ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ಐಪಿಎಲ್ ಆರಂಭಕ್ಕೂ ಮುನ್ನವೇ ಕೈ ಕೊಟ್ಟ ಐದು ಆಟಗಾರು, ಆರ್ಸಿಬಿ ಗೂ ಕೂಡ ಡಬಲ್ ಶಾಕ್. ನಡೆದ್ದದೇನು ಗೊತ್ತೇ??

65

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇನ್ನೇನು ಮೆಗಾ ಹರಾಜು ಮುಗಿಸಿಕೊಂಡು ಈ ಬಾರಿಯ ಟಾಟಾ ಐಪಿಎಲ್ 2022 ಮಾರ್ಚ್ 26ರಂದು ಪ್ರಾರಂಭವಾಗಲು ಸಿದ್ಧವಾಗಿದೆ. ಇದರ ಮುನ್ನವೇ ಈಗಾಗಲೇ ಕೆಲವು ವಿದೇಶಿ ಆಟಗಾರರು ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದು ಕೇವಲ ಈ ಬಾರಿ ಮಾತ್ರವಲ್ಲ ಹೆಚ್ಚಿನ ಬಾರಿ ಐಪಿಎಲ್ ನಲ್ಲಿ ಎಲ್ಲಾ ತಂಡದ ಆಟಗಾರರು ವಿದೇಶಿ ಆಟಗಾರರನ್ನು ಹೆಚ್ಚಾಗಿ ಅವಲಂಬಿಸುವುದನ್ನು ಕಡಿಮೆ ಮಾಡಿದ್ದಾರೆ. ಯಾಕೆಂದರೆ ಹೆಚ್ಚಿನ ಬಾರಿ ವಿದೇಶಿ ಆಟಗಾರರು ಒಂದೋ ಆರಂಭಿಕ ಪಂದ್ಯಗಳಲ್ಲಿ ಅಲಭ್ಯರಾಗಿರುತ್ತಾರೆ.

ಇಲ್ಲವೇ ಮಧ್ಯದಲ್ಲಿ ಅಥವಾ ಕೊನೆಯ ಭಾಗದಲ್ಲಿ ಕೈಕೊಟ್ಟು ಹೋಗುವುದು ಈ ಹಿಂದೆ ಹಲವಾರು ಬಾರಿ ನಡೆದಿದೆ. ಈಗ ಅದೇ ರಾಮಾಯಣ ಮತ್ತೊಮ್ಮೆ ಈ ಬಾರಿಯ ಐಪಿಎಲ್ ನ ಪ್ರಾರಂಭಿಕ ಪಂದ್ಯಾಟಗಳಲ್ಲಿ ನಡೆಯುವ ಸಾಧ್ಯತೆ ಸ್ಪಷ್ಟವಾಗಿದೆ. ಹೌದು ಈ ಬಾರಿಯ ಐಪಿಎಲ್ ಆರಂಭಿಕ ಪಂದ್ಯಗಳನ್ನು ಐದು ಆಸ್ಟ್ರೇಲಿಯಾ ಆಟಗಾರರು ತಪ್ಪಿಸಿಕೊಳ್ಳಲಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಆಸ್ಟ್ರೇಲಿಯಾದ ಪಾಕಿಸ್ತಾನ ಪ್ರವಾಸ. ಈ ಸರಣಿಗಾಗಿ ಐಪಿಎಲ್ ನಲ್ಲಿ ಆಡುವ ಆಟಗಾರರು ತಂಡದಲ್ಲಿ ಆಯ್ಕೆಯಾಗಿದ್ದಾರೆ. ಹೀಗಾಗಿ ಏಪ್ರಿಲ್ 6ರಂದು ಸರಣಿ ಮುಗಿಸಿಕೊಂಡು ಭಾರತಕ್ಕೆ ಬಂದರು ಕೂಡ ಐದು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಅಂದರೆ ಏಪ್ರಿಲ್ 11ರ ಮೇಲೆ ತಂಡವನ್ನು ಅವರು ಸೇರಿ ಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಆ 5 ಆಟಗಾರರು ಯಾರು ಎನ್ನುವುದನ್ನು ತಿಳಿಯೋಣ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಕಸ್ ಸ್ಟೊಯಿನಿಸ್. ಸನ್ರೈಸರ್ಸ್ ಹೈದರಾಬಾದ್ ತಂಡದ ಸೀನ್ ಅಬೋಟ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೇಸನ್ ಬೆಹ್ರೆಂಡ್ರಫ್. ಪಂಜಾಬ್ ಕಿಂಗ್ಸ್ ತಂಡದ ನಾಥನ್ ಎಲ್ಲಿಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಿಚೆಲ್ ಮಾರ್ಷ್. ಇನ್ನು ಈ ಕಡೆ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಮದುವೆ ಕಾರಣದಿಂದಾಗಿ ಮೊದಲ ಚರಣದ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಇನ್ನು ಡೇವಿಡ್ ವಾರ್ನರ್ ಪ್ಯಾಟ್ ಕಮಿನ್ಸ್ ಹೆಝಲ್ ವುಡ್ ರಂತಹ ಆಟಗಾರರಿಗೆ ಸರಣಿಗೆ ವಿಶ್ರಾಂತಿ ನೀಡಿದ್ದರೂ ಕೂಡ ಮೊದಲ ಪಂದ್ಯಗಳಿಗೆ ಆಟಗಾರರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಭಾಗವಹಿಸಲು ಅನುಮತಿ ನೀಡುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಮೂಲಕ ಎರಡು ವಿದೇಶಿ ಆಟಗಾರರು ಆರ್ಸ್ಬಿ ಗೆ

Get real time updates directly on you device, subscribe now.