿಕ ಆದಾಯವನ್ನು ಗಳಿಸುತ್ತಾರೆ. 2012ರಲ್ಲಿ ಶೃದ್ಧಾ ತನ್ನ ಬೈಕ್ ನ ಮೂಲಕ ಹಾಲು ಮಾರಾಟ ಮಾಡಲಿ ಶುರು ಮಾಡಿದರು. ಆಗಿನ ಕಾಲದಲ್ಲಿ ಆ ಊರಿನಲ್ಲಿ ಬೈಕ್ ಓಡಿಸುತ್ತಿದ್ದ ಏಕೈಕ ಹುಡುಗಿ ಆಕೆಯಾಗಿದ್ದಳು. ಮೊದಲಿಗಿಂತಲೂ ವೇಗವಾಗಿ ಹಾಲು ವಿತರಣೆ ಮಾಡುವ ಸಲುವಾಗಿ ಈ ಮಾರ್ಗವನ್ನು ಆಯ್ದುಕೊಂಡಿದ್ದರು ಶೃದ್ಧಾ. ಹಾಲು ಹಾಕಿ ಶಾಲೆಗೆ ಹೋಗುತ್ತಿದ್ದ ಶೃದ್ಧಾ, ಮೊದಲು ಸೈಕಲ್ ನಲ್ಲಿಯೂ, ನಂತರ ಬೈಕ್ ನಲ್ಲಿಯೂ ಕೊನೆಗೆ 150 ಲೀಟರ್ ಹಾಲು ಮಾರುತ್ತಿದ್ದ ಶ್ರದ್ಧಾ ಈಗ ತಿಂಗಳಿಗೆ 6 ಲಕ್ಷ ಹಣ ಗಳಿಸುತ್ತಿದ್ದಾರೆ. ನೀವೂ ಕೂಡ ಹಳ್ಳಿಗಳಲ್ಲಿ ಸ್ವ ಉದ್ಯೋಗ ಆರಿಸಿಕೊಳ್ಳುವುದಾದರೆ, ಹೈನುಗಾರಿಕೆ ಅತ್ಯಂತ ಉತ್ತಮ ಆದಾಯ ನೀಡುವ ವ್ಯವಹಾರವಾಗಿದೆ.