ಐಪಿಎಲ್ ಆರಂಭಕ್ಕೂ ಮುನ್ನವೇ ಬಾರಿ ವಿಘ್ನಗಳು ಆರಂಭ, ಆರ್ಸಿಬಿ ಗೆ ಶಾಕ್ ಬೆನ್ನಲ್ಲೇ ಇದೀಗ ಚೆನ್ನೈ ತಂಡಕ್ಕೆ ಶಾಕ್. ಕೋಟಿ ಕೋಟಿ ಕೊಟ್ಟರು ಕೆಲಸಕ್ಕೆ ಬಾರದೇ??

ಐಪಿಎಲ್ ಆರಂಭಕ್ಕೂ ಮುನ್ನವೇ ಬಾರಿ ವಿಘ್ನಗಳು ಆರಂಭ, ಆರ್ಸಿಬಿ ಗೆ ಶಾಕ್ ಬೆನ್ನಲ್ಲೇ ಇದೀಗ ಚೆನ್ನೈ ತಂಡಕ್ಕೆ ಶಾಕ್. ಕೋಟಿ ಕೋಟಿ ಕೊಟ್ಟರು ಕೆಲಸಕ್ಕೆ ಬಾರದೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಈ ಭಾರಿಯ ಸೀಸನ್ ಮತ್ತಷ್ಟು ರಂಗೇರಲಿದೆ. ಹೊಸದಾಗಿ ಎರಡು ತಂಡ ಸೇರಿಕೊಂಡಿರುವ ಕಾರಣ, ಟೂರ್ನಿ ರೋಚಕ ಘಟ್ಟಕ್ಕೆ ಸಾಕ್ಷಿಯಾಗಲಿದೆ. ಈ ನಡುವೆ ಐಪಿಎಲ್ ಈ ಭಾರಿ ಕೇವಲ ನಾಲ್ಕು ಕ್ರೀಡಾಂಗಣಗಳಲ್ಲಿ ಮಾತ್ರ ನಡೆಯಲಿದ್ದು, ಪ್ರೇಕ್ಷಕರಿಗೆ ಅವಕಾಶ ಇಲ್ಲ ಎಂಬ ಸುದ್ದಿ ಕೇಳಿ ಬರುತ್ತಿದೆ. ಇದೇ ಮಾರ್ಚ್ ೨೬ ರಿಂದ ಐಪಿಎಲ್ ಆರಂಭಿಸುವುದಾಗಿ ಬಿಸಿಸಿಐ ತಿಳಿಸಿದೆ. ಪೂರ್ಣ ಪ್ರಮಾಣದ ವೇಳಾಪಟ್ಟಿ, ಪ್ಲೇ ಆಫ್ ಪಂದ್ಯ ನಡೆಯುವ ಸ್ಥಳಗಳ ಬಗ್ಗೆ ಅಂತಿಮ ಮಾಹಿತಿ ಬರಬೇಕಿದೆ.

ಈ ಶುಭ ಸುದ್ದಿಯ ನಡುವೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಹರಾಜಿಗಿಂತ ಮುಂಚಿತವಾಗಿ ನಾಯಕ ಎಂ.ಎಸ್.ಧೋನಿ, ರುತುರಾಜ್ ಗಾಯಕ್ವಾಡ್, ಮೋಯಿನ್ ಅಲಿ ಹಾಗೂ ರವೀಂದ್ರ ಜಡೇಜಾ ರವರನ್ನು ರಿಟೇನ್ ಮಾಡಿತ್ತು. ಆ ನಂತರ ಹರಾಜಿನಲ್ಲಿ ದೀಪಕ್ ಚಾಹರ್, ಆಡಂ ಮಿಲ್ನೆ, ರಾಬಿನ್ ಉತ್ತಪ್ಪ,ಮುಂತಾದ ಘಟಾನುಘಟಿಗಳನ್ನು ಖರೀದಿಸಿತ್ತು.ಈ ಭಾರಿಯೂ ಸಹ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿತ್ತು. ಆದರೇ ಈಗ ಬರಸಿಡಿಲಿನಂತಹ ವಿಷಯವೊಂದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಪ್ಪಳಿಸಿದೆ.

ಹೌದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದ ದೀಪಕ್ ಚಾಹರ್ ಗಾಯದ ಕಾರಣ ಸದ್ಯ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಗಾಯದ ಕಾರಣ ಎಂದು ಹೇಳಲಾಗಿತ್ತು. ಮೊದಲು ಸಣ್ಣ ಪ್ರಮಾಣದ ಗಾಯ ಎಂದು ಊಹಿಸಲಾಗಿತ್ತು.ಆದರೇ ಈಗ ಗಾಯದ ನಿಜವಾದ ಪ್ರಮಾಣ ತಿಳಿದಿದ್ದು, ದೀಪಕ್ ಚಾಹರ್ ರವರಿಗೆ ಗಂಭೀರ ಗಾಯವಾಗಿದ್ದು, ಅವರು ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ ಎರಡು ತಿಂಗಳು ಬೇಕು ಎಂದು ಹೇಳಲಾಗಿದೆ. ಒಂದು ವೇಳೆ ಹಾಗೆ ನಡೆದದ್ದೇ,ಆದರೇ ದೀಪಕ್ ಚಾಹರ್ ಐಪಿಎಲ್ ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬ್ಯಾಡ್ ನ್ಯೂಸ್ ಆಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.